ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದ ಜಿಎಸ್ಟಿ ಮಂಡಳಿ ಕೆಲವೊಂದು ಬದಲಾವಣೆಗಳನ್ನು ಒಪ್ಪಿಕೊಂಡಿದ್ದು, ಕೆಲವೊಂದು ಸೇವೆ ಮತ್ತು ಉತ್ಪನ್ನಗಳನ್ನು ಜಿಎಸ್ಟಿ ಅಡಿಗೆ ತರಲು ನಿರ್ಧರಿಸಲಾಗಿದೆ.
ಅವುಗಳೆಂದರೆ, ಕಡಿಮೆ ಬಾಡಿಗೆಯ ಹೋಟೆಲ್, ಆಸ್ಪತ್ರೆಯ ಐಸಿಯು ಅಲ್ಲದ ಕೊಠಡಿ, ಚೆಕ್ಬುಕ್, ನಕಾಶೆ, ಬುಕ್ ಪೋಸ್ಟ್, ಪ್ಯಾಕ್ ಮಾಡಲಾದ ಮಾಂಸ, ಮೀನು, ಪನ್ನೀರು, ಹಿಟ್ಟು, ಬೆಲ್ಲ, ಸಾವಯವ ಗೊಬ್ಬರಕ್ಕೆ ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಜಿಎಸ್ಟಿ ವಿಧಿಸಲು ನಿರ್ಧಾರ ಮಾಡಲಾಗಿದೆ.
ವಿನಾಯಿತಿಗೆ ಎಳ್ಳುನೀರು; ಇವು ದುಬಾರಿ!
ಬಾಡಿಗೆ ಹೋಟೆಲ್ ರೂಂಗಳಿಗೆ (1,000 ಕ್ಕಿಂತ ಕಡಿಮೆ) 12% ತೆರಿಗೆ
ಆಸ್ಪತ್ರೆ ಕೊಠಡಿಯ (ICU ಹೊರತುಪಡಿಸಿ) ಬಾಡಿಗೆ ದಿನಕ್ಕೆ 5000ಕ್ಕಿಂತ ಹೆಚ್ಚಿದ್ದರೆ 5% ಜಿಎಸ್ಟಿ
ಮೀನು, ಮಾಂಸ, ಮೊಸರು, ಚೀಸ್, ಜೇನುತುಪ್ಪ, ಬೆಲ್ಲ, ಲೇಬಲ್ ಮಾಡಿದ ಆಹಾರ ಪದಾರ್ಥಗಳ ಮೇಲೆ 5% ತೆರಿಗೆ
ಬ್ಯಾಂಕ್ಗಳು ನೀಡುವ ಚೆಕ್ಗಳ ಮೇಲೆ 18% ಜಿಎಸ್ಟಿ
ಅಂಚೆ ಕಚೇರಿಯ ಎಲ್ಲ ಸೇವೆಗಳಿಗೂ 18% ಜಿಎಸ್ಟಿ
ಬ್ಲೀಡ್ ಬ್ಯಾಂಕ್ ಗಳಿಗೆ ನೀಡಲಾಗಿದ್ದ ತೆರಿಗೆ ವಾಪಾಸ್




