kkr vs srh ipl 2024: 2024ರ ಐಪಿಎಲ್ ಮೂರನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ ರೈಜರ್ಸ್ ಹೈದರಾಬಾದ್ ವಿರುದ್ಧ ರೋಚಕ 4 ರನ್‌ಗಳ ರೋಚಕ ಗೆಲುವು ದಾಖಲಿಸಿದೆ.
ಇದನ್ನು ಓದಿ: ಕ್ರೆಡಿಟ್ ಸ್ಕೋರ್ ಮತ್ತು EMI ಸಾಲ; ಕ್ರೆಡಿಟ್ ಸ್ಕೋರ್ ತಿಳಿಯುವುದು ಹೇಗೆ?
ಹೌದು, ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ತಂಡ, ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಗಳ ಬೃಹತ್ ಮೊತ್ತ ಗಳಿಸಿತು. ಕೆಕೆಆರ್ ಪರ ಸಾಲ್ಟ್-54, ರಸೆಲ್- 64, ರಿಂಕು ಸಿಂಗ್-23, ರಮಂದೀಪ್ ಸಿಂಗ್-35 ರನ್ ಗಳಿಸಿದರು. ಹೈದ್ರಾಬಾದ್ ಪರ ನಟರಾಜನ್ 3 ವಿಕೆಟ್, ಮಾರ್ಕಂಡೆ 2, ಕಮಿನ್ಸ್- 1 ವಿಕೆಟ್ ಪಡೆದರು.

kkr vs srh ipl 2024: ರಸೆಲ್ ವಿಧ್ವಂಸಕ…

ಒಂದು ಹಂತದಲ್ಲಿ 13.5 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿತ್ತು. ಆ ನಂತರ ಬ್ಯಾಟಿಂಗ್ ಮಾಡಲು ಬಂದ ಆಲ್ ರೌಂಡರ್ ರಸಲ್ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ವಿಧ್ವಂಸಕ ಬ್ಯಾಟಿಂಗ್ ಮಾಡಿದರು. ಕೊನೆಯ ಐದು ಓವರ್‌ಗಳಲ್ಲಿ ಕೆಕೆಆರ್ 85 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತು. ವೆಸ್ಟ್ ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ರಸಲ್ 25 ಎಸೆತಗಳಲ್ಲಿ 64 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದರಲ್ಲಿ 7 ಸಿಕ್ಸರ್ ಹಾಗು 3 ಬೌಂಡರಿಗಳು ಸೇರಿವೆ. ಅಷ್ಟೇ ಬೌಲಿಂಗ್ ನಲ್ಲಿ 2 ವಿಕೆಟ್ ಪಡೆದು ಮಿಂಚಿದರು.
ಇದನ್ನು ಓದಿ: ಲೋಕಸಭಾ ಚುನಾವಣೆ, ಯಾವ ಕ್ಷೇತ್ರದಲ್ಲಿ ಯಾರು ಎದುರಾಳಿ?
kkr vs srh ipl 2024: ಕ್ಲಾಸೆನ್ ಹೋರಾಟ ವ್ಯರ್ಥ
ಇನ್ನು, ಕೊಲ್ಕತ್ತಾ ನೈಟ್ ರೈಡರ್ಸ್ ನೀಡಿದ 209 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್ ತಂಡ 7 ವಿಕೆಟ್ ಕಳೆದುಕೊಂಡು 204 ರನ್ ಗಳಿಸಿ 4 ರನ್ ಗಳ ವೀರೋಚಿತ ಸೋಲೊಪ್ಪಿಕೊಂಡಿತು. ಕ್ಲಾಸೆನ್ (61) ಅವರ ಅದ್ಭುತ ಹೋರಾಟ ವ್ಯರ್ಥವಾಯಿತು. ಕೊನೆಯ ಓವರ್‌ನಲ್ಲಿ ಕ್ಲಾಸೆನ್ ಮತ್ತು ಶಹಬಾಜ್ ಔಟಾದ ಕಾರಣ KKR 4 ರನ್‌ಗಳಿಂದ ಗೆದ್ದಿತು.
ಇದನ್ನು ಓದಿ: ದ್ರಾಕ್ಷಿ ಹಣ್ಣನ್ನು ತಿನ್ನುವುದರಿಂದ ಚರ್ಮದ ಸಮಸ್ಯೆಗಳಿಗೆ ಉತ್ತಮ !
ಇನ್ನು, ಉಳಿದಂತೆ ಹೈದರಾಬಾದ್ ಪರ ಮಯಾಂಕ್ ಅಗರ್ವಾಲ್ 32, ಅಭಿಷೇಕ್ ಶರ್ಮಾ 32, ರಾಹುಲ್ ತ್ರಿಪಾಠಿ 20, ಐಡೆನ್ ಮಾರ್ಕ್ರಾಮ್ 18 ರನ್ ಗಳಿಸಿದರು. KKR ಪರ ಹರ್ಷಿತ್ ರಾಣಾ 3 ವಿಕೆಟ್, ಆಂಡ್ರೆ ರಸೆಲ್ 2 ವಿಕೆಟ್ ಹಾಗು ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ತಲಾ 1 ವಿಕೆಟ್ ಪಡೆದರು.
ಇನ್ನು, KKR ಪರ ಅದ್ಬುತ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಆಲ್ರೌಂಡರ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದ ಆಂಡ್ರೆ ರಸೆಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |