Credit Card-UPI Linking : ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಇನ್ನು ಮುಂದೆ ಕ್ರೆಡಿಟ್ ಕಾರ್ಡ್ಗಳನ್ನು ಯುಪಿಐ ಖಾತೆಗಳಿಗೆ ಲಿಂಕ್ ಮಾಡಲು ಸಹ ಅನುಮತಿಸಲಾಗುವುದು ಎಂದು ಆರ್ಬಿಐ ಪ್ರಕಟಿಸಿದ್ದು, ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ತಮ್ಮ ಹಣಕಾಸು ನೀತಿ ಪ್ರಕಟಣೆಯಲ್ಲಿ ಈ ಘೋಷಣೆ ಮಾಡಿದ್ದಾರೆ.
ದೇಶೀಯ ರೂಪೇ ಕ್ರೆಡಿಟ್ ಕಾರ್ಡ್ಗಳನ್ನು ಯುಪಿಐ ಖಾತೆಗಳಿಗೆ ಲಿಂಕ್ ಮಾಡಲು ಆರಂಭದಲ್ಲಿ ಅನುಮತಿಸಲಾಗುವುದು ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ. ಅದರ ನಂತರ, ಮಾಸ್ಟರ್ಕಾರ್ಡ್ ಮತ್ತು ವೀಸಾದಂತಹ ಇತರ ಕ್ರೆಡಿಟ್ ಕಾರ್ಡ್ಗಳನ್ನು ಸಹ UPI ಖಾತೆಗಳಿಗೆ ಲಿಂಕ್ ಮಾಡಲು ಅನುಮತಿ ನೀಡಲಾಗುವುದು ಎಂದು ಹೇಳಿದ್ದಾರೆ. ಇಲ್ಲಿಯವರೆಗೆ, ಗ್ರಾಹಕರಿಗೆ ಡೆಬಿಟ್ ಕಾರ್ಡ್ಗಳನ್ನು UPI ಖಾತೆಗಳಿಗೆ ಲಿಂಕ್ ಮಾಡಲು ಮಾತ್ರ ಅವಕಾಶವಿತ್ತು. ಈ ನಿರ್ಧಾರದಿಂದ ಡಿಜಿಟಲ್ ಪಾವತಿಗಳು ಹೆಚ್ಚುತ್ತಿವೆ.
‘ಗ್ರಾಹಕರು ಪ್ರಸ್ತುತ ಡೆಬಿಟ್ ಕಾರ್ಡ್ಗಳನ್ನು ತಮ್ಮ ಉಳಿತಾಯ ಮತ್ತು ಚಾಲ್ತಿ ಖಾತೆಗಳನ್ನು ಯುಪಿಐಗೆ ಲಿಂಕ್ ಮಾಡುವ ಮೂಲಕ ವಹಿವಾಟು ಮಾಡಬಹುದಾಗಿತ್ತು. ಇನ್ನು ಮುಂದೆ, UPI ಪ್ಲಾಟ್ಫಾರ್ಮ್ಗೆ ಕ್ರೆಡಿಟ್ ಕಾರ್ಡ್ಗಳನ್ನು ಲಿಂಕ್ ಮಾಡಲು ನಾವು ಪ್ರಸ್ತಾಪಿಸುತ್ತಿದ್ದೇವೆ. ರುಪೇ ಕ್ರೆಡಿಟ್ ಕಾರ್ಡ್ಗಳನ್ನು ಯುಪಿಐಗೆ ಲಿಂಕ್ ಮಾಡುವ ಮೂಲಕ ನಾವು ಈ ಪ್ರಕ್ರಿಯೆಯನ್ನು ಜಾರಿಗೊಳಿಸುತ್ತೇವೆ ಎಂದು ಆರ್ಬಿಐ ಹೇಳಿದೆ. ಆದರೆ, ಕ್ರೆಡಿಟ್ ಕಾರ್ಡ್ಗಳನ್ನು ಬಳಸುವ UPI ವಹಿವಾಟುಗಳಿಗೆ ವ್ಯಾಪಾರಿ ರಿಯಾಯಿತಿ ದರವನ್ನು (MDR) ಹೇಗೆ ಅನ್ವಯಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.
ಪ್ರತಿ ವಹಿವಾಟಿಗೆ ವ್ಯಾಪಾರಿಗಳು ವಹಿವಾಟಿನ ಮೊತ್ತದ ಸಣ್ಣ ಶೇಕಡಾವಾರು ಮೊತ್ತವನ್ನು ಬ್ಯಾಂಕ್ಗಳು ಮತ್ತು ಪಾವತಿ ಸೇವಾ ಪೂರೈಕೆದಾರರಿಗೆ ಪಾವತಿಸಬೇಕಾಗಿತ್ತು. ಆದರೆ ಜನವರಿ 1, 2020 ರಿಂದ ತಂದ ನಿಯಮಗಳ ಪ್ರಕಾರ, ಯುಪಿಐ ಮತ್ತು ರುಪೇ ಕಾರ್ಡ್ಗಳಿಗೆ ಶೂನ್ಯ-ಎಂಡಿಆರ್ ಜಾರಿಗೆ ಬಂದಿದೆ. ಅಂದರೆ ರುಪೇ ಕಾರ್ಡ್ಗಳ ಮೂಲಕ UPI ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲ. RBI ಯುಪಿಐ ವಹಿವಾಟುಗಳನ್ನು ಬಳಸಿಕೊಂಡು ದೇಶಾದ್ಯಂತದ ವ್ಯಾಪಾರಿಗಳ ಪ್ರಯೋಜನಕ್ಕಾಗಿ ಇದನ್ನು ಜಾರಿಗೆ ತಂದಿದೆ.
2022 ರ ಹಣಕಾಸು ವರ್ಷದಲ್ಲಿ ಒಟ್ಟು ಚಿಲ್ಲರೆ ಡಿಜಿಟಲ್ ಪಾವತಿಗಳಲ್ಲಿ ಶೇಕಡಾ 60 ರಷ್ಟು UPI ಮೂಲಕ ಮಾಡಲಾಗಿದೆ. ಈ ವಹಿವಾಟಿನ ಮೌಲ್ಯ ಟ್ರಿಲಿಯನ್ ಡಾಲರ್ ಗಡಿ ದಾಟಿದೆ. ಮತ್ತೊಂದೆಡೆ, ಕ್ರೆಡಿಟ್ ಕಾರ್ಡ್ಗಳ ಮೇಲಿನ MDR ಶುಲ್ಕಗಳು ಎರಡರಿಂದ ಮೂರು ಪ್ರತಿಶತದಷ್ಟು ಹೆಚ್ಚಿರಬಹುದು. ಈ ವಹಿವಾಟುಗಳನ್ನು ಈಗ UPI ಗೆ ಲಿಂಕ್ ಮಾಡುವ ಮೂಲಕ ಯಾವುದೇ MDR ಶುಲ್ಕಗಳಿವೆಯಾ..? ಇರಬೇಕಾ ..? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.