ಕೇಂದ್ರ ಸರ್ಕಾರ PM KUSUM ಯೋಜನೆಯಡಿಯಲ್ಲಿ ರಾಜ್ಯದ ರೈತರಿಗೆ ಸೌರಶಕ್ತಿ ಚಾಲಿತ ನೀರಾವರಿ ಪಂಪ್ ಸೆಟ್‌ಗಳನ್ನು ನೀಡಲು ನಿರ್ಧರಿಸಿದ್ದು, ರಾಜ್ಯದ 10,000 ರೈತರಿಗೆ ರಿಯಾಯಿತಿ ದರದಲ್ಲಿ ಈ ಪಂಪ್‌ಗಳು ಸಿಗಲಿದೆ.
ರೈತರಿಗೆ ಪ್ರತಿ ಸೌರಶಕ್ತಿ ಚಾಲಿತ ನೀರಾವರಿ ಪಂಪ್‌ಸೆಟ್‌ಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ತಲಾ 30% ಹಣವನ್ನು ಒದಗಿಸಲಾಗುತ್ತದೆ. 7 HP ವರೆಗಿನ ಸೋಲಾರ್ ಪಂಪ್‌ಸೆಟ್‌ಗಳನ್ನು ರೈತರು ಪಡೆಯಬಹುದಾಗಿದ್ದು, ಕುಸುಮ್ ಯೋಜನೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ನೋಂದಣಿ ಮಾಡಿಸಿಕೊಂಡು ಇದರ ಲಾಭ ಪಡೆದುಕೊಳ್ಳಬಹುದು.
ಆನ್‌ಲೈನ್ ನೋಂದಣಿ ಮಾಡಿಕೊಳ್ಳುವುದು ಹೇಗೆ :
ಕುಸುಮ್ ಯೋಜನೆಯ ಅಧಿಕೃತ https://kusumyojana.in/applyonline.php ವೆಬ್‌ಸೈಟ್ ಭೇಟಿ ನೀಡಿ ಆನ್‌ಲೈನ್ ನೋಂದಣಿ ಆಯ್ಕೆ ಮಾಡಿಕೊಳ್ಳಿ.
ಅಲ್ಲಿ ಕಾಣಿಸುವ ಅರ್ಜಿಯಲ್ಲಿ ಅಗತ್ಯ ದಾಖಲೆಗಳ ವಿವರಗಳನ್ನು ತುಂಬಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರದ ಪ್ರತಿಯನ್ನು ಸ್ಕ್ಯಾನ್ ಮಾಡಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
ಇನ್ನು, ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡ ದಾಖಲೆಗಳನ್ನು ಪರಿಶೀಲನೆಗಾಗಿ ನೋಂದಣಿ ಮಾಡಿಕೊಂಡ ದಿನಾಂಕದಿಂದ ಐದು ದಿನದೊಳಗಾಗಿ ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಯ ಉಪ ವಿಭಾಗೀಯ ಕಛೇರಿಗಳಲ್ಲಿ ಸಲ್ಲಿಸಬೇಕು.
ಒಂದು ವೇಳೆ ದಾಖಲೆಗಳನ್ನು ಸಲ್ಲಿಸುವುದು ವಿಳಂಭವಾದಲ್ಲಿ ಜೇಷ್ಠತಾ ಪಟ್ಟಿಯಂತೆ ಮುಂದಿನ ಅರ್ಜಿದಾರರನ್ನು ಆಯ್ಕೆಗೆ ಪರಿಗಣಿಸಲಾಗುವುದು.