ಗಮನಿಸಿ: ರಾಜ್ಯದಲ್ಲಿ ಜುಲೈ 27 ರವರೆಗೆ ಭಾರಿ ಮಳೆ; ಹೀಗಿದೆ ವಿವಿಧ ನಗರಗಳ ಹವಾಮಾನ ವರದಿ

ಭಾರೀ ಮಳೆ ಮೂರು ದಿನಗಳಿಂದ ಬಿಡುವು ಬಿಟ್ಟಿದ್ದು ಮಳೆ ಮತ್ತೆ ಬಿರುಸುಗೊಳ್ಳುವ ಸಾಧ್ಯತೆ ಇದ್ದು, ಕರ್ನಾಟಕದ ಕರಾವಳಿ, ದಕ್ಷಿಣ, ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 27 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ…

rain vijayaprabha news

ಭಾರೀ ಮಳೆ ಮೂರು ದಿನಗಳಿಂದ ಬಿಡುವು ಬಿಟ್ಟಿದ್ದು ಮಳೆ ಮತ್ತೆ ಬಿರುಸುಗೊಳ್ಳುವ ಸಾಧ್ಯತೆ ಇದ್ದು, ಕರ್ನಾಟಕದ ಕರಾವಳಿ, ದಕ್ಷಿಣ, ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 27 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬಾದಾಮಿ, ಬೆಳಗಾವಿ, ಬೆಂಗಳೂರು ನಗರ, ಬೀದರ್, ಚಿತ್ರದುರ್ಗ, ಧಾರವಾಡ, ಗದಗ, ಗೋಕರ್ಣ, ಹಂಪಿ, ಹೊನ್ನಾವರ, ಕಲಬುರ್ಗಿ, ಕಾರವಾರ, ಮಡಿಕೇರಿ, ಮಂಡ್ಯ, ಮಂಗಳೂರು, ಮೈಸೂರು, ರಾಯಚೂರು ಹಾಗೂ ವಿಜಯಪುರ ಸುತ್ತಮುತ್ತ ಮೋಡ ಕವಿದ ವಾತವಾರಣ ಇರಲಿದ್ದು, ಹಗುರ ಮಳೆಯಾಗಲಿದೆ.

ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಮುಂದಿನ 4 ದಿನ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದ್ದು, ಜು 1ರಿಂದ ಜು.22ರವರೆಗೆ ರಾಜ್ಯಾದ್ಯಂತ 392 ಮಿಮೀ ಮಳೆಯಾಗಬೇಕಿತ್ತು. ಆದರೆ, 472 ಮಿಮೀ ಮಳೆಯಾಗಿದ್ದು, ಶೇ.20 ವಾಡಿಕೆಗಿಂತ ಹೆಚ್ಚು ಬಿದ್ದಿದ್ದು, ಶನಿವಾರವೂ ಹಲವೆಡೆ ಮಳೆಯಾಗಿದ್ದು, ಬೀದರ್‌ನಲ್ಲಿ 10 ಸೆಂಮೀ ಮತ್ತು ಕಲಬುರಗಿಯಲ್ಲಿ 6 ಸೆಂಮೀ ಮಳೆ ಬಿದ್ದಿದೆ.

Vijayaprabha Mobile App free

ವಿವಿಧ ನಗರಗಳ ತಾಪಮಾನ:

ಬೆಂಗಳೂರು: 28-20, ಮಂಗಳೂರು: 28-25, ಶಿವಮೊಗ್ಗ: 27-21, ಬೆಳಗಾವಿ: 26-21, ಮೈಸೂರು: 28-21, ಮಂಡ್ಯ: 29-21,ಕೊಡಗು: 22-18,ರಾಮನಗರ: 31-26
ಹಾಸನ: 26-19, ಚಾಮರಾಜನಗರ: 28-21, ಚಿಕ್ಕಬಳ್ಳಾಪುರ: 29-20, ಕೋಲಾರ: 29-21, ತುಮಕೂರು: 29-21, ಉಡುಪಿ: 28-24, ಕಾರವಾರ: 28-25, ಚಿಕ್ಕಮಗಳೂರು: 24-18, ದಾವಣಗೆರೆ: 28-22, ಚಿತ್ರದುರ್ಗ: 29-21, ಹಾವೇರಿ: 28-22, ಬಳ್ಳಾರಿ :33-24, ಗದಗ: 29-22, ಕೊಪ್ಪಳ:31-23, ರಾಯಚೂರು:34-24, ಯಾದಗಿರಿ:33-24, ವಿಜಯಪುರ:33-24, ಬೀದರ್: 30-22, ಕಲಬುರಗಿ:33-23, ಬಾಗಲಕೋಟೆ: 32-23 ಡಿಗ್ರಿ ಸೆಲ್ಸಿಯಸ್ ಇರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.