ಮಳೆಗಾಲದಲ್ಲಿ ನಿಮ್ಮ ಕೂದಲಿನ ಆರೈಕೆ ಹೀಗೆ ಮಾಡಿಕೊಳ್ಳಿ

ಮಳೆಗಾಲದಲ್ಲಿ ವಾತಾವರಣದಲ್ಲಿರುವ ತೇವಾಂಶ ಕೂದಲು ಮತ್ತು ತಲೆಯ ಚರ್ಮಕ್ಕೆ ಹಲವು ರೀತಿಯ ತೊಂದರೆಗಳನ್ನು ಉಂಟು ಮಾಡುವುದಲ್ಲದೆ, ಕೂದಲಿನ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ. ಹೌದು, ವಾತಾವರಣದಲ್ಲಿ ಉಷ್ಣಾಂಶದ ಜತೆಗೆ ತೇವಾಂಶ ಕೂಡ ಸೇರಿಕೊಳ್ಳುವುದರಿಂದ ಚರ್ಮದ…

ಮಳೆಗಾಲದಲ್ಲಿ ವಾತಾವರಣದಲ್ಲಿರುವ ತೇವಾಂಶ ಕೂದಲು ಮತ್ತು ತಲೆಯ ಚರ್ಮಕ್ಕೆ ಹಲವು ರೀತಿಯ ತೊಂದರೆಗಳನ್ನು ಉಂಟು ಮಾಡುವುದಲ್ಲದೆ, ಕೂದಲಿನ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ.

ಹೌದು, ವಾತಾವರಣದಲ್ಲಿ ಉಷ್ಣಾಂಶದ ಜತೆಗೆ ತೇವಾಂಶ ಕೂಡ ಸೇರಿಕೊಳ್ಳುವುದರಿಂದ ಚರ್ಮದ ಮೇಲೆ ಜಿಡ್ಡು ಹೆಚ್ಚಾಗುವುದರಿಂದ ಕೂದಲ ಬಲ ಕಳೆದುಕೊಳ್ಳುವುದರ ಜತೆಗೆ ತಲೆ ಹೊಟ್ಟು ಹೆಚ್ಚಾಗುವ ಸಾಧ್ಯತೆ ಇದೆ.

ನಮ್ಮ ದಿನನಿತ್ಯದ ಆಹಾರದಲ್ಲಿ ಪ್ರೊಟೀನ್‌ ಅಂಶಗಳು ಹೆಚ್ಚಿರುವ ಮೊಟ್ಟೆ, ವಾಲ್‌ನಟ್‌, ಕಡಿಮೆ ಕೊಬ್ಬಿನ ಅಂಶ ಇರುವಂತಹ ಪದಾರ್ಥಗಳು, ದವಸ ಧಾನ್ಯಗಳ ಜತೆಗೆ ಹಸಿರು ತರಕಾರಿಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳುವುದರಿಂದ ಕೂದಲಿಗೂ ಉತ್ತಮವಾದ ಆರೈಕೆ ನೀಡಿದಂತಾಗುತ್ತದೆ.

Vijayaprabha Mobile App free

ಮಳೆ ನೀರಿನಲ್ಲಿ ಒದ್ದೆಯಾಗಿ ದುರ್ಬಲಗೊಂಡಿರುವ ಕೂದಲನ್ನು ಬಾಚುವುದನ್ನೂ ಮೊದಲು ತಪ್ಪಿಸಬೇಕು. ಬಾಚುವುದೇ ಆದರೆ ಅಗಲವಾದ ಹಲ್ಲುಗಳನ್ನು ಹೊಂದಿರುವ ಬಾಚಣಿಗೆಯಲ್ಲಿ ಕೂದಲು ಬಿರುಕಾಗದಂತೆ ಎಚ್ಚರಿಕೆ ವಹಿಸಬೇಕು ಮತ್ತು ಫಂಗಲ್‌ ಇನ್‌ಫೆಕ್ಷ ನ್‌ ಆಗದಂತೆ ತಡೆಯಲು ಬಾಚಣಿಗೆಯನ್ನು ಹಂಚಿಕೊಳ್ಳುವುದನ್ನು ಬಿಡಬೇಕು.

ಎಣ್ಣೆ ಹಚ್ಚಿ ಮಸಾಜ್‌ ಮಾಡುವುದು ಮತ್ತು ತೊಳೆಯುವುದು ಮುಖ್ಯ. ಎಣ್ಣೆ ಹಚ್ಚಿ ಮಸಾಜ್‌ ಮಾಡುವುದು ನಿಮ್ಮ ಕೂದಲಿಗೆ ಅಗತ್ಯವಿರುವುದರಿಂದ ನಿಮ್ಮ ಕೂದಲಿಗೆ ಬೇಕಾದ ಪೋಷಣೆ ಲಭ್ಯವಾಗುವುದಲ್ಲದೆ ಕೂದಲು ಬಲಿಷ್ಠವಾಗುತ್ತದೆ.

ಇನ್ನು, ವಾರದಲ್ಲಿ ಎರಡು ಅಥವಾ ಮೂರು ದಿನ ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡುವುದರಿಂದ ಕೂದಲಿನ ಹೊಳಪು ಹೆಚ್ಚುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.