Ganesh Chaturthi: ಗಣೇಶ ಪ್ರತಿಷ್ಠಾಪನೆ ಯಾವಾಗ? ಶುಭ ಮುಹೂರ್ತ, ಆಚರಣೆ ಇಲ್ಲಿದೆ

Ganesh Chaturthi: ಗಣೇಶೋತ್ಸವ ಎಂದೂ ಕರೆಯಲ್ಪಡುವ ಗಣೇಶ ಚತುರ್ಥಿ, ಸಮೃದ್ಧಿ ಮತ್ತು ಅದೃಷ್ಟಕ್ಕೆ ಹೆಸರುವಾಸಿಯಾದ ಗಣೇಶ ದೇವರ ಜನನವನ್ನು ಆಚರಿಸುವ ಪವಿತ್ರ ಹಬ್ಬ. ಗಣೇಶ ಪ್ರತಿಷ್ಠಾಪನೆ ಹಾಗೂ ಪೂಜಾ ಸಮಯದ ಕುರಿತು ಸಾಕಷ್ಟು ಗೊಂದಲಗಳಿವೆ.…

Ganesh Chaturthi

Ganesh Chaturthi: ಗಣೇಶೋತ್ಸವ ಎಂದೂ ಕರೆಯಲ್ಪಡುವ ಗಣೇಶ ಚತುರ್ಥಿ, ಸಮೃದ್ಧಿ ಮತ್ತು ಅದೃಷ್ಟಕ್ಕೆ ಹೆಸರುವಾಸಿಯಾದ ಗಣೇಶ ದೇವರ ಜನನವನ್ನು ಆಚರಿಸುವ ಪವಿತ್ರ ಹಬ್ಬ. ಗಣೇಶ ಪ್ರತಿಷ್ಠಾಪನೆ ಹಾಗೂ ಪೂಜಾ ಸಮಯದ ಕುರಿತು ಸಾಕಷ್ಟು ಗೊಂದಲಗಳಿವೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೋಮವಾರ ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಬೀದಿಗಳಲ್ಲಿ ಮಂಗಳವಾರ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಇದನ್ನೂ ಓದಿ: ಗಣೇಶ ಚತುರ್ಥಿಯಂದು ಈ ರಾಶಿಯವರಿಗೆ ವಿಶೇಷ ಲಾಭ; ನಿಮ್ಮ ರಾಶಿ ಇದೆಯೇ ನೋಡಿ!

Ganesh Chaturthi: ಗಣೇಶ ಪ್ರತಿಷ್ಠಾಪನೆ ಯಾವಾಗ? ಪೂಜಾ ಸಮಯ

Ganesh Chaturthi 2023
Ganesh Chaturthi

ದೃಕ್ ಪಂಚಾಂಗದ ಪ್ರಕಾರ, ಚತುರ್ಥಿ ತಿಥಿಯಂದು ಗಣೇಶನನ್ನು ಮನೆಗೆ ಸ್ವಾಗತಿಸಲು ಶುಭ ಸಮಯ ಸೆಪ್ಟೆಂಬರ್ 18 ರಂದು ಇಂದು ಮಧ್ಯಾಹ್ನ 12:39 ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 19ರಂದು ಮಧ್ಯಾಹ್ನ 1:43 ಕ್ಕೆ ಕೊನೆಗೊಳ್ಳುಲಿದ್ದು, 10 ದಿನಗಳ ಗಣೇಶ ಉತ್ಸವವು ಸೆಪ್ಟೆಂಬರ್ 28 ರಂದು ಗಣಪತಿ ವಿಸರ್ಜನೆಯೊಂದಿಗೆ ಕೊನೆಗೊಳ್ಳಲಿದೆ.

Vijayaprabha Mobile App free

ಹಿಂದೂ ಪಂಚಾಂಗದ ಪ್ರಕಾರ, ಇಂದು ಬೆಳಗ್ಗೆ 9.58ರಿಂದ 10-45 ಹಾಗೂ ಮಧ್ಯಾಹ್ನ 12-18ರಿಂದ 1.30ರೊಳಗೆ ಗಣೇಶನನ್ನು ಪ್ರತಿಷ್ಠಾಪಿಸಬಹುದು. ಇನ್ನೂ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ರಜೆ ಇರಲಿದೆ. ಕರಾವಳಿ ಭಾಗದಲ್ಲಿ ಮಂಗಳವಾರ ರಜೆ ಇರುತ್ತದೆ.

ಇದನ್ನೂ ಓದಿ: ಗಣೇಶ ಚತುರ್ಥಿ ಪ್ರಯುಕ್ತ ಗ್ರಾಹಕರಿಗೆ ಬಿಗ್‌ಶಾಕ್‌; ಬಸ್‌ ಟಿಕೆಟ್, ಹೂ, ಹಣ್ಣುಗಳ ಬೆಲೆ ಭಾರಿ ಏರಿಕೆ

ಗಣೇಶ ಚತುರ್ಥಿ ಆಚರಣೆಗಳೇನು?

ನಂಬಿಕೆಯ ಪ್ರಕಾರ, ಗಣೇಶನನ್ನು ವಿಘ್ನ ನಿವಾರಕ ಅಥವಾ ಎಲ್ಲಾ ಅಡೆತಡೆಗಳನ್ನು ನಿವಾರಿಸುವವನು ಎಂದೂ ಕರೆಯುತ್ತಾರೆ. ಹಿಂದೂ ಧರ್ಮದಲ್ಲಿ ಗಣೇಶನಿಗೆ ಹೆಚ್ಚಿನ ಮಹತ್ವವಿದ್ದು, ಬಹುತೇಕ ಎಲ್ಲಾ ಆಚರಣೆಗಳು ಗಣೇಶನ ಆರಾಧನೆಯೊಂದಿಗೆ ಪ್ರಾರಂಭವಾಗುತ್ತವೆ. ಈ ಹಬ್ಬದ ಸಲುವಾಗಿ ತಿಂಗಳುಗಳ ಮುಂಚಿತವಾಗಿಯೇ ಗಣೇಶನ ವಿಗ್ರಹಗಳ ತಯಾರಿಯೂ ಪ್ರಾರಂಭವಾಗುತ್ತವೆ.

ಇದನ್ನೂ ಓದಿ: ಎಚ್ಚರಿಕೆ… ಈ ಕೆಲಸಗಳನ್ನು ಪೂರ್ಣಗೊಳಿಸಲು ಸೆಪ್ಟೆಂಬರ್ 30 ಕೊನೆ ದಿನ; ಬೇಗನೆ ಈ ಕೆಲಸ ಮಾಡಿ

ಗಣಪತಿ ಪ್ರತಿಷ್ಟಾಪನೆ ದಿನ ಈ ನಿಯಮಗಳನ್ನು ಪಾಲಿಸಿ!

  • ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಿಂದ ಪ್ರಾರಂಭವಾಗಿ 10 ದಿನಗಳವರೆಗೆ ನಡೆದು ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ.
  • ಗಣೇಶನ ಮೂರ್ತಿ ಪ್ರತಿಷ್ಟಾಪನೆ ಸಮಯದಲ್ಲಿ ಎಡಮುರಿ ಮತ್ತು ಬಲಮುರಿ ಗಣಪತಿ ಎಂಬ ಎರಡು ಪ್ರಕಾರದ ಗಣಪತಿ ಮೂರ್ತಿಗಳಿರುವುದರಿಂದ ಎಡಮುರಿ ಗಣಪತಿಯ ಮೂರ್ತಿಯನ್ನೇ ಮನೆಗೆ ತರಬೇಕು.
  • ಇನ್ನು ಮೂರ್ತಿ ಕುಳಿತಿರುವ ಭಂಗಿಯಲ್ಲಿದ್ದರೇ ಇನ್ನು ಒಳ್ಳೆಯದು. ಇದು ಮನೆಗೆ ಶುಭ ತರುತ್ತದೆ ಎನ್ನಲಾಗುತ್ತದೆ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.