ದಾವಣಗೆರೆ-ಹರಿಹರ KSRTC ವಿಭಾಗದಿಂದ ಜೋಗಫಾಲ್ಸ್,ಶಿರಸಿಗೆ ವಿಶೇಷ ಬಸ್: ಜುಲೈ17ರಿಂದ ಆರಂಭ

ದಾವಣಗೆರೆ: ದಾವಣಗೆರೆ, ಹರಿಹರ ಕೆಎಸ್ ಆರ್ ಟಿಸಿ ವಿಭಾಗದಿಂದ ಜೋಗ ಫಾಲ್ಸ್ ಮತ್ತು ಶಿರಸಿಯ ಮಾರಿಕಾಂಭ ದೇವಿ ದರ್ಶನಕ್ಕೆ ವಿಶೇಷ ರಾಜಹಂಸ ಬಸ್ ಸೇವೆ ಜುಲೈ 17 ರಿಂದ ಆರಂಭವಾಗಲಿದ್ದು, ಈ ಸೇವೆ ಪ್ರತಿ…

ದಾವಣಗೆರೆ: ದಾವಣಗೆರೆ, ಹರಿಹರ ಕೆಎಸ್ ಆರ್ ಟಿಸಿ ವಿಭಾಗದಿಂದ ಜೋಗ ಫಾಲ್ಸ್ ಮತ್ತು ಶಿರಸಿಯ ಮಾರಿಕಾಂಭ ದೇವಿ ದರ್ಶನಕ್ಕೆ ವಿಶೇಷ ರಾಜಹಂಸ ಬಸ್ ಸೇವೆ ಜುಲೈ 17 ರಿಂದ ಆರಂಭವಾಗಲಿದ್ದು, ಈ ಸೇವೆ ಪ್ರತಿ ವಾರಂತ್ಯದಲ್ಲಿ ಲಭ್ಯವಿರಲಿದ್ದು, ಜೋಗ ಫಾಲ್ಸ್ ವೀಕ್ಷಣೆಗೆ ಹೋಗುವರು ಈ ಸೇವೆ ಸದುಪಯೋಗ ಪಡೆದುಕೊಳ್ಳಬಹುದು.

ಹೌದು, ದಾವಣಗೆರೆಯಿಂದ ಬೆಳಗ್ಗೆ 7 ಗಂಟೆಗೆ ಹೊರಟು 10. 30ಕ್ಕೆ ಶಿರಸಿ ತಲುಪಿ, ಮಾರಿಕಂಭ ದೇವಿ ದರ್ಶನ ಪಡೆದು 12 ಗಂಟೆಗೆ ಅಲ್ಲಿಂದ ಬಿಟ್ಟು 1. 30 ಕ್ಕೆ ಜೊಗ ಫಾಲ್ಸ್ ತಲುಪಿ, ನಂತರ ಸಂಜೆ 4 ಗಂಟೆಗೆ ಜೋಗದಿಂದ ಬಿಟ್ಟು ರಾತ್ರಿ 8 ಗಂಟೆಗೆ ದಾವಣಗೆರೆ ತಲುಪಲಾಗುವುದು. ದಾವಣಗೆರೆಯಿಂದ ವಯಸ್ಕರಿಗೆ 600 (ಎರಡು ಬದಿಸೇರಿ), ಮಕ್ಕಳಿಗೆ 450 ರೂ ಬಸ್ ದರ ನಿಗದಿ ಮಾಡಲಾಗಿದೆ.

ಇನ್ನು, ಹರಿಹರದಿಂದ ಬೆಳಗ್ಗೆ 7.30 ಹೊರಟು ಸಂಜೆ 7.30ಕ್ಕೆ ಪುನಃ ವಾಪಸ್ ಬರಲಾಗುವುದು. ಹರಿಹರಿಂದ ವಯಸ್ಕರಿಗೆ 575 ಹಾಗೂ ಮಕ್ಕಳಿಗೆ 430 ದರ ನಿಗದಿಪಡಿಸಲಾಗಿದ್ದು, ಮುಂಗಡ ಬುಕ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದ್ದು, ಇಲಾಖೆ ವೆಬ್ ಸೈಟ್ www. Ksrtc. in ನಲ್ಲಿ ಬುಕ್ಕಿಂಗ್ ಮಾಡಬಹುದಾಗಿದ್ದು, ಹರಿಹರ, ದಾವಣಗೆರೆ ಪ್ರವಾಸಿಗರು ಈ ವಿಶೇಷ ಪ್ಯಾಕೇಜ್ ಸೌಲಭ್ಯ ಪಡೆದುಕೊಳ್ಳಬಹುದು ಎಂದು ವಿಭಾಗೀಯ ನಿರ್ದೇಶಕರು ತಿಳಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.