Sukanya Samriddhi Yojana: ಹೀಗೆ ಮಾಡಿದ್ರೆ ನಿಮ್ಮ ಕೈಗೆ ಸಿಗಲಿದೆ ಬರೋಬ್ಬರಿ 64 ಲಕ್ಷ ರೂ!

Sukanya Samriddhi Yojana: ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ ಅನೇಕ ಅದ್ಭುತ ಯೋಜನೆಗಳನ್ನು ನೀಡಿತ್ತಿದ್ದು, ಇದರಲ್ಲಿ ಸಣ್ಣ ಉಳಿತಾಯ ಯೋಜನೆಗಳು (Small Savings Scheme) ಉತ್ತಮ ಲಾಭವನ್ನು ನೀಡುತ್ತವೆ ಎಂದು…

sukanya-samriddhi-yojana-vijayaprabha-news

Sukanya Samriddhi Yojana: ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ ಅನೇಕ ಅದ್ಭುತ ಯೋಜನೆಗಳನ್ನು ನೀಡಿತ್ತಿದ್ದು, ಇದರಲ್ಲಿ ಸಣ್ಣ ಉಳಿತಾಯ ಯೋಜನೆಗಳು (Small Savings Scheme) ಉತ್ತಮ ಲಾಭವನ್ನು ನೀಡುತ್ತವೆ ಎಂದು ಹೇಳಬಹುದು. ಇತ್ತೀಚೆಗೆ ಇವುಗಳ ಬಡ್ಡಿದರವನ್ನೂ ಗಣನೀಯವಾಗಿ ಹೆಚ್ಚಿಸಲಾಗಿದೆ. ಇದರಲ್ಲಿ ಹೆಣ್ಣು ಮಕ್ಕಳಿಗಾಗಿ ವಿಶೇಷವಾಗಿ ಪರಿಚಯಿಸಲಾದ ಸುಕನ್ಯಾ ಸಮೃದ್ಧಿ ಯೋಜನೆಯ (Sukanya Samriddhi Yojana) ಬಗ್ಗೆ ತಿಳಿಯೋಣ.

ಇದನ್ನು ಓದಿ: ಇನ್ಮುಂದೆ ಯುಪಿಐ ಮೂಲಕವೂ ಸಿಗಲಿದೆ ಸಾಲ; ಗೂಗಲ್‌ ಪೇ, ಫೋನ್‌ಪೇ ಮೂಲಕ ಸಾಲ ಹೇಗೆ?

ಸುಕನ್ಯಾ ಸಮೃದ್ಧಿ ಯೋಜನೆಯು (Sukanya Samriddhi Yojana) ಹತ್ತು ವರ್ಷದೊಳಗಿನ ಹುಡುಗಿಯರಿಗೆ ಮಾತ್ರ ಅನ್ವಯಿಸುತ್ತದೆ. ಇದಕ್ಕೆ ಸೇರುವುದರಿಂದ ಅನೇಕ ಪ್ರಯೋಜನಗಳಿವೆ. ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಪಾವತಿಸುವುದರಿಂದ ಮೆಚ್ಯೂರಿಟಿಯಲ್ಲಿ ಲಕ್ಷ ಲಕ್ಷ ಕೈಸೇರುತ್ತದೆ. ಆಗ ಹೆಣ್ಣು ಮಕ್ಕಳ ಮದುವೆಗೆ ಅನುಕೂಲವಾಗಲಿದೆ. ಇದು ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಸಹ ಒಳಗೊಂಡಿದೆ. ಈ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಯೋಣ.

Vijayaprabha Mobile App free

ಇದನ್ನು ಓದಿ: ರೇಷನ್‌ ಕಾರ್ಡ್‌ ಇದ್ದವರಿಗೆ ಹೊಸ ರೂಲ್ಸ್‌; ಜೂನ್‌ 30 ರೊಳಗೆ ತಪ್ಪದೇ ಈ ಕೆಲಸ ಮಾಡಿ, ಇಲ್ಲದಿದ್ದರೆ ನಿಮ್ಮ ರೇಷನ್‌ ಕಡಿತ ಪಕ್ಕಾ.!

ಸುಕನ್ಯಾ ಸಮೃದ್ಧಿ ಯೋಜನೆಯು (Sukanya Samriddhi Yojana) ಹೆಣ್ಣು ಮಕ್ಕಳಿಗೆ ಆರ್ಥಿಕ ಉತ್ತೇಜನ ಮತ್ತು ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ತಂದ ಯೋಜನೆಯಾಗಿದೆ. ಅದಕ್ಕೇ ಅದರಲ್ಲಿ ಹೆಣ್ಣುಮಕ್ಕಳಿಗೆ ಮಾತ್ರ ಅವಕಾಶ. ಇನ್ನು, ಹತ್ತು ವರ್ಷಕ್ಕಿಂತ ಒಳಗಿರುವ ಹೆಣ್ಣುಮಕ್ಕಳನ್ನು ಸೇರಬೇಕಾಗುತ್ತದೆ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ.. ಕೂಡಲೇ ಅವರನ್ನು ಇದರಲ್ಲಿ ಸೇರಿಸುವುದು ಉತ್ತಮ. ಮನೆಯಲ್ಲಿ ಗರಿಷ್ಠ ಇಬ್ಬರು ಹೆಣ್ಣು ಮಕ್ಕಳನ್ನು ಸೇರಿಸಿಕೊಳ್ಳಬಹುದು.

ಇದನ್ನು ಓದಿ: ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆ ಬಂದ್, ನಿಮ್ಮ ಹಣ ಪಡೆಯಲು ಸಾಧ್ಯವಿಲ್ಲ!

ಇದೀಗ ಕೇಂದ್ರವೂ ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ ದರ (Interest Rate) ಕೂಡ ಹೆಚ್ಚಿಸಿದೆ. ಮೊದಲು ಶೇ.7.6ರಷ್ಟಿದ್ದ ಬಡ್ಡಿದರ ಈಗ ಶೇ.8ಕ್ಕೆ ಹೆಚ್ಚಿಸಿದ್ದು, 40 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಲಾಗಿದೆ. ಮತ್ತು ಈ ಬಡ್ಡಿದರಗಳನ್ನು ಕೇಂದ್ರವು ಪ್ರತಿ 3 ತಿಂಗಳಿಗೊಮ್ಮೆ ಸರಿಹೊಂದಿಸುತ್ತದೆ. ಈ ಯೋಜನೆಗೆ ಸೇರಲು ಬಯಸುವವರು ಹತ್ತಿರದ ಅಂಚೆ ಕಚೇರಿ (Post office) ಅಥವಾ ಬ್ಯಾಂಕ್‌ಗೆ (Bank) ಹೋಗಿ ಸೇರಿಕೊಳ್ಳಬಹುದು. ಇನ್ನು, ಈ ಯೋಜನೆಯಡಿ ದೀರ್ಘಕಾಲ ಹೂಡಿಕೆ ಮಾಡಬೇಕು.

ಇದನ್ನು ಓದಿ: Airtel ಬಳಕೆದಾರರಿಗೆ ಒಳ್ಳೆಯ ಸುದ್ದಿ; ರೂ100 ಕ್ಯಾಶ್‌ಬ್ಯಾಕ್ ಸೇರಿದಂತೆ Disney Hotstar, Wink Music ಉಚಿತ

ಇನ್ನು, ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯ ಭಾಗವಾಗಿ, ಒಂದು ಆರ್ಥಿಕ ವರ್ಷದಲ್ಲಿ ಗರಿಷ್ಠ 1.50 ಲಕ್ಷ ರೂ ಹೂಡಿಕೆ ಮಾಡಬಹುದು. ಕನಿಷ್ಠ ಎಷ್ಟು ಎಂಬುದು ನಿಮಗೆ ಬಿಟ್ಟದ್ದು. ತಿಂಗಳಿಗೆ ರೂ.5 ಸಾವಿರ ದರದಲ್ಲಿ ಹೂಡಿಕೆ ಮಾಡಿದರೆ ಮೆಚ್ಯೂರಿಟಿಯಲ್ಲಿ ರೂ.25 ಲಕ್ಷದವರೆಗೆ ಸಿಗುತ್ತದೆ. ವರ್ಷಕ್ಕೆ ರೂ.1.50 ಲಕ್ಷ ಪಾಲಿಸಿ ನೋಡಿದರೆ ತಿಂಗಳಿಗೆ ರೂ.12,500 ಪಾವತಿಸಬೇಕಾಗುತ್ತದೆ. ಈ ಖಾತೆಯನ್ನು ಕೇವಲ 250 ರೂ.ಗಳಲ್ಲಿ ತೆರೆಯಬಹುದು. ಈ ಯೋಜನೆಯ ಭಾಗವಾಗಿ, ಖಾತೆಯನ್ನು ತೆರೆದ ನಂತರ 15 ವರ್ಷಗಳವರೆಗೆ ಹಣವನ್ನು ಪಾವತಿಸಬೇಕಾಗುತ್ತದೆ. ನಂತರ ಪಾವತಿಸುವ ಅಗತ್ಯವಿಲ್ಲ. ಮೆಚುರಿಟಿ ಅವಧಿಯು 21 ವರ್ಷಗಳು ಅಂದರೆ ಖಾತೆಯಲ್ಲಿ 21 ನೇ ವರ್ಷಕ್ಕೆ ನೀವು ಒಟ್ಟು ಬಡ್ಡಿಯೊಂದಿಗೆ ಹಣವನ್ನು ಪಡೆಯಬಹುದು. 18 ವರ್ಷ ತುಂಬಿದ ನಂತರ ಸ್ವಲ್ಪ ಮೊತ್ತವನ್ನು ಹಿಂಪಡೆಯಬಹುದು. 21 ವರ್ಷಗಳ ನಂತರ ಪೂರ್ಣ ಮೊತ್ತವನ್ನು ಹಿಂಪಡೆಯಬಹುದು.

ಇದನ್ನು ಓದಿ: EPFO​​ನಲ್ಲಿ 2859 ಹುದ್ದೆಗಳಿಗೆ ಬಂಪರ್ ನೇಮಕಾತಿ: ಪಿಯುಸಿ, ಪದವಿ ವಿದ್ಯಾರ್ಹತೆ, ಇಂದೇ ಅರ್ಜಿ ಸಲ್ಲಿಸಿ

ಇನ್ನು, ಶೇ.7.6ರ ಬಡ್ಡಿಯ ಪ್ರಕಾರ.. ಈ ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ತಿಂಗಳಿಗೆ 12,500 ರೂ.ನಂತೆ ಠೇವಣಿ ಇಟ್ಟರೆ.. 21 ವರ್ಷಕ್ಕೆ ಅಂದರೆ ಮೆಚ್ಯೂರಿಟಿಯ ವೇಳೆಗೆ 64 ಲಕ್ಷ ರೂವರೆಗೆ ಪಡೆಯಬಹುದು. ಇದರಲ್ಲಿ ನಿಮ್ಮ ಹೂಡಿಕೆ ಮೊತ್ತ ರೂ.22,50,000 ಮತ್ತು ಬಡ್ಡಿ ರೂ.41 ಲಕ್ಷಕ್ಕಿಂತ ಹೆಚ್ಚು ಬರುತ್ತದೆ. ಇದರೊಂದಿಗೆ ನಿಮ್ಮ ಒಟ್ಟು ಮೊತ್ತ ರೂ.64 ಲಕ್ಷಗಳಾಗುತ್ತದೆ. ಅಂದರೆ, ಮಗು ಹುಟ್ಟಿದ ತಕ್ಷಣ ಈ ಯೋಜನೆಗೆ ಸೇರಿ ತಿಂಗಳಿಗೆ ರೂ.12,500 ಹೂಡಿಕೆ ಮಾಡುತ್ತ ಬಂದರೆ, ಮಗುವಿಗೆ 21 ವರ್ಷ ತುಂಬಿದಾಗ ರೂ.64 ಲಕ್ಷದವರೆಗೆ ಸಿಗುತ್ತದೆ. ಇನ್ನು, ಪ್ರಸ್ತುತ ಶೇಕಡಾ 8 ರ ಬಡ್ಡಿದರವನ್ನು ಪರಿಗಣಿಸಿದರೆ, ಇದು ಇನ್ನೂ ಹೆಚ್ಚಿರಬಹುದು. ಭವಿಷ್ಯದಲ್ಲಿಯೂ ಈ ಬಡ್ಡಿ ದರಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದರೊಂದಿಗೆ ಈ ಮೆಚ್ಯೂರಿಟಿ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿ, ದೇಶದಾತ್ಯಂತ ಹೊಸ ನಿಯಮ ಜಾರಿ!

ಇನ್ನು, ನೀವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನೀವು ತೆರಿಗೆ ವಿನಾಯಿತಿ ಪ್ರಯೋಜನಗಳನ್ನು(Tax Exemption Benefit) ಸಹ ಪಡೆಯಬಹುದು. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80(ಸಿ) ಅಡಿಯಲ್ಲಿ, ಆರ್ಥಿಕ ವರ್ಷದಲ್ಲಿ ರೂ.1.50 ಲಕ್ಷದವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ. ಉದ್ಯೋಗದಲ್ಲಿರುವವರಿಗೆ ಈ ಯೋಜನೆ ಸೂಕ್ತವಾಗಿದೆ ಎಂದು ಹೇಳಬಹುದು.

ಇದನ್ನು ಓದಿ: ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್; ಬರೋಬ್ಬರಿ 1,30,000 ಹುದ್ದೆಗಳ ಭರ್ತಿಗೆ ಅಧಿಸೂಚನೆ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.