Voter ID: ಲೋಕಸಭಾ ಮತದಾನಕ್ಕೆ ಕೆಲವೇ ದಿನಗಳು ಉಳಿದಿವೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಮಾಡಲು ಮಾರ್ಚ್ 25 (ಇಂದು) ಕೊನೆಯ ದಿನವಾಗಿದೆ.
ಇದನ್ನು ಓದಿ: ರಾಜ್ಯದ ರೈತರ ಖಾತೆಗೆ 10,000 ರೂ..!
ಈಗಾಗಲೇ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಮೃತಪಟ್ಟ ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಪಟ್ಟಿಯಲ್ಲಿ ಹೆಸರು ಇಲ್ಲದವರು ನಮೂನೆ 6ರಲ್ಲಿ ಮತಪಟ್ಟಿಗೆ ಹೆಸರು ಸೇರಿಸಲು ಹಾಗೂ ತಿದ್ದುಪಡಿಗೆ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಬಹುದು.
Voter ID: ಹೆಸರು ನೋಂದಾಯಿಸಲು ಇಂದು ಅವಕಾಶ
ಮತದಾನದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ EC ಮನೆಯಲ್ಲಿಯೇ ಕುಳಿತು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶ ಮಾಡಿಕೊಟ್ಟಿದ್ದು, ಈ ಪ್ರಕ್ರಿಯೆಗೆ ಉಳಿದಿರುವುದು 1 ದಿನ ಮಾತ್ರ.
ಇದನ್ನು ಓದಿ: ಇಂದು ಹೋಳಿ ಹಬ್ಬ..ಈ ಎಚ್ಚರಿಕೆ ಇರಲಿ
ಇಂದು ನೋಂದಣಿ ಮಾಡಿಕೊಂಡರೆ ಮಾತ್ರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಿಮಗೆ ಮತ ಹಾಕಲು ಸಾಧ್ಯ. ಮತದಾರರ ಸಹಾಯವಾಣಿ ಆಪ್ ಡೌನ್‌ಲೋಡ್ ಮಾಡಿ. ಫಾರ್ಮ್ 6ನಲ್ಲಿ 2ನೇ ಆಯ್ಕೆ ಆರಿಸಿ. ಅಗತ್ಯ ಮಾಹಿತಿ ತುಂಬಿಸಿ ನೋಂದಣಿ ಮಾಡಿ.
Voter ID: ವೋಟರ್ ID ತಿದ್ದುಪಡಿ ಮಾಡುವುದು ಹೇಗೆ..? How to make correction in Voter ID
- ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ನಮೂನೆ-8 ಭರ್ತಿ ಮಾಡುವ ಮೂಲಕ ಮತದಾರರ ಕಾರ್ಡ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ಫೋನ್ ಮೂಲಕ ಮಾಡಬಹುದಾಗಿದ್ದು, ಹೆಸರು, ವಯಸ್ಸು, ವಿಳಾಸ, ಭಾವಚಿತ್ರ, ಹುಟ್ಟಿದ ದಿನಾಂಕ, ತಂದೆ/ಗಂಡನ ಹೆಸರು ತಿದ್ದುಪಡಿ ಮಾಡಬಹುದಾಗಿದೆ.
- ವೋಟರ್ ID ತಿದ್ದುಪಡಿ ಮಾಡಿಕೊಳ್ಳಲು ಕೆಲ ಸಂಬಂಧಿತ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
- ನಂತರದಲ್ಲಿ ನಿಮ್ಮ ಅರ್ಜಿಯ ಸ್ಟೇಟಸ್ ತಿಳಿಯಲು ಅಧಿಕೃತ ವೆಬ್‌ಸೈಟ್ https://voterportal.eci.gov.in ಗೆ ಭೇಟಿ ನೀಡಿ.
ಇದನ್ನು ಓದಿ:ಹೋಳಿಯಂದು ಲಕ್ಷ್ಮಿ ಯೋಗ; ಈ 5 ರಾಶಿಗಳ ಜೀವನದಲ್ಲಿ ಸಂತೋಷ
Voter ID: ‘ವೋಟರ್ ಐಡಿ’ ಡೌನ್ಲೋಡ್ ಮಾಡುವುದು ಹೇಗೆ ?
ನಿಮ್ಮ e-EPIC card/ ವೋಟರ್ ID ಕಾರ್ಡ್ ಅನ್ನು ನೀವು download ಮಾಡಲು ಈ ನಾಲ್ಕು ಹಂತಗಳನ್ನು ಅನುಸರಿಸಿ & ನಿಮ್ಮ e-EPIC ಅನ್ನು ಸುಲಭವಾಗಿ ಪಡೆಯಿರಿ.
ಹಂತ-1: voters.eci.gov.in ಗೆ ಹೋಗಿ ಲಾಗಿನ್ ಆಗಿ.
ಹಂತ-2: ‘e-EPIC download’ ಆಯ್ಕೆ ಮಾಡಿ.
ಹಂತ-3: ನಿಮ್ಮ ‘e-EPIC Card’ ಸಂಖ್ಯೆಯನ್ನು Enter ಮಾಡಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಯೊಂದಿಗೆ ಪರಿಶೀಲಿಸಿ.
ಹಂತ-4: ನಿಮ್ಮ ‘e-EPIC Card’ ಅನ್ನು ಡೌನ್ಲೋಡ್ ಮಾಡಿ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ ಮಾಡಿ |