csk vs rcb ipl 2024: 2024ರ ಐಪಿಎಲ್ ಮೊದಲ ಪಂದ್ಯ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಮತ್ತು ಬೆಂಗಳೂರು ನಡುವೆ ಚನೈನಲ್ಲಿ ಪ್ರಾರಂಭವಾಗಿದ್ದು, RCB ವಿರುದ್ಧದ ಆರಂಭಿಕ ಪಂದ್ಯದಲ್ಲಿ CSK ಭರ್ಜರಿ ಗೆಲುವು ದಾಖಲಿಸಿದೆ.
ಇದನ್ನು ಓದಿ: ಮಗು ದತ್ತು ಪಡೆದಿದ್ದಕ್ಕೆ ಯಾಕೆ ಬಂಧನ? ಸೋನು ಮಾಡಿದ ತಪ್ಪೇನು? ಮಗು ದತ್ತು ಪಡೆಯಲು ಇರುವ ನಿಯಮಗಳೇನು?
csk vs rcb ipl 2024: ಚೆನ್ನೈಗೆ 174 ರನ್ ಗಳ ಗೆಲುವಿನ ಗುರಿ ನೀಡಿದ ಆರ್ ಸಿಬಿ
ಹೌದು, ಈ ಆವೃತ್ತಿಯ ಈ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿಯು 20 ಓವರ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ತಂಡದ ಆರಂಭವು ಉತ್ತಮವಾಗಿದ್ದರೂ ಸಹಿತ ಮೊದಲ ವಿಕೆಟ್ ನಂತರ ಆರ್ ಸಿಬಿ ತಂಡ ಮಾಧ್ಯಮ ಕ್ರಮಾಂಕವು ಪೆವಿಲಿಯನ್ ಪರೇಡ್ ನಡೆಸಿತು.
ಇದನ್ನು ಓದಿ: ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಬಂಧನ
ದಿನೇಶ್ ಕಾರ್ತಿಕ್ & ಅನುಜ್ ರಾವತ್ ಸ್ಪೋಟಕ ಬ್ಯಾಟಿಂಗ್ ವ್ಯರ್ಥ
ಒಂದು ಹಂತದಲ್ಲಿ 12 ಓವರ್‌ಗಳಲ್ಲಿ 78 ರನ್‌ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಜೋಡಿಯಾದ ದಿನೇಶ್ ಕಾರ್ತಿಕ್ & ಅನುಜ್ ರಾವತ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ ಗೆ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ ಚೆನ್ನೈಗೆ ಸ್ಪರ್ಧಾತ್ಮಕ ಗೆಲುವಿನ ಗುರಿ ನೀಡಿತು. RCBಗೆ ಅನೂಜ್ 48 & ಕಾರ್ತಿಕ್ 38* ನೆರವಾದರು. ಡುಪ್ಲೆಸಿಸ್ 35, ಕೊಹ್ಲಿ 21, ಗ್ರೀನ್ 18 ರನ್ ಗಳಿಸಿದರೆ, ಪಾಟೀದಾರ್ & ಮ್ಯಾಕ್ಸ್ ವೆಲ್ ಡಕೌಟ್ ಆದರು. CSK ಪರ ಮುಸ್ತಫಿಜುರ್ 4 ವಿಕೆಟ್ ಪಡೆದರು.
ಇದನ್ನು ಓದಿ: ಬಿಜೆಪಿಯ ನಾಲ್ಕನೇ ಪಟ್ಟಿ ಪ್ರಕಟ; ನಟಿ ರಾಧಿಕಾಗೆ ಟಿಕೆಟ್ ಘೋಷಣೆ..!
ಗೆದ್ದ CSK.. ಬಿದ್ದ RCB
ಈ ಗುರಿ ಬೆನ್ನಟ್ಟಿದ CSK, 18.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 6 ವಿಕೆಟ್ ಗಳ ಭರ್ಜರಿ ಗೆಲವು ದಾಖಲಿಸಿತು . CSK ಪರ ರಚಿನ್ 37, ಮಿಚೆಲ್ 22, ರಹಾನೆ 27, ದುಬೆ 34, ಜಡೇಜಾ 25 ರನ್ ಗಳಿಸಿದರು. RCB ಪರ ಗ್ರೀನ್ 2, ಕರ್ಣ್ & ದಯಾಳ್ ತಲಾ ಒಂದು ವಿಕೆಟ್ ಪಡೆದರು. ಚೆಪಾಕ್ ನಲ್ಲಿ CSK ಸೋಲಿಸುವಲ್ಲಿ RCBಗೆ 2008ರಿಂದ ಒಮ್ಮೆಯೂ ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ.
ಇನ್ನು CSK ಪರ ಉತ್ತಮ ಬೌಲಿಂಗ್ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮುಸ್ತಫಿಜುರ್ ರೆಹಮಾನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |