ದಾವಣಗೆರೆ ಜು.15: 2022-23ನೇ ಸಾಲಿನ ದಾವಣಗೆರೆ ಜಿಲ್ಲೆಯ ಇಲಾಖೆಯ ತೀವ್ರತೆರನಾದ ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ (ರೆಟ್ರೋಫಿಟ್ಮೆಂಟ್ ಸಹಿತ) ಯೋಜನೆಗೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಾವಣಗೆರೆ ಕಛೇರಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ದೈಹಿಕ ವಿಕಲಚೇತನರು ಆ.20 ರ ಒಳಗಾಗಿ ಈ ಕೆಳಕಂಡ ತಾಲ್ಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ (ಒಖW) ಕಛೇರಿಗೆ ಭೇಟಿ ನೀಡಿ ಅರ್ಜಿ ಪಡೆದು ಮೇಲ್ಕಂಡ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ :- ಹೊನ್ನಾಳಿ, ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಶೈಲಜಾ ಕೆ.ಎಂ. ಮೊ.ಸಂ: 9886366809, ಚನ್ನಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಕೆ ಸುಬ್ರಮಣ್ಯಂ ಮೊ.ಸಂ: 9945738141 ಜಗಳೂರು ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಎಂ.ಕೆ.ಶಿವನಗೌಡ ಮೊ.ಸಂ: 9902105734 ಹರಿಹರ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಶಶಿಕಲಾ ಟಿ. ಮೊ.ಸಂ: 9945458058 ದಾವಣಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಚನ್ನಪ್ಪ. ಬಿ ಮೊ.ಸಂ: 9590829024 ಇವರನ್ನು ಸಂಪರ್ಕಿಸಬೇಕೆಂದು ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಕೆ.ಕೆ.ಪ್ರಕಾಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.