ದೇಶದಲ್ಲಿ ಖ್ಯಾತವಾಗಿರುವ SBI ಬ್ಯಾಂಕ್ ತನ್ನ ಫೌಂಡೇಶನ್ ವತಿಯಿಂದ ದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಸ್ಕಾಲರ್ಶಿಪ್ (scholarship) ನೀಡಿ ನೆರವಾಗುತ್ತಿದ್ದು, ಪದವಿ ಓದುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
ಹೌದು, ವಿದ್ಯಾರ್ಥಿಗಳು ಆರ್ಥಿಕ ಕಾರಣಗಳಿಂದಾಗಿ ವಿದ್ಯಾಭ್ಯಾಸವನ್ನು ನಿಲ್ಲಿಸಬಾರದು ಹಾಗು ವಿದ್ಯಾರ್ಥಿಗಳ ಏಳಿಗೆಗೆ ಹಣದ ಕೊರತೆ ಕಾರಣ ಆಗಬಾರದು ಎನ್ನುವುದನ್ನು ಮನಗಂಡ SBI ಆಶಾ ಸ್ಕಾಲರ್ಶಿಪ್ ಯೋಜನೆಯಡಿ (SBI Asha Scholarship) ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಸ್ಕಾಲರ್ಶಿಪ್ ನೀಡಿ ನೆರವಾಗುತ್ತಿದ್ದು, ದೇಶದಾದ್ಯಂತ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಈ ಯೋಜನೆಯ ಲಾಭ ಪಡೆಯಬಹುದು
ಇದನ್ನು ಓದಿ: ವಂಶ ರಾಜಕೀಯ ಬಗ್ಗೆ ನಟಿ ಶ್ರುತಿ ಲೇವಡಿ, ಭಾಷಣ ಫುಲ್ ವೈರಲ್, ದಾಖಲಾಯ್ತು ದೂರು!
ಉನ್ನತ NIRF ವಿಶ್ವವಿದ್ಯಾನಿಲಯಗಳು/ಕಾಲೇಜುಗಳು ಮತ್ತು IITಗಳಿಂದ ಪದವಿಪೂರ್ವ ಅಧ್ಯಯನದ ಮೊದಲ ವರ್ಷವನ್ನು ಅನುಸರಿಸುವ ಭಾರತೀಯ ವಿದ್ಯಾರ್ಥಿಗಳಿಗೆ, IIM ಗಳಿಂದ MBA/PGDM, ಮತ್ತು ಪ್ರಧಾನ ಸಂಸ್ಥೆಗಳಿಂದ PhD ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು SBI ಆಶಾ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು. ಬಹುಮಾನಗಳು: ಒಂದು ವರ್ಷಕ್ಕೆ INR 5,00,000 ವರೆಗೆ
ಇದನ್ನು ಓದಿ:Krishi Ashirwad Yojana: ರೈತರಿಗೆ ಪ್ರತಿ ಎಕರೆಗೆ 5000 ಸಹಾಯಧನ, ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ
ಆಶಾ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :
● ಅರ್ಜಿ ಸಲ್ಲಿಸುವ ವಿಧ್ಯಾರ್ಥಿ ಕಡ್ಡಾಯವಾಗಿ ಭಾರತೀಯ ಪ್ರಜೆಯಾಗಿರಬೇಕು.
●ಅಭ್ಯರ್ಥಿಗಳು ದ್ವಿತೀಯ ಪಿಯುಸಿಯನ್ನು ಶೇಕಡ 75% ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿ ಉತ್ತೀರ್ಣವಾಗಿರಬೇಕು.
●ಆಶಾ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವವರು ಪ್ರಥಮ ವರ್ಷದ ಪದವಿ(Degree) ಓದುತ್ತಿರುವ ವಿದ್ಯಾರ್ಥಿಯಾಗಿರಬೇಕು.
●ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು INR 3 ಲಕ್ಷಕ್ಕಿಂತ ಕಡಿಮೆಯಿರಬೇಕು.
ಇದನ್ನು ಓದಿ: ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್: ಈ ಯೋಜನೆಯಡಿ ಪ್ರತಿಯೊಬ್ಬರಿಗೂ 50 ಸಾವಿರ ಉಚಿತ, ಕೂಡಲೇ ಅರ್ಜಿ ಸಲ್ಲಿಸಿ!
ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು :-
ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು SBI ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದ್ದು, ಇದರೊಂದಿಗೆ ಪ್ರಮುಖ ದಾಖಲೆಗಳನ್ನು ಕೂಡ ಅರ್ಜಿಯೊಂದಿಗೆ ಸ್ಖ್ಯಾನ್ ಮಾಡಿ ಲಗತ್ತಿಸಬೇಕು.
ದಾಖಲೆಗಳ ವಿವರ
1. ವಿದ್ಯಾರ್ಥಿಯ ದ್ವಿತೀಯ ಪಿಯುಸಿ ಶೈಕ್ಷಣಿಕ ಪರೀಕ್ಷೆ ಅಂಕಪಟ್ಟಿ
2. ಸರ್ಕಾರ ನೀಡಿರುವ ಗುರುತಿನ ಚೀಟಿ (ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಇತ್ಯಾದಿ…)
3. ಪದವಿಗೆ ಸೇರಿರುವ ಪ್ರವೇಶ ಪ್ರಮಾಣ ಪತ್ರ
4. ವಿದ್ಯಾರ್ಥಿ ಅಥವಾ ಪೋಷಕರ ಬ್ಯಾಂಕ್ ಖಾತೆ
5. ಕುಟುಂಬದ ಆದಾಯ ಪ್ರಮಾಣ ಪತ್ರ
6. ವಿದ್ಯಾರ್ಥಿಯ ಭಾವಚಿತ್ರ ಸಹಿ ಮತ್ತು ಮೊಬೈಲ್ ನಂಬರ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-04-2023
ಇದನ್ನು ಓದಿ: 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ; ಜೂನ್ 14 ಕೊನೆಯ ದಿನ, ಬೇಗನೆ ಈ ಕೆಲಸ ಮಾಡಿ!