ರಾಜ್ಯದಲ್ಲಿ ಚುನಾವಣೆ ಹಿನ್ನಲೆ ನೀತಿ ಸಂಹಿತೆ ಜಾರಿ; ಈ ಕೆಲಸ ಮಾಡಿದರೆ ಶಿಕ್ಷೆ ಗ್ಯಾರಂಟಿ, ಯಾವ ತಪ್ಪಿಗೆ ಯಾವ ಶಿಕ್ಷೆ ? ಉಪಯುಕ್ತ ಕಾಯ್ದೆ, ಕಲಂ ಇಲ್ಲಿವೆ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ರಾಜ್ಯದ ಒಟ್ಟು 224 ಕ್ಷೇತ್ರಗಳಿಗೆ ಒಟ್ಟು ಒಂದೇ ಹಂತದಲ್ಲಿ ಮೇ.10ಕ್ಕೆ ಮತದಾನ ನಡೆಯಲಿದ್ದು, ಮೇ.13ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ. ಈಗಾಗಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಎಲ್ಲಾ ವಿಷಯಗಳ…

Election

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ರಾಜ್ಯದ ಒಟ್ಟು 224 ಕ್ಷೇತ್ರಗಳಿಗೆ ಒಟ್ಟು ಒಂದೇ ಹಂತದಲ್ಲಿ ಮೇ.10ಕ್ಕೆ ಮತದಾನ ನಡೆಯಲಿದ್ದು, ಮೇ.13ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ. ಈಗಾಗಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಎಲ್ಲಾ ವಿಷಯಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಡಲಿದ್ದು, ಚುನಾವಣಾ ಅಕ್ರಮ ತಡೆಯುವಲ್ಲಿ ಕ್ರಮ ವಹಿಸಲಿದೆ.

ಇದನ್ನು ಓದಿ: Krishi Ashirwad Yojana: ರೈತರಿಗೆ ಪ್ರತಿ ಎಕರೆಗೆ 5000 ಸಹಾಯಧನ, ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ

ಚುನಾವಣೆ ಸಮಯಕೆ ಉಪಯುಕ್ತ ಕಾಯ್ದೆ ಮತ್ತು ಕಲಂ (Acts and Sections) ಗಳು :

Vijayaprabha Mobile App free

1. 125 RP Act & 153(A), 205, 505 IP’: ಧರ್ಮ, ಜಾತಿ, ಭಾಷೆ ಆಧಾರದ ಮೇಲೆ ಗುಂಪು ಗುಂಪುಗಳ ಮದ್ಯ ದ್ವೇಷ ಭಾವನೆ ಉಂಟು ಮಾಡುವದು

2. 126 RP Act: ಮತದಾನ ಮುಗಿಯುವ ಮುಂಚಿತ 48 ಗಂಟೆಯ ಅವಧಿಯಲ್ಲಿ ಚುನಾವಣೆ ಕುರಿತು ಜನರನ್ನು ಉದ್ದೇಶಿಸಿ ಭಾಷಣ, ಮೆರವಣಿಗೆ ಮಾಡಿದರೆ, ಚುನಾವಣೆಗೆ ಸಂಬಂದಿತ ವಿಷಯಗಳನ್ನು ಪ್ರದರ್ಶಿಸಿದರೆ (ಚಲನಚಿತ್ರ, ಟಿವಿ ಇತರೆ), ಮನೋರಂಜನ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಅಪರಾಧ

3. 127 RP Act: ಸಾರ್ವಜನಿಕ ಸಭೆಯಲ್ಲಿ ತೊಂದರೆ ಕೊಡುವ ಉದ್ದೇಶದಿಂದ ಪ್ರಚೋದಿಸುವದು ಅಥವಾ ಆ ರೀತಿ ವರ್ತಿಸುವಂತೆ ಇನ್ನೊಬ್ಬರನ್ನು ಪ್ರಚೋದಿಸುವುದು ಅಪರಾಧ

ಇದನ್ನು ಓದಿ: ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್:‌ ಈ ಯೋಜನೆಯಡಿ ಪ್ರತಿಯೊಬ್ಬರಿಗೂ 50 ಸಾವಿರ ಉಚಿತ, ಕೂಡಲೇ ಅರ್ಜಿ ಸಲ್ಲಿಸಿ!

4. 128 RP Act: ಚುನಾವಣಾ ಕರ್ತವ್ಯ ಮತ್ತು ಮತ ಏಣಿಕೆ ಕರ್ತವ್ಯದಲ್ಲಿರುವ ಪ್ರತಿಯೊಬ್ಬ ಅಧಿಕಾರಿ ಸಿಬ್ಬಂದಿಯವರು ಮತದಾನದ ಗೌಪ್ಯತೆ ಕಾಪಾಡದಿದ್ದರೆ ಅಪರಾಧ

5. 129 RP Act: ಚುನಾವಣಾ ಕರ್ತವ್ಯದ ಅಧಿಕಾರಿಯವರ ಯಾವುದೇ ಅಭ್ಯರ್ಥಿಗೆ ಸಹಕಾರಿ ಆಗುವಂತೆ ನಡೆದುಕೊಂಡರೆ ಆಪರಾಧ (ಮತದಾನ ಒಂದನ್ನು ಬಿಟ್ಟು)

6. 130 RP Act: ಚುನಾವಣೆ ದಿನ ಮತಗಟ್ಟಯ ಪರ ಪ್ರಚಾರ ಮಾಡಿದರೆ, ಮತಯಾಚನೆ ಮಾಡಿದರೆ, ಬೇರೆಯವರಿಗೆ ಮತ ಹಾಕದಂತೆ ಹೇಳಿದರೆ, ಚುನಾವಣೆಯಲ್ಲಿ ಮತಹಾಕದಂತೆ ಮನವೊಲಿಸುವದು ಮಾಡಿದರೆ, ಯಾವುದ ಗುರುತು ಮತ್ತು ಸೂಚನೆ ಪ್ರದರ್ಶಿಸಿದರ ಅಪರಾಧ

ಇದನ್ನು ಓದಿ: NPCIL ನಲ್ಲಿ 325 ಹುದ್ದೆಗಳಿಗೆ ಅರ್ಜಿ ಅಹ್ವಾನ; BE, BTch, BSc ಆದವರು ಅರ್ಜಿ ಸಲ್ಲಿಸಿ

7. 131 RP Act: ಯಾವುದೇ ವ್ಯಕ್ತಿ ಮತದಾನಕ್ಕೆ ತೊಂದರೆಯಾಗುವಂತೆ ಕಿರುಚಿದರೆ, ಧ್ವನಿವರ್ಧಕ ಮೆಥಾಫೋನ್ ಬಳಸಿದರೆ ಅಪರಾಧ

8. 132 RP Act: ಮತಗಟ್ಟೆಯಲ್ಲಿ ದುರ್ನಡತೆ ತೋರಿದರೆ ಮತ್ತು ಪಿ.ಆರ್.ಓ ರವರ ಕಾನೂನಾತ್ಮಕ ನಿರ್ದೇಶನಗಳನ್ನು ಪಾಲಿಸದಿದ್ದರೆ ಅಂತಹ ವ್ಯಕ್ತಿಯನ್ನು ಹೊರಗೆ ಪಾಕಬೇಕು. ಈ ರೀತಿ ಹೊರಗೆ ಹಾಕಿದ ವ್ಯಕ್ತಿಯು ಪಿ.ಆರ್.ಓ ರವರ ಅನುಮತಿ ಇಲ್ಲದೆ ಮತ್ತೆ ಒಳಗೆ ಬಂದರೆ ಆಪರಾಧ

9. 133 RP Act: ಅಭ್ಯರ್ಥಿ ಅಥವಾ ಅವರ ಮನೆಯವರು ಮತದಾರರನ್ನು ಸಾಗಾಟ ಮಾಡಲು ಉಚಿತ ವಾಹನ ವ್ಯವಸ್ಥೆ ಮಾಡಿದರೆ,

ಇದನ್ನು ಓದಿ: 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಭರ್ಜರಿ ಸಿಹಿಸುದ್ದಿ; ಪ್ರತಿ ಎಕರೆಗೆ 5 ಸಾವಿರ ಸಹಾಯಧನ, ನಿಮ್ಮ ಖಾತೆಗೆ ಒಟ್ಟು 31 ಸಾವಿರ ರೂ!

10. 134 RP Act: ಚುನಾವಣಾ ಕರ್ತವ್ಯದಲ್ಲಿರುವ ಯಾವುದೇ ವ್ಯಕ್ತಿಯು ಸಮಂಜಸವಾದ ಕಾರಣವಿಲ್ಲದೇ ಕರ್ತವ್ಯದ ಉಲ್ಲಂಘನೆ ಮಾಡಿದರೆ ಅಪರಾಧ

11. 134(a) RP Act: ಸರ್ಕಾರಿ ಸೇವೆಯಲ್ಲಿರುವ ಯಾವುದೇ ವ್ಯಕ್ತಿಯು ಚುನಾವಣಾ ಅಭ್ಯರ್ಥಿಯ “ನಾವಣಾ ಎಜೆಂಟ್, ಮಿಲಿಂಗ್ ಎಂಟ್ ಹಾಗೂ ಮತ ಏಣಿಕ ಏಜೆಂಟ್ ಆದರೆ ಅಪರಾಧ

12. 134(b) RP Act: ಮತಗಟ್ಟೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಿಯೋಚಿಸಿದವರನ್ನು ಬಿಟ್ಟು ಬೇರೆ ಯಾರು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಮತಗಟ್ಟೆಯಲ್ಲಿ ಹೋದರೆ ಆಪರಾಧ.

ಇದನ್ನು ಓದಿ: 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ; ಜೂನ್ 14 ಕೊನೆಯ ದಿನ, ಬೇಗನೆ ಈ ಕೆಲಸ ಮಾಡಿ!

13. 135 RP Act: ಮತಗಟ್ಟೆಯಲ್ಲಿ ಮತದಾನದ ಬ್ಯಾಲೆಟ್ ಹಾಳೆಯನ್ನು ಅಥವಾ ಇ.ವಿ.ಎಂ ಅನ್ನು ತೆಗೆದರೆ / ಕಿತ್ತಿದರೆ ಆಪರಾಧ

14. 135(a) RP Act: ಮತಗಟ್ಟೆ ವಶಪಡಿಸಿಕೊಳ್ಳುವ ಕೃತ್ಯವೆಸಗಿದರೆ ಅಪರಾಧ.

15. 135(b) RP Act: ಮತದಾನದ ದಿನ ನೌಕರರಿಗೆ ವೇತನ ಸಹಿತ ರಜೆ ನೀಡದಿದ್ದರೆ ಅಪರಾಧ

16. 136 RP ACT: ಮತಗಟ್ಟೆಯಲ್ಲಿ ಮತಗಟ್ಟೆಯ ಬ್ಯಾಲಟ್ ಹಾಳಿ / ಐವಿಎಂ ಇತರ ಸಾಮಗ್ರಿಗಳನ್ನು ಮೋಸದಿಂದ ವಿರೋಪಗೊಳಿಸಿದರೆ ಅಥವಾ ನಾಶಪಡಿಸಿದರೆ ಅಪರಾಧ

ಇದನ್ನು ಓದಿ: ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆ ಬಂದ್, ನಿಮ್ಮ ಹಣ ಪಡೆಯಲು ಸಾಧ್ಯವಿಲ್ಲ!

17. 3(1)(vii) sc/st act: ಎಸ್.ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ಜನರಿಗೆ ಇಂತವರಿಗೆ ಮತ ಹಾಕುವಂತೆ ಅಥವಾ ಮತಹಾಕದಂತೆ ಒತ್ತಡ ಹಾಕಿದರೆ,

18. 171(b)/171(e) IPC: ಚುನಾವಣಾ ಸಮಯದಲ್ಲಿ ಆಮಿಷ ಒಡ್ಡುವದು ಮತ್ತು ಆಮೀಷ ರೂಪದಲ್ಲಿ ಹಣ ವಸ್ತು ನೀಡಿದರೆ ಅಪರಾಧ

19. 171(c)/171(f) IPC: ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಬೀರುವುದು.

20. 171(d)/171(f) IPC: ಬೇರೆ ವ್ಯಕ್ತಿಯ ಹೆಸರಲ್ಲಿ, ಅಥವಾ ಸತ್ತವನ ಹೆಸರಲ್ಲಿ ಅಥವಾ ಇಲ್ಲದವನ ಹೆಸರಲ್ಲಿ ಬೇರೆಯವರು ಮತದಾನ ಮಾಡಿದರೆ ಅಪರಾಧ.

ಇದನ್ನು ಓದಿ: ರೇಷನ್‌ ಕಾರ್ಡ್‌ ಇದ್ದವರಿಗೆ ಹೊಸ ರೂಲ್ಸ್‌; ಜೂನ್‌ 30 ರೊಳಗೆ ತಪ್ಪದೇ ಈ ಕೆಲಸ ಮಾಡಿ, ಇಲ್ಲದಿದ್ದರೆ ನಿಮ್ಮ ರೇಷನ್‌ ಕಡಿತ ಪಕ್ಕಾ.!

21. 171G IPC: ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಉದ್ದೇಶದಿಂದ ಅಭ್ಯರ್ಥಿಯ ಗುಣ ಅಥವಾ ನಡವಳಿಕೆಗೆ ಸಂಬಂದಿಸಿದಂತೆ ಸತ್ಯದ ಹೇಳಿಕೆ ತಿಂತಾ ಯಾವುದೇ ಹೇಳಿಕೆಯನ್ನು ನೀಡಿದರೆ ಅಥವಾ ಪ್ರಕಟಿಸಿದರೆ ಅಪರಾಧ

22. 171(H) IPC: 10 ರೂಪಾಯಿಗಿಂತ ಹೆಚ್ಚಿನ ಮೊತ್ತದ ಖರ್ಚುಗಳನ್ನು ವಿರ್ಜಾದ ದಿನದಿಂದ 10 ದಿನದೊಳಗೆ ಅಭ್ಯರ್ಥಿಯು ಲಿಖಿತ ಅನುಮೊದನೆಯನ್ನು ಪಡೆಯದಿದ್ದರೆ ಅಪರಾಧ

23. 505(2) IPC: ಧರ್ಮ, ಜಾತಿ, ಜನಾಂಗ ಮತ್ತು ಭಾಷೆ ಆಧಾರದ ಮೇಲೆ ಗುಂದು ಗುಂಪುಗಳ ಮಧ್ಯೆ ದ್ವೇಷ ಭಾವನೆ ಹುಟ್ಟು ಹಾಕುವ ರೀತಿಯ ಹೇಳಿಕೆ, ಪ್ರಕಟಣೆ ಮಾಡಿದರೆ,

24. 125 (a) RIP Act: ಅಭ್ಯರ್ಥಿಯು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಲ್ಲಿ

ಇದನ್ನು ಓದಿ: Sukanya Samriddhi Yojana: ಹೀಗೆ ಮಾಡಿದ್ರೆ ನಿಮ್ಮ ಕೈಗೆ ಸಿಗಲಿದೆ ಬರೋಬ್ಬರಿ 64 ಲಕ್ಷ ರೂ!

25. 31 RP Act: ಚುನಾವಣೆ ಮತದಾರರ ಪಟ್ಟಿಗೆ ಸಂಬಂಪಿಸಿದಂತೆ ಸುಳ್ಳು ಘೋಷಣೆ ಮಾಡಿದರೆ,

26. 332, 333, 353 IPC: ಸರ್ಕಾರಿ ನೌಕರರಿಗೆ ಸಾದಾ ಮತ್ತು ಭಾರಿ ಸ್ವರೂಪದ ಹಲ್ಲೆ ಮಾಡಿ ಕರ್ತವ್ಯಕ್ಕೆ ಆಡೆ ತಡೆ ಮಾಡಿದರೆ,

27. 127 (a) RP Act: ಚುನಾವಣಾ ಸಂಬಂದಿತ ಕರಪತ್ರ ಮತ್ತು ಇನ್ನಿತರ ಮುದ್ರಣಗಳ ಮೇಳ ಮುದ್ರಕರ ಪ್ರಕಾಶಕರ ಹೆಸರು ವಿಳಾಸ ಹಾಕಿದರೆ ಅಪರಾಧ

28. 123(1) RP Act: ಚುನಾವಣೆ ಅಭ್ಯರ್ಥಿ ಅಥವಾ ಅವರ ಕಡೆಯವರು ಆಮೀಷ ಆಥವಾ ಲಂಚ ನೀಡಿದರೆ.

ಇದನ್ನು ಓದಿ: ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್; ಬರೋಬ್ಬರಿ 1,30,000 ಹುದ್ದೆಗಳ ಭರ್ತಿಗೆ ಅಧಿಸೂಚನೆ!

29. 123(2) RP Act: ಚುನಾವಣೆ ಅಭ್ಯರ್ಥಿ ಅಥವಾ ಅವರ ಕಡೆಯವರು ಅನಗತ್ಯ ಪ್ರಭಾವ ಬೀರಿದರೆ.

30.123(3) RP Act: ಧರ್ಮ, ಜಾತಿ, ಭಾಷೆ ಅಥವಾ ಧಾರ್ಮಿಕ ಚ, ರಾಷ್ಟ್ರೀಯ ಚಿನ್ನ, ರಾಷ್ಟ್ರಧ್ವಜ, ರಾಷ್ಟ್ರ ಲಾಂಭನ ಬಳಸಿ ಮತಯಾಚನೆ ಮಾಡಿದರೆ,

31. 123(3a) RP Act: ಧರ್ಮ, ಜಾತಿ, ಜನಾಂಗ ಮತ್ತು ಭಾಷೆ ಆಧಾರದ ಮೇಲೆ ಗುಂಪು ಗುಂಪುಗಳ ಮದ್ಯ ದ್ವೇಷ ಭಾವನೆ ಹುಟ್ಟು ಹಾಕುವದು.

32. 123(3b) RP Act: ಅಭ್ಯರ್ಥಿ ಅಥವಾ ಅವರ ಏಜೆಂಟ್ ಅಥವಾ ಅಭ್ಯರ್ಥಿಯ ಸಮ್ಮತಿಯೊಂದಿಗೆ ಅಥವಾ ಅವರ ಚುನಾವಣಾ ಏಜೆಂಟರ ಸಮ್ಮತಿಯೊಂದಿಗೆ ಅಥವಾ ಆ ಅಭ್ಯರ್ಥಿಯ ಚುನಾವಣೆಯ ಭವಿಷ್ಯಕ್ಕಾಗಿ ಅಥವಾ ಪರ್ವಾಗ್ರಹದ ಮೇಲೆ ಪರಿಣಾಮ ಬೀರುವ ಅಭ್ಯಾಸದ ಪ್ರಚಾರ ಅಥವಾ ಸತಿ ಆಯೋಗ ಆಥವಾ ಆದರ ವೈಭವೀಕರಣ ಮಾಡಿದರೆ.

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿ, ದೇಶದಾತ್ಯಂತ ಹೊಸ ನಿಯಮ ಜಾರಿ!

33. 123(4) RP ACT: ಅಭ್ಯರ್ಥಿ ಅಥವಾ ಆತನ ಕಡೆಯವರು ಬೇರೆ ಅಭ್ಯರ್ಥಿಯ ವೈಯಕ್ತಿಕ ಚಾರಿತ್ರ್ಯಕ್ಕೆ ಸಂಬಂದಿಸಿದಂತೆ ಸುಳ್ಳು ಹೇಳಿಕೆ ಅಥವಾ ಪ್ರಕಟಣೆ ನೀಡಿದರೆ.

34. 123(5) RP Act: ಮತದಾರರನ್ನು ಕರೆದೊಯ್ಯಲು ಅಭ್ಯರ್ಥಿ ಅಥವಾ ಅವರ ಕಡೆಯವರು ಉಚಿತ ವಾಹನ ವ್ಯವಸ್ಥೆ ಮಾಡಿದರೆ,

35. 123(6) RP Act: ಕಲಂ-77ರ ವಿರುದ್ಧವಾಗಿ ಖರ್ಚು ಮಾಡಿದರೆ ಅಥವಾ ಅಧಿಕಾರ ನೀಡಿದರೆ.

36. 123(7) RP Act: ಚುನಾವಣೆ ಅಭ್ಯರ್ಥಿಯ ಸಹಾಯಕವಾಗುವ ರೀತಿಯಲ್ಲಿ ಸರ್ಕಾರಿ ಸೇವೆಯಲ್ಲಿರುವವರಿಂದ ಅಥವಾ ಯಾವುದೇ ಸಂಸ್ಥೆಗೆ ಸೇರಿದ ವ್ಯಕ್ತಿಗಳಿಂದ ಏನನ್ನಾದರು ಪಡೆಯುವುದು, ಸಂಗ್ರಹಿಸುವದು ಅಥವಾ ಪಡೆಯಲು ಪ್ರಯತ್ನಿಸುವದನ್ನು ಮಾಡಿದರೆ

ಇದನ್ನು ಓದಿ: EPFO​​ನಲ್ಲಿ 2859 ಹುದ್ದೆಗಳಿಗೆ ಬಂಪರ್ ನೇಮಕಾತಿ: ಪಿಯುಸಿ, ಪದವಿ ವಿದ್ಯಾರ್ಹತೆ, ಇಂದೇ ಅರ್ಜಿ ಸಲ್ಲಿಸಿ

37. 123(8) RP Act: ಅಭ್ಯರ್ಥಿಯಿಂದ ಅಥವಾ ಅಭ್ಯರ್ಥಿಯ ಎಜಂಟ್ ರಿಂದ ಅಥವಾ ಇತರ ವ್ಯಕ್ತಿಗಳಿಂದ ಮತಗಟ್ಟೆ ವಶಪಡಿಸಿಕೊಳ್ಳುವ ಕೃತ್ಯ ಜರುಗಿದರೆ,

38. 192, 177 IMV Act: ಉದ್ದೇಶಪೂರ್ವಕವಾಗಿ ನಿಯಮಗಳನ್ನು ಉಲ್ಲಂಘಿಸಿ ವಾಹನ ಬಳಕೆ ಮಾಡಿದ್ದಕ್ಕೆ

39. 186, 188 IPC: ನಿಯಮ ಉಲ್ಲಂಘಿಸಿದರೆ ಮತ್ತು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ

40. ಕಲಂ-3 ಕರ್ನಾಟಕ ಓಫನ್ ‘ಡಿಸಫಿಗೇರಮೆಂಟ್ ಕಾಯ್ದೆ: ವಾಹನದಲ್ಲಿ ಪಕ್ಷದ ಚಿನ್ನವುಳ್ಳ ಧ್ವಜವನ್ನು ಪರವಾನಿಗೆ ಪಡೆಯದೆ ಕಟ್ಟಿಕೊಂಡು ಪ್ರಚಾರ ಮಾಡಿದರೆ ಅಪರಾಧ

41. ಕಲಂ 32,34 ಕೆ.ಇ ಕಾಯ್ದೆ : ಸಾರ್ವಜನಿಕ ಅಪರಾಧ ಸ್ಥಳದಲ್ಲಿ ಅಕ್ರಮವಾಗಿ ಮದ್ಯಸಾರ ಮಾರಟದಲ್ಲಿ ತೊಡಗಿದರೆ

42. ಕಲಂ-14 ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ 1986- ಚಿಕ್ಕ ಮಕ್ಕಳನ್ನು ಚುನಾವಣೆ ಮೆರವಣಿಗೆಯಲ್ಲಿ ಬಳಸಿಕೊಂಡ ಆಪರಾಧಕ್ಕೆ

ಇದನ್ನು ಓದಿ: Airtel ಬಳಕೆದಾರರಿಗೆ ಒಳ್ಳೆಯ ಸುದ್ದಿ; ರೂ100 ಕ್ಯಾಶ್‌ಬ್ಯಾಕ್ ಸೇರಿದಂತೆ Disney Hotstar, Wink Music ಉಚಿತ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.