ಟಾಲಿವುಡ್ ಯುವ ನಟ ನಾಗ ಚೈತನ್ಯ ಮತ್ತು ಶೋಭಿತಾ ಲವ್ ಮೇಜರ್ ಚಿತ್ರದ ಪ್ರಚಾರದ ವೇಳೆಯೂ ಚೈತನ್ಯ, ನಟಿ ಶೋಭಿತಾ ಒಟ್ಟಿಗೆ ಕಾಲ ಕಳೆದಿದ್ದು, ಇಬ್ಬರೂ ಪ್ರೇಮ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ.
ವಿಚ್ಛೇದನಕ್ಕೆ ಇದೇ ಕಾರಣವಾಯ್ತಾ?
ಸಮಂತಾ ರುಥ್ ಪ್ರಭು ಅವರೊಂದಿಗೆ ವಿಚ್ಛೇದನ ಘೋಷಿಸಿದ 8 ತಿಂಗಳ ಬಳಿ ನಾಗಚೈತನ್ಯ ನಟಿ ಶೋಭಿತಾ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದ್ದು, ನಾಗಚೈತನ್ಯ ಅವರ ಹೊಸ ಮನೆಯಲ್ಲಿ ಶೋಭಿತಾ ಅವರೊಂದಿಗೆ ಬಹಳಷ್ಟುಸಮಯ ಕಳೆದಿದ್ದು, ನಂತರ ಇಬ್ಬರೂ ಒಂದೇ ಕಾರಿನಲ್ಲಿ ಹೋಗುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ನಟಿ ಶೋಭಿತಾ ಐಷಾರಾಮಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾಗ ಚೈತನ್ಯ ಆಗಾಗ ಭೇಟಿ ನೀಡುತ್ತಿದ್ದರು ಎನ್ನಲಾಗಿದ್ದು, ನಟಿ ಸಮಂತಾಗೆ ಇವರ ಮೇಲೆ ಅನುಮಾನವಿತ್ತು ಎನ್ನಲಾಗಿದೆ.ಈ ಗಾಸಿಪ್ ಬಗ್ಗೆ ಚೈತನ್ಯ ಹಾಗೂ ಶೋಭಿತಾ ಮೌನ ಮುರಿದಿಲ್ಲ ಹಾಗೇ ಸೈಲೆಂಟ್ ಆಗಿ ಡೇಟಿಂಗ್ ಮಾಡುತ್ತಿದ್ದಾರಂತೆ.
ಚೈತನ್ಯ ಆಪ್ತರು ಹೇಳುವ ಪ್ರಕಾರ ಇವರಿಬ್ಬರು ಒಳ್ಳೆಯ ಸ್ನೇಹಿತರು. ಮಾಡಲ್ ಕಮ್ ನಟಿಯಾಗಿರು ಶೋಭಿತಾ ಹಿಂದಿ, ಮಲಯಾಳಂ ಮತ್ತು ತೆಲುಗು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 2013ರಲ್ಲಿ Femina miss India Earth ಟೈಟಲ್ ಪಡೆದುಕೊಂಡಿದ್ದಾರೆ.