• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಪ್ರಮುಖ ಸುದ್ದಿ

ರಾಜಸ್ಥಾನ ವಿರುದ್ಧ ರೋಚಕ ಜಯ ಸಾದಿಸಿದ ಪಂಜಾಬ್.. ಕೊನೆಯ ಓವರ್ ನಲ್ಲಿ ಥ್ರಿಲ್ಲಿಂಗ್ ಫಿನಿಷ್

VijayaprabhabyVijayaprabha
April 6, 2023
inಪ್ರಮುಖ ಸುದ್ದಿ
0
Punjab vs Rajasthan
0
SHARES
0
VIEWS
Share on FacebookShare on Twitter

ಐಪಿಎಲ್ 2023 ರಲ್ಲಿ ಗುವಾಹಟಿ ಮತ್ತೊಂದು ರೋಚಕ ಪಂದ್ಯ ನಡೆದಿದ್ದು, ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ ಪಂದ್ಯದಲ್ಲಿ ಕೊನೆಯ ಎಸೆತದವರೆಗೂ ಹೋರಾಟ ನಡೆಸಿದ ಪಂಜಾಬ್ ಕಿಂಗ್ಸ್ (Punjab Kings) 5 ರನ್ ಗಳ ರೋಚಕ ಜಯ ಸಾಧಿಸಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ 197 ರನ್ ಗಳಿಸಿತು. 198 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ ಆರಂಭಿಕವಾಗಿ ಸಂಕಷ್ಟಕ್ಕೆ ಸಿಲುಕಿ, ಕೊನೆಯಲ್ಲಿ ಅಸಾಧಾರಣವಾಗಿ ಚೇತರಿಸಿಕೊಂಡಿತು. ಕೊನೆಯ ಓವರ್‌ನಲ್ಲಿ ತಂಡದ ಗೆಲುವಿಗೆ 16 ರನ್‌ಗಳ ಅಗತ್ಯವಿತ್ತು. ಪಂಜಾಬ್ ಬೌಲರ್ ಸ್ಯಾಮ್ ಕರನ್ ಈ ಹಂತದಲ್ಲಿ ಕೊನೆಯ ಓವರ್ ಅನ್ನು ಅತ್ಯಂತ ಚುರುಕಾಗಿ ಬೌಲ್ ಮಾಡಿ ರಾಜಸ್ಥಾನವನ್ನು 192/7 ಗೆ ಕಟ್ಟಿ ಹಾಕಿ 5 ರನ್ ಗಳ ರೋಚಕ ಜಯ ಸಾಧಿಸಲು ಕಾರಣರಾದರು.

ಇದನ್ನು ಓದಿ: ರಶ್ಮಿಕಾ ಮಂದಣ್ಣಗೆ ಶುಭಕೋರಿದ ಮಾಜಿ ಪ್ರಿಯಕರ ರಕ್ಷಿತ್ ಶೆಟ್ಟಿ! ಈ ಸುದ್ದಿ ಸಖತ್ ವೈರಲ್

ಹೌದು, 198 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ಆರಂಭಿಕ ಆಟಗಾರ ಯಶಸ್ವಿ ಜೈಶ್ವಾಲ್ (11) ಮತ್ತು ಪ್ರಾಯೋಗಿಕ ಆರಂಭಿಕ ಅಶ್ವಿನ್ (0) ಕಡಿಮೆ ಸ್ಕೋರ್‌ಗೆ ಔಟಾದರು. ನಂ.3ಕ್ಕೆ ಬಂದ ಜೋಸ್ ಬಟ್ಲರ್ (19 ರನ್) ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. 57ಕ್ಕೆ 3 ವಿಕೆಟ್ ಕಳೆದುಕೊಂಡು ಎಂಬ ಒತ್ತಡದಲ್ಲಿದ್ದ ರಾಜಸ್ಥಾನ ತಂಡಕ್ಕೆ ನಾಯಕ ಸಂಜು ಸ್ಯಾಮ್ಸನ್ (42 ರನ್ ) ಆಸರೆಯಾಗುವ ಪ್ರಯತ್ನ ಮಾಡಿದರು. ಅವರಿಗೆ ದೇವದತ್ ಪಡಿಕ್ಕಲ್ (21ರನ್) ಸ್ವಲ್ಪ ಸಮಯದವರೆಗೆ ಸಹಾಯ ಮಾಡಿದರು ಆದರೆ ಹೆಚ್ಚಿನ ಎಸೆತಗಳನ್ನು ವ್ಯರ್ಥ ಮಾಡಿದರು. ಒಂದು ಹಂತದಲ್ಲಿ ರಾಜಸ್ಥಾನ ಗೆಲುವಿಗೆ 36 ಎಸೆತಗಳಲ್ಲಿ 77 ರನ್‌ಗಳ ಅಗತ್ಯವಿತ್ತು. ಈ ವೇಳೆ ರಿಯಾನ್ ಪರಾಗ್ (20) ಕೂಡ ಔಟಾದರು.

ಇದನ್ನು ಓದಿ: ಖ್ಯಾತ ನಟಿ ನಗ್ಮಾ ಜೊತೆ ಅಫೇರ್..ಖ್ಯಾತ ನಟ ಹೇಳಿದ್ದೇನು? 3 ವಿವಾಹಿತ ನಟರು, ವಿವಾಹಿತ ಕ್ರಿಕೆಟಿಗ, ಆದರೂ 48 ನೇ ವಯಸ್ಸಿನಲ್ಲಿ ನಗ್ಮಾ ಏಕಾಂಗಿ!

ಪಂಜಾಬ್ ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿದ್ದಾಗ ಪಂದ್ಯದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಬಂದ ಧ್ರುವ್ ಜುರೆಲ್ (ಔಟಾಗದೆ 32: 15 ಎಸೆತ) ಭರ್ಜರಿ ಪ್ರದರ್ಶನ ನೀಡಿದರು. ಇವರೊಂದಿಗೆ ಸಿಮ್ರಾನ್ ಹೆಟ್ಮೆಯರ್ (36ರನ್ 18 ಎಸೆತ) ಕೊನೆಯಲ್ಲಿ ಬಾರಿಸಿ ರಾಜಸ್ಥಾನ ತಂಡಕ್ಕೆ ಮತ್ತೆ ಗೆಲುವಿನ ಭರವಸೆ ಮೂಡಿಸಿದರು. ಆದರೆ.. ಕೊನೆಯ ಓವರ್ ಬೌಲ್ ಮಾಡಿದ ಸ್ಯಾಮ್ ಕರಣ್ ಪವಾಡವನ್ನೇ ಮಾಡಿದರು. ಕೊನೆಯ 6 ಎಸೆತಗಳಲ್ಲಿ ರಾಜಸ್ಥಾನಕ್ಕೆ 16 ರನ್‌ಗಳ ಅಗತ್ಯವಿದ್ದ ಹಂತದಲ್ಲಿ ಬೌಲಿಂಗ್ ಮಾಡಿದ ಅವರು ಮೊದಲ 5 ಎಸೆತಗಳಲ್ಲಿ ಒಂದೇ ಒಂದು ಬೌಂಡರಿ ನೀಡಲಿಲ್ಲ. ಇದರಿಂದ ಒತ್ತಡಕ್ಕೆ ಒಳಗಾದ ಹೆಟ್ಮೆಯರ್ ಎರಡನೇ ಎಸೆತದಲ್ಲಿ ರನ್ ಗಳಿಸಲು ಯತ್ನಿಸಿ ರನೌಟ್ ಆದರು.ನಂತರ ಬಂದ ಜೇಸನ್ ಹೋಲ್ಡರ್ ಕೂಡ ಹೊಡೆಯಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ರಾಜಸ್ಥಾನದ ಬ್ಯಾಟ್ಸ್‌ಮನ್‌ಗಳು ಕೇವಲ 10 ರನ್ ಗಳಿಸಲಷ್ಟೇ ಶಕ್ತರಾದರು.

ಇದನ್ನು ಓದಿ: SSCಯಿಂದ 7,500 ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಅಹ್ವಾನ, Degree ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ಆರಂಭಿಕರಾದ ನಾಯಕ ಶಿಖರ್ ಧವನ್ (ಔಟಾಗದೆ 86ರನ್, 56 ಎಸೆತ), ಪ್ರಭಾಸಿಮ್ರಾನ್ ಸಿಂಗ್ (60 ರನ್) ಅರ್ಧಶತಕ ಗಳಿಸಿದರೆ ಜಿತೇಶ್ ಶರ್ಮ (27ರನ್ 16ಎಸೆತ) ಗಳಿಸಿತು . ರಾಜಸ್ಥಾನ್ ರಾಯಲ್ಸ್ ತಂಡದ ಪರ ಜೇಸನ್ ಹೋಲ್ಡರ್ ಎರಡು, ರವಿಚಂದ್ರನ್ ಅಶ್ವಿನ್ ಮತ್ತು ಚಹಾಲ್ ತಲಾ ಒಂದು ವಿಕೆಟ್ ಪಡೆದರು.

ಇನ್ನು ಪಂಜಾಬ್ ಪರ ಅದ್ಬುತ ಬೌಲಿಂಗ್ ಮಾಡಿ 4 ಪಡೆದು ತಂಡದ ಗೆಲುವಿಗೆ ಕಾರಣರಾದ ನಾಥನ್ ಹಿಲ್ಲಿಸ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಇದನ್ನು ಓದಿ: ನನಗೆ ಆ ಎರಡು ಪಕ್ಷಕ್ಕಿಂತ ಮೂರನೇ ಪಕ್ಷ ಮುಖ್ಯ ಎಂದಿದ್ದ ಕಿಚ್ಚ ಸುದೀಪ್, ಇಂದು ಬಿಜೆಪಿ ಸೇರ್ಪಡೆ ಸಾಧ್ಯತೆ!

Tags: An exciting win for Punjab against Rajasthan by 5 runsfeaturedPunjabPunjab against Rajasthan by 5 runsPunjab KingsRajasthanRajasthan RoyalsVIJAYAPRABHA.COMಪಂಜಾಬ್ರಾಜಸ್ಥಾನರಾಜಸ್ಥಾನ ವಿರುದ್ಧ ರೋಚಕ ಜಯ ಸಾದಿಸಿದ ಪಂಜಾಬ್ರಾಜಸ್ಥಾನ್ ರಾಯಲ್ಸ್
Previous Post

ರಶ್ಮಿಕಾ ಮಂದಣ್ಣಗೆ ಶುಭಕೋರಿದ ಮಾಜಿ ಪ್ರಿಯಕರ ರಕ್ಷಿತ್ ಶೆಟ್ಟಿ! ಈ ಸುದ್ದಿ ಸಖತ್ ವೈರಲ್

Next Post

ಶಿಕ್ಷಣ ಇಲಾಖೆಯಿಂದ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ಮೇ.29ರಿಂದ ಶಾಲೆ ಆರಂಭ, ಅ.8ರಿಂದ ದಸರಾ ರಜೆ

Next Post
schools vijayaprabha news

ಶಿಕ್ಷಣ ಇಲಾಖೆಯಿಂದ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ಮೇ.29ರಿಂದ ಶಾಲೆ ಆರಂಭ, ಅ.8ರಿಂದ ದಸರಾ ರಜೆ

Leave a Reply Cancel reply

Your email address will not be published. Required fields are marked *

No Result
View All Result

Recent Posts

  • saffron water: ಆರೋಗ್ಯವೇ ಭಾಗ್ಯ, ಕೇಸರಿ ನೀರಿನ ಅದ್ಬುತ ಪ್ರಯೋಜನಗಳು
  • Dina bhavishya: ಇಂದಿನ ಸುಕರ್ಮ ಯೋಗದಿಂದ ಈ ರಾಶಿಯವರಿಗೆ ಕೆಲಸದಲ್ಲಿ ಉತ್ತಮ ಯಶಸ್ಸು, ಜೀವನದಲ್ಲಿ ಪ್ರಗತಿ..!
  • KPSC Recruitment 2023: 230 ವಾಣಿಜ್ಯ ತೆರಿಗೆ ನಿರೀಕ್ಷಕ ಹುದ್ದೆಗಳಿಗೆ ಅರ್ಜಿ ಅಹ್ವಾನ; ಸೆಪ್ಟೆಂಬರ್ 30 ಕೊನೆ ದಿನ
  • ಅಕ್ಟೋಬರ್ 1ರಿಂದ ಈ ನಿಯಮಗಳಲ್ಲಿ ಬದಲು; ಈಗಲೇ ಈ ಕೆಲಸ ಪೂರ್ಣಗೊಳಿಸಿ
  • Airtel 5G plan: ಏರ್‌ಟೆಲ್ ಬಳಕೆದಾರರಿಗೆ ಗುಡ್ ನ್ಯೂಸ್; ರೂ.99 ಅಗ್ಗದ ಬೆಲೆಗೆ ಅನಿಯಮಿತ 5G ಡೇಟಾ

Recent Comments

    Categories

    • Dina bhavishya
    • Home
    • Jobs News
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    ahomescontents
    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?