ಐದು ದಿನ ಭಾರಿ ಮಳೆ; ಆರೆಂಜ್‌ ಅಲರ್ಟ್‌ ಘೋಷಣೆ: ಇಂದಿನ ಹವಾಮಾನ ವರದಿ ಹೇಗಿದೆ ನೋಡಿ

ಮುಂದಿನ ಐದಾರು ದಿನಗಳ ಕಾಲ ಭಾರತದ ಪಶ್ಚಿಮ ಕರಾವಳಿ ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೌದು, ಕರ್ನಾಟಕದ ಕರಾವಳಿ ಸೇರಿದಂತೆ ಗೋವಾ, ಮಾಹೆ ಮತ್ತು…

rain vijayaprabha news

ಮುಂದಿನ ಐದಾರು ದಿನಗಳ ಕಾಲ ಭಾರತದ ಪಶ್ಚಿಮ ಕರಾವಳಿ ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಹೌದು, ಕರ್ನಾಟಕದ ಕರಾವಳಿ ಸೇರಿದಂತೆ ಗೋವಾ, ಮಾಹೆ ಮತ್ತು ಲಕ್ಷ ದ್ವೀಪ ಪ್ರದೇಶಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಗುಜರಾತ್‌, ತೆಲಂಗಾಣ ಮತ್ತು ಆಂಧ್ರ ರಾಜ್ಯಗಳಲ್ಲಿ ಚದುರಿದಂತೆ ಮಳೆಯಾಗಲಿದ್ದು, ರಾಜ್ಯದ ಕರಾವಳಿಯಲ್ಲಿ ಹೆಚ್ಚು ಮಳೆ ಬೀಳುವ ಹಿನ್ನೆಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ ಎಂದು ಇಲಾಖೆ ಹೇಳಿದೆ.

Vijayaprabha Mobile App free

ರಾಜ್ಯದ ಇಂದಿನ ಹವಾಮಾನ ವರದಿ:

ರಾಜ್ಯದಲ್ಲಿ ಮುಂಗಾರು ಚುರುಕಾಗಲಿದ್ದು, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಕಾರಣ ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಸೇರಿ ವಿವಿಧ ಕಡೆಗಳಲ್ಲಿ ಮಳೆಯಾಗಲಿದ್ದು, ಕಲಬುರಗಿ, ಕೊಪ್ಪಳ, ಹಾವೇರಿ ಸೇರಿ ವಿವಿಧೆಡೆ ಮಳೆಯಾಗಲಿದೆ.

ಇನ್ನು, ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಪ್ರಮುಖ ಜಿಲ್ಲೆಗಳ ತಾಪಮಾನ:

ಬೆಂಗಳೂರು: 27-20
ಮಂಗಳೂರು: 28-24
ಶಿವಮೊಗ್ಗ: 26-21
ಕೋಲಾರ: 29-21
ತುಮಕೂರು: 28-21
ಉಡುಪಿ: 28-24
ಕಾರವಾರ: 28-26
ಚಿಕ್ಕಮಗಳೂರು: 23-18
ದಾವಣಗೆರೆ: 28-22
ಚಿತ್ರದುರ್ಗ: 28-21
ಹಾವೇರಿ: 28-22
ಯಾದಗಿರಿ: 31-24
ವಿಜಯಪುರ: 29-23
ಬೀದರ್: 28-22
ಕಲಬುರಗಿ: 29-23
ಬಾಗಲಕೋಟೆ: 30-23
ಬಳ್ಳಾರಿ: 31-24
ಗದಗ: 28-22
ಕೊಪ್ಪಳ: 30-23
ರಾಯಚೂರು: 32-24
ಬೆಳಗಾವಿ: 24-21
ಮೈಸೂರು: 28-20
ಮಂಡ್ಯ: 29-21
ಧಾರವಾಡ: 27-24
ಕೊಡಗು: 23-18
ರಾಮನಗರ: 29-21
ಹಾಸನ: 24-19
ಚಾಮರಾಜನಗರ: 29-21
ಚಿಕ್ಕಬಳ್ಳಾಪುರ: 28-20 ಡಿಗ್ರಿ ಸೆಲ್ಸಿಯಸ್ ಇರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.