Apply Voter ID Online: ಮಾರ್ಚ್ 31ಕ್ಕೆ 18 ವರ್ಷ ತುಂಬುವವರಿಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ವೋಟರ್ಸ್ ಹೆಲ್ಪ್‌ಲೈನ್ ಆಪ್ ಮೂಲಕ ಫಾರಂ ನಂ. 6 ಅನ್ನು ಭರ್ತಿ ಮಾಡಿ ಸಲ್ಲಿಸಬೇಕು.
ಇದನ್ನು ಓದಿ: ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಬಂಧನ..; ಕಾರಣವೇನು ಗೊತ್ತೇ..?
ಏಪ್ರಿಲ್ 1ರ ನಂತರ ಅದನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿದವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ. ಅದೇ ರೀತಿ ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡಬೇಕಾದರೆ ಫಾರಂ 8 ಅನ್ನು ಭರ್ತಿ ಮಾಡಿ ಸಲ್ಲಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
Apply Voter ID Online: ವೋಟರ್ ಐಡಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
- ವೋಟರ್ ಐಡಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮೊದಲು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ https://voters.eci.gov.in ತೆರೆಯಿರಿ.
- ಐಡಿಯನ್ನು ರಚಿಸಿ, ಫೋನ್ ಸಂಖ್ಯೆ ನಮೂದಿಸಿ ಮತ್ತು OTPಯೊಂದಿಗೆ ಲಾಗಿನ್ ಮಾಡಿ.
- ಈಗ ರಿಜಿಸ್ಟರ್ ಆ್ಯಸ್ ನ್ಯೂ ವೋಟರ್-ಫಾರ್ಮ್ 6 ಅನ್ನು ಕ್ಲಿಕ್ ಮಾಡಿ. ಸಂಬಂಧಿತ ವಿವರಗಳನ್ನು ನಮೂದಿಸಿ.
- ವಿಳಾಸ ಪುರಾವೆಗಾಗಿ ಆಧಾರ್ ಕಾರ್ಡ್ ಅನ್ನು ಅಪ್‌ಲೋಡ್ ಮಾಡಿದ ನಂತರ, ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ ಅದನ್ನು ಸಲ್ಲಿಸಿ. ಬಳಿಕ ನೀವು ಅಪ್ಲಿಕೇಶನ್ ಐಡಿಯನ್ನು ಪಡೆಯುತ್ತೀರಿ.
ಇದನ್ನು ಓದಿ:ಮಹಿಳೆಯರಿಗೆ ಉತ್ತಮ ಅವಕಾಶ.. ಕೇಂದ್ರ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಬಡ್ಡಿ..!
Apply Voter ID Online: 18 ವರ್ಷ ತುಂಬಿದ ಅರ್ಹ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲೆ ವೋಟರ್ ಐಡಿ ವಿತರಣೆ
ಸ್ಕೂಲ್, ಕಾಲೇಜು ವಿದ್ಯಾರ್ಥಿಗಳು ಹದಿನೆಂಟು ವರ್ಷ ತುಂಬಿ ಮತದಾನ ಮಾಡಲು ಅರ್ಹತೆ ಪಡೆದ ಕೂಡಲೇ ಅವರಿಗೆ ವೋಟರ್ ಐಡಿ ನೀಡುವ ವ್ಯವಸ್ಥೆ ತರಲು ಸಿದ್ದತೆ ನಡೆಯುತ್ತಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಸುಧಾರಿತ ಅರ್ಜಿಗಳೊಂದಿಗೆ ಈ ವ್ಯವಸ್ಥೆ ಕಲ್ಪಿಸಲು ಸಿದ್ದತೆ ನಡೆದಿದೆ, ಅತಿ ಶೀಘ್ರದಲ್ಲಿ ತರಲಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ರೂ 169 ರೀಚಾರ್ಜ್ ಜೊತೆಗೆ ಉಚಿತ ಡಿಸ್ನಿ ಜೊತೆಗೆ ಹಾಟ್‌ಸ್ಟಾರ್ ಚಂದಾದಾರಿಕೆ…!
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |