ಇಂದು ನ್ಯಾಷನಲ್ ಕ್ರಷ್ ನಟಿ ರಶ್ಮಿಕಾ ಮಂದಣ್ಣ ಬರ್ತ್ ಡೇ ಪ್ರಯುಕ್ತ, ಜಾಲತಾಣದಲ್ಲಿ ಶುಭಾಷಯಗಳ ಮಳೆಯೇ ಸುರಿಯುತ್ತಿದೆ. ವಿವಿಧ ಭಾಷೆಯ ನಟ-ನಟಿಯರು ಸೇರಿದಂತೆ ಅಭಿಮಾನಿಗಳು ರಶ್ಮಿಕಾರಿಗೆ ವಿಷ್ ಮಾಡುತ್ತಿದ್ದಾರೆ. ಫೋಟೋ, ವಿಡಿಯೊ, ಮೀಮ್ಸ್ ಇತ್ಯಾದಿಗಳ ಮೂಲಕ ಜಾಲತಾಣದಲ್ಲಿ ಇದೀಗ ರಶ್ಮಿಕಾರದ್ದೆ ಸದ್ದು. ʻನ್ಯಾಷನಲ್ ಕ್ರಷ್ʼ ಬೆಡಗಿಯನ್ನು ಟ್ಯಾಗ್ ಮಾಡಿ, ಭಿನ್ನ ಶೈಲಿಯಲ್ಲಿ ವಿಷ್ ಮಾಡುವವರಿಗೇನು ಕಡಿಮೆಯಿಲ್ಲ. ಹಾಗಾಗಿ ಸದ್ಯ ಜಾಲತಾಣದಲ್ಲಿ ರಶ್ಮಿಕಾ ಟ್ರೆಂಡ್ ಆಗಿದ್ದಾರೆ.
ಇದನ್ನು ಓದಿ: ನನಗೆ ಆ ಎರಡು ಪಕ್ಷಕ್ಕಿಂತ ಮೂರನೇ ಪಕ್ಷ ಮುಖ್ಯ ಎಂದಿದ್ದ ಕಿಚ್ಚ ಸುದೀಪ್, ಇಂದು ಬಿಜೆಪಿ ಸೇರ್ಪಡೆ ಸಾಧ್ಯತೆ!
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, 27ನೇ ವರ್ಷಕ್ಕೆ ಕಾಲಿಟ್ಟಿರುವ ನಟಿಗೆ ಅಭಿಮಾನಿಗಳು, ಸಿನಿಮಾ ರಂಗದ ಸ್ನೇಹಿತರು ಶುಭಕೋರಿದ್ದಾರೆ. ಇದೀಗ ನಟಿ ರಶ್ಮಿಕಾರ ಮಾಜಿ ಪ್ರಿಯಕರ ರಕ್ಷಿತ್ ಶೆಟ್ಟಿ ಒಡೆತನದ ಪರಂವಃ ಸ್ಟುಡಿಯೋ ಕಡೆಯಿಂದ ರಶ್ಮಿಕಾ ಮಂದಣ್ಣಗೆ ವಿಶ್ ಮಾಡಿದ್ದಾರೆ. ಈ ಮೂಲಕ `ಕಿರಿಕ್ ಪಾರ್ಟಿ’ ಸಹನಟಿಗೆ ರಕ್ಷಿತ್ ಶುಭಕೋರಿದ್ದಾರೆ. ಈ ಪೋಸ್ಟ್ ಸದ್ಯ ಸಖತ್ ವೈರಲ್ ಆಗಿದೆ.
ಇದನ್ನು ಓದಿ: BIG NEWS: ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ, ಏನದು ಪೋರ್ನ್ ಸ್ಟಾರ್-ಟ್ರಂಪ್ ಕೇಸ್?
ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ನಾಯಕಿಯಾಗಿ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದು, 2016ರಲ್ಲಿ ತೆರೆಗೆ ಬಂದ ಈ ಚಿತ್ರವನ್ನು ಪರಂವಃ ಸ್ಟುಡಿಯೋಸ್- ಪುಷ್ಕರ್ ಫಿಲ್ಮ್ಸ್ ಒಟ್ಟಾಗಿ ನಿರ್ಮಾಣ ಮಾಡಿದ್ದು, ಮೊದಲ ಚಿತ್ರದಲ್ಲೇ ರಶ್ಮಿಕಾ ಮಂದಣ್ಣಗೆ ಬಿಗ್ ಬ್ರೇಕ್ ಸಿಕ್ಕಿತು.
ರಶ್ಮಿಕಾ ಮಂದಣ್ಣ ಅವರಿಗೆ ಬರ್ತ್‌ಡೇಗೆ ಶುಭಾಶಯ ತಿಳಿಸಿ ಪರಂವಃ ಸ್ಟುಡಿಯೋಸ್ ಟ್ವೀಟ್ ಮಾಡಿದ್ದು, ರಶ್ಮಿಕಾ ಮಂದಣ್ಣ ಫೋಟೋ ಹಾಕಿ, ಗಾರ್ಜಿಯಸ್ ರಶ್ಮಿಕಾ ಮಂದಣ್ಣಗೆ ಹುಟ್ಟುಹಬ್ಬದ ಶುಭಾಶಯ. ಈ ವರ್ಷ ನಿಮಗೆ ಸಂತೋಷ, ನಗು ಮತ್ತು ಯಶಸ್ಸು ಹೆಚ್ಚಾಗಲಿ ಎಂದು ಪರಂವಃ ಸ್ಟುಡಿಯೋಸ್ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಕೂಡ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಶುಭಕೋರಿದ್ದಾರೆ.
ಇದನ್ನು ಓದಿ: SSCಯಿಂದ 7,500 ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಅಹ್ವಾನ, Degree ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ