2023 ರ ಐಪಿಎಲ್ (IPL) ಆರಂಭಕ್ಕೂ ಮುನ್ನವೇ ಆರ್ಸಿಬಿ ತಂಡಕ್ಕೆ ಆಘಾತ ಎದುರಾಗಿದ್ದು, ಈ ಟೂರ್ನಿ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಆರ್ಸಿಬಿ ತಂಡದ ಪ್ರಮುಖ ಆಟಗಾರರೊಬ್ಬರು ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಇದನ್ನು ಓದಿ: ಆಧಾರ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್
ಹೌದು, ಆರ್ಸಿಬಿ ತಂಡದಲ್ಲಿರುವ ಇಂಗ್ಲೆಂಡ್ನ ಯುವ ಆಲ್ರೌಂಡರ್ ವಿಲ್ ಜಾಕ್ಸ್ ಗಾಯದ ಕಾರಣ ಐಪಿಎಲ್ನಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ನಡೆದ ಬಾಂಗ್ಲಾ ವಿರುದ್ಧದ ಸರಣಿಯ ವೇಳೆ ಜಾಕ್ಸ್ ಗಾಯಗೊಂಡಿದ್ದರು ಎನ್ನಲಾಗಿದೆ.
ಇದನ್ನು ಓದಿ: WPL 2023: ಪೆರ್ರಿ, ಡಿವೈನ್ ಮ್ಯಾಜಿಕ್, ಕನಿಕಾ, ರಿಚಾ ಅದ್ಬುತ ಬ್ಯಾಟಿಂಗ್; ಆರ್ಸಿಬಿಗೆ ಭರ್ಜರಿ ಗೆಲುವು
IPL 2023 ಟೂರ್ನಿಯಿಂದ ಹೊರಬಿದ್ದ ಆಟಗಾರರು ಇವರೇ ನೋಡಿ;
ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾದ ಮುಂಬೈ ಇಂಡಿಯನ್ಸ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಆರು ತಿಂಗಳ ಕಾಲ ಭಾರತ ತಂಡದಿಂದ ಹೊರಗುಳಿಯಲಿದ್ದಾರೆ ಮತ್ತು ಐಪಿಎಲ್ 2023ರಿಂದ ಹೊರಗುಳಿದಿದ್ದಾರೆ.
ಇನ್ನು, ಉಳಿದಂತೆ ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಕೂಡ ಈ ಬಾರಿಯ ಐಪಿಎಲ್ ಆವೃತ್ತಿಯಿಂದ ಹೊರಗೆ ಬಿದ್ದಿದ್ದಾರೆ. ಇತರ ಆಟಗಾರರಲ್ಲಿ ಮುಂಬೈ ಇಂಡಿಯನ್ಸ್ನ ಝೈ ರಿಚರ್ಡ್ಸನ್, ರಾಜಸ್ಥಾನ ರಾಯಲ್ಸ್ನ ಪ್ರಸಿದ್ಧ್ ಕೃಷ್ಣ ಮತ್ತು ಚೆನ್ನೈ ಸೂಪರ್ ಕಿಂಗ್ಸ್ನ ಕೈಲ್ ಜೇಮಿಸನ್ ಕೂಡ ಐಪಿಎಲ್ 2023ರಿಂದ ಹೊರಗುಳಿದಿದ್ದಾರೆ.
ಇದನ್ನು ಓದಿ: ಡಬಲ್ ಧಮಾಕಾ..ನಿಮ್ಮ ಖಾತೆಗೆ ಶೀಘ್ರ ₹4,000..!