Sonu Srinivas Gowda: ನಿಯಮ ಉಲ್ಲಂಘಿಸಿ ಮಗು ದತ್ತು ಪಡೆದಿರುವ ಆರೋಪದ ಮೇಲೆ ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅವರನ್ನು ಬಂಧಿಸಲಾಗಿದೆ.
ಹೌದು, ಕಾನೂನು ಪ್ರಕಾರ, ದತ್ತು ತೆಗೆದುಕೊಳ್ಳುವ ತಾಯಿ ಮತ್ತು ಮಗುವಿಗೆ 25 ವರ್ಷಗಳ ಅಂತರವಿರಬೇಕು. ಆದರೆ, ಸೋನುಗೌಡಗೆ 23 ವರ್ಷ ವಯಸ್ಸಾಗಿದ್ದು, ಮಗುವಿಗೆ 8 ವರ್ಷ ವಯಸ್ಸು. ಈ ಮೂಲಕ ಸೋನು ಗೌಡ ನಿಯಮ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ.
ಇದನ್ನು ಓದಿ: ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಬಂಧನ
ಅಲ್ಲದೇ, ರೀಲ್ಸ್ ಮಾಡುವ ಉದ್ದೇಶದಿಂದ ಮಗುವನ್ನು ತನ್ನಿಷ್ಟ ಬಂದಂತೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೂಡ ಇದೆ. CWCಯ ಕೆಲವೊಂದು ನಿಯಮವನ್ನು ಸಹ ಸೋನು ಗೌಡ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ.
ಮಗು ದತ್ತು ಪಡೆಯಲು ಇರುವ ನಿಯಮಗಳೇನು?
- ಕಾನೂನು ಪ್ರಕಾರ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಸ್ಥಿರವಾಗಿರುವ ವ್ಯಕ್ತಿ ಮಾತ್ರ ಮಗುವನ್ನು ದತ್ತು ಪಡೆಯಬಹುದು.
- ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ಮಕ್ಕಳನ್ನು ದತ್ತು ಪಡೆಯುವಂತಿಲ್ಲ.
- ಮಹಿಳೆ ಗಂಡು ಅಥವಾ ಹೆಣ್ಣು ಎರಡು ಮಕ್ಕಳನ್ನು ದತ್ತು ಪಡೆಯಬಹುದು. ಆದರೆ, ಒಂಟಿ ಪುರುಷ ಗಂಡು ಮಗುವನ್ನು ಮಾತ್ರ ದತ್ತು ಪಡೆಯಬಹುದು.
- 3 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿ ವಿಶೇಷ ಅಗತ್ಯತೆಗಳನ್ನು ಹೊಂದಿರುವ ಮಕ್ಕಳನ್ನು ಹೊರತು ಮತ್ತೊಂದು ಮಗುವನ್ನು ದತ್ತು ತೆಗೆದುಕೊಳ್ಳುವಂತಿಲ್ಲ.
ಇದನ್ನು ಓದಿ: ಬಿಜೆಪಿಯ ನಾಲ್ಕನೇ ಪಟ್ಟಿ ಪ್ರಕಟ; ನಟಿ ರಾಧಿಕಾಗೆ ಟಿಕೆಟ್ ಘೋಷಣೆ..!
ಮಗು ದತ್ತು ಪಡೆಯಲು ಕಾನೂನು ಏನು ಹೇಳುತ್ತದೆ?
- ಪೋಷಕರಿಂದ ನೇರವಾಗಿ ಮಗು ದತ್ತು ಪಡೆಯುವಂತಿಲ್ಲ
- ಮಗು ಸಾಕಲು ಆಗದಿದ್ದರೆ CWCಯಲ್ಲಿ ಬಿಡಬೇಕು
- ಬೇರೆಯವರಿಗೆ ನೇರವಾಗಿ ಮಗು ದತ್ತು ಕೊಡುವಂತಿಲ್ಲ.
- ವಿವಾಹ ಚೌಕಟ್ಟಿನ ಹೊರತಾಗಿ ಎಲ್ಲಾ ಪುರುಷರು, ಮಹಿಳೆಯರು ದತ್ತು ತೆಗೆದುಕೊಳ್ಳಬಹುದು.
- ದಂಪತಿ ಕನಿಷ್ಠ ಎರಡು ವರ್ಷ ಅರ್ಹ ದಾಂಪತ್ಯ ಜೀವನ ನಡೆಸಿರಬೇಕು.
- ದತ್ತು ತೆಗೆದುಕೊಳ್ಳುವಾಗ ಅವರು ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವಂತಿಲ್ಲ.
- ಏಕಾಂಗಿ ಪುರುಷನೋರ್ವ ಹೆಣ್ಣು ಮಗುವನ್ನು ದತ್ತು ಸ್ವೀಕರಿಸುವಂತಿಲ್ಲ
ಇದನ್ನು ಓದಿ: ಮಾರ್ಚ್ 31ಕ್ಕೆ 18 ವರ್ಷ ಆಯ್ತಾ? ಈಗಲೇ ವೋಟರ್ ಐಡಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ನನ್ನಿಂದ ಯಾವುದೇ ತಪ್ಪಾಗಿಲ್ಲ…
ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ರೀಲ್ಸ್ ಸ್ಟಾರ್ ಸೋನು ಗೌಡ ಅವರನ್ನು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸೋನು, ಈ ವಿಷಯದಲ್ಲಿ ನನ್ನಿಂದ ಯಾವುದೇ ತಪ್ಪು ಆಗಿಲ್ಲವೆಂದು ಹೇಳಿದ್ದಾರೆ.
ನಾನು ಮಗುವನ್ನು ಕರೆದುಕೊಂಡು ಬಂದು 15 ದಿನವಾಗಿದೆ. ನಾನು ತಪ್ಪು ಮಾಡದಿದ್ರೂ ಪೊಲೀಸರು ನನ್ನನ್ನ ಕರೆದುಕೊಂಡು ಬಂದಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಸದ್ಯ ಸೋನು ವಿಚಾರಣೆ ನಡೆಯುತ್ತಿದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |