Yashasvini card: ಹೊಸದಾಗಿ ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳುವವರಿಗೆ ಹಾಗೂ ಈಗಾಗಲೇ ಇರುವ ಯಶಸ್ವಿನಿ ಕಾರ್ಡ್ ಅಪಡೇಟ್ ಮಾಡಿಸಿಕೊಳ್ಳುವವರಿಗೆ ಸಹಕಾರ ಸಂಘಗಳಿಂದ ಅಪಡೇಟ್ ನೀಡಲಾಗಿದೆ. ನೀವು ಸಹಕಾರಿ ಸಂಘಗಳಲ್ಲಿ ಸದಸ್ಯತ್ವವನ್ನು ಹೊಂದಿದ್ದು ಅದನ್ನು ನವೀಕರಿಸಿಕೊಳ್ಳಲು ಫೆಬ್ರವರಿ 29, 2024 ಕೊನೆಯ ದಿನಾಂಕ ಎಂದು ತಿಳಿಸಲಾಗಿದೆ.
ಇದನ್ನು ಓದಿ: ನಿಮ್ಮ ಖಾತೆಗೆ ₹3,000.. ಈಗಲೇ ಚೆಕ್ ಮಾಡಿ
Yashasvini card: ಯಶಸ್ವಿನಿ ಕಾರ್ಡ್ ನ ಪ್ರಯೋಜನಗಳು!
- ಸಹಕಾರಿ ಸಂಘಗಳ ಸದಸ್ಯತ್ವವನ್ನು ಪಡೆದುಕೊಂಡಿರುವ ಕುಟುಂಬ 5 ಲಕ್ಷ ರೂಪಾಯಿಗಳನ್ನು ವಾರ್ಷಿಕವಾಗಿ ನಗದು ರಹಿತ ಚಿಕಿತ್ಸೆಗಾಗಿ ಸರ್ಕಾರದಿಂದ ಪಡೆದುಕೊಳ್ಳಬಹುದು.
- ಯಶಸ್ವಿನಿ ಕಾರ್ಡ್ ನೆಟ್ವರ್ಕ್ ಹೊಂದಿರುವ ಆಸ್ಪತ್ರೆಗಳಲ್ಲಿ ಮಾತ್ರ ಈ ಸೇವೆ ಲಭ್ಯ ಎಂಬುದನ್ನು ಗಮನಿಸಿ.
- ಹೃದಯಕ್ಕೆ ಸಂಬಂಧಿಸಿದ ರೋಗಗಳು, ಕಿವಿ, ಕಣ್ಣು, ಮೂಗು, ಗಂಟಲು ಹೀಗೆ ಸಾಮಾನ್ಯ ಕಾಯಿಲೆಗಳವರೆಗೂ ಕೂಡ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಇದೆ.
- ರಾಜ್ಯಾದ್ಯಂತ 1650 ನೋಂದಾಯಿತ ಆಸ್ಪತ್ರೆಗಳಲ್ಲಿ ಬಳಸಿಕೊಳ್ಳಬಹುದು.
ಇದನ್ನು ಓದಿ: ಇಂದೇ ನಿಮ್ಮ ಖಾತೆಗೆ ₹2,000; ಹೀಗೆ ಚೆಕ್ ಮಾಡಿ
Yashasvini card: ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳಲು ಶುಲ್ಕ!
ಇನ್ನು, ನಗರವಾಸಿಗಳಿಗೆ ಮನೆಯ ಕುಟುಂಬದ ನಾಲ್ಕು ಸದಸ್ಯರಿಗೆ ಸೇರಿ 1000 ರೂಪಾಯಿ ಪಾವತಿಸಬೇಕಾಗಿದ್ದು, ಹೆಚ್ಚಿನ ಸದಸ್ಯರಿದ್ದರೆ ಪ್ರತಿ ಸದಸ್ಯರಿಗೆ 200 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕು.
ಗ್ರಾಮವಾಸಿಗಳಾದರೆ ನಾಲ್ಕು ಜನ ಇರುವ ಕುಟುಂಬದ ಸದಸ್ಯರು 500 ರೂಪಾಯಿಗಳನ್ನು ಪಾವತಿಸಬೇಕಾಗಿದ್ದು, ಹೆಚ್ಚುವರಿ ಸದಸ್ಯರಿದ್ದರೆ ಪ್ರತಿ ಸದಸ್ಯರಿಗೆ ತಲಾ 100 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶುಲ್ಕ ಇಲ್ಲ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |