Womens Reservation: ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಿಳೆಯರಿಗೆ ಸಂಸತ್ತಿನಲ್ಲಿ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆ ಸೇರಿದಂತೆ ಹಲವು ಮಸೂದೆಗಳಿಗೆ ಒಪ್ಪಿಗೆ ನೀಡಲಾಗಿದೆ. ಆದರೆ ಮಹಿಳಾ ಮೀಸಲಾತಿ ಮಸೂದೆಗೆ ಮತ್ತೆ ಚಾಲನೆ ಸಿಕ್ಕಿದ್ದು ಹೇಗೆ? ಎಂದು ನೋಡೋಣ.
ಇದನ್ನೂ ಓದಿ: ಕೇಂದ್ರದ ಸಂಚಲನ ನಿರ್ಧಾರ; ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ
Womens Reservation: ಮಹಿಳಾ ಮೀಸಲಾತಿ ಮಸೂದೆಗೆ ಮತ್ತೆ ಚಾಲನೆ ಸಿಕ್ಕಿದ್ದು ಹೇಗೆ?
ತೆಲಂಗಾಣ ರಾಜ್ಯದ ಸಿಎಂ ಕೆ.ಚಂದ್ರಶೇಖರ ರಾವ್ ಪ್ರಧಾನಿಗೆ ಪತ್ರ ಬರೆದು ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಒತ್ತಾಯಿಸಿದ್ದರು. ಬಳಿಕ ಕಾಂಗ್ರೆಸ್ ತನ್ನ CWC ಸಭೆಯಲ್ಲಿ ಗೊತ್ತುವಳಿ ಅಂಗೀಕರಿಸಿತ್ತು. ಬಿಜೆಡಿ ಸೇರಿ ಹಲವು ಪಕ್ಷಗಳೂ ಬೆಂಬಲಿಸಿದ್ದವು. ಈ ಮಸೂದೆ ಅಂಗೀಕಾರವಾದಲ್ಲಿ ಮಹಿಳೆಯರ ಕ್ಷೇತ್ರಗಳು ಪ್ರತೀ ಚುನಾವಣೆಯಲ್ಲಿ ಜಾತಿ ಮೀಸಲಾತಿಯೊಂದಿಗೆ ರೊಟೇಟ್ ಆಗುತ್ತವೆ. ಮೂರು ಚುನಾವಣೆ ನಡೆದರೆ ಎಲ್ಲಾ ಕ್ಷೇತ್ರಗಳೂ ಒಮ್ಮೊಮ್ಮೆ ಜಾತಿ ಮೀಸಲಾತಿಗೆ ಒಳಪಡುತ್ತವೆ.
ಇದನ್ನೂ ಓದಿ: ಕಣ್ಣಿನ ಆರೈಕೆ ಏಕೆ ಮುಖ್ಯ; ನೈಸರ್ಗಿಕವಾಗಿ ಕಣ್ಣಿನ ದೃಷ್ಟಿ ಸುಧಾರಿಸುವುದು ಹೇಗೆ?
ಮಹಿಳಾ ಮೀಸಲಾತಿಗೆ ನಾಂದಿ ಹಾಡಿದ್ದು ಗೌಡರು!
ಮಹಿಳಾ ಮೀಸಲಾತಿ ಮಸೂದೆಗೆ ಮೊದಲ ಕೊಡುಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರದ್ದು. 1996ರಲ್ಲಿ ಸರ್ಕಾರ ಗೀತಾ ಮುಖರ್ಜಿ ನೇತೃತ್ವದಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಿತ್ತು. ಈ ಸಮಿತಿಯು 7 ಶಿಫಾರಸುಗಳನ್ನು ಮಾಡಿತ್ತು. ಈ ಪೈಕಿ 5ನ್ನು 2008ರ ಮಸೂದೆಗೆ ಸೇರಿಸಲಾಗಿತ್ತು. ಆದರೆ ರಾಜ್ಯಸಭೆ, ವಿಧಾನ ಪರಿಷತ್ತಿನಲ್ಲೂ 33% ಮಹಿಳೆಯರಿಗೆ ಮೀಸಲಾತಿ ನೀಡಬೇಕು & OBCಯವರಿಗೂ ರಿಸರ್ವೇಶನ್ ಕಲ್ಪಿಸಬೇಕೆಂಬ 2 ಶಿಫಾರಸುಗಳನ್ನು ಆಗ ಕೈಬಿಡಲಾಗಿತ್ತು.
ಇದನ್ನೂ ಓದಿ: ಟ್ರೆಂಡಿಂಗ್ ಲಾಭದಾಯಕ ಹಳ್ಳಿಗಾಡಿನ ಕೋಳಿ ಸಾಕಾಣಿಕೆ; ದೇಸಿ ಕೋಳಿ ಸಾಕಿ ಲಾಭ ಗಳಿಸುವುದು ಹೇಗೆ?
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50 ಮೀಸಲಾತಿ
ದೇಶದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಈಗಾಗಲೇ ಮಹಿಳೆಯರಿಗೆ ಸಂವಿಧಾನದ ವಿಧಿ 243ರ ಅಡಿ 50% ಮೀಸಲಾತಿ ನೀಡಲಾಗಿದೆ. ಇದಕ್ಕಾಗಿ 1992ರಲ್ಲಿ 73ನೇ ಸಂವಿಧಾನ ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತರಲಾಯಿತು. ಇದರ ಪ್ರಕಾರ, ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರು & ತುಳಿತಕ್ಕೊಳಗಾದ ಸಮುದಾಯಗಳಿಗೆ ಶೇ.33.3ರಷ್ಟು ಮೀಸಲಾತಿ ನೀಡುವುದು ಕಡ್ಡಾಯ. ಪ್ರಸ್ತುತ ಕರ್ನಾಟಕ ಸೇರಿ 21 ರಾಜ್ಯಗಳು ಈ ಕಾಯಿದೆಯನ್ನು ಅಳವಡಿಸಿಕೊಂಡಿವೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |