ದಾವಣಗೆರೆ: ಅಗ್ನಿ ಶಾಕ್ಷಿಯಾಗಿ ಮದುವೆಯಾದ ಪತಿಯನ್ನೇ ಪತ್ನಿ ಕೊಲೆ ಮಾಡಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದ್ದು, ಬೆಣ್ಣೆನಗರಿ ಜನರು ಬಿಚ್ಚಿಬೀಳಿಸುವಂತಿದೆ. ಪ್ರಿಯಕರನ ಜತೆಗಿನ ಸಂಬಂಧಕ್ಕೆ ಅಡ್ಡವಾದ ಎಂದು ಪತ್ನಿಯೇ ತನ್ನ ಗಂಡನನ್ನೇ ಕೊಲೆ ಮಾಡಿಸಿದ್ದು, ಈಗ ಪೊಲೀಸ್ ಅತಿಥಿಯಾಗಿದ್ದಾಳೆ.
ಇದನ್ನು ಓದಿ: ದಾವಣಗೆರೆ: ಭೀಕರ ಅಗ್ನಿ ಅವಗಢ; ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗಳು ಭಸ್ಮ
ಹೌದು, ಫೆಬ್ರುವರಿ 28 ರಂದು ದಾವಣಗೆರೆ ನಗರದ ಕಬ್ಬೂರು ಬಸಪ್ಪ ನಗರದಲ್ಲಿ ಪ್ರಶಾಂತ ಎಂಬ ವ್ಯಕ್ತಿಯ ಕೊಲೆಯಾಗಿದ್ದು, ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಆರ್ಎಂಸಿ ಠಾಣೆ ಪೊಲೀಸರು, ಇದೀಗ ಕೊಲೆ ರಹಸ್ಯ ಭೇದಿಸಿದ್ದಾರೆ. ಕೊಲೆ ಮಾಡಿಸಿದ್ದು ಬೇರೆ ಯಾರು ಅಲ್ಲ ಸ್ವತಃ ಅಗ್ನಿ ಸಾಕ್ಷಿಯಾಗಿ ಮದುವೆಯಾಗಿ ತಾಳಿ ಕಟ್ಟಿಸಿಕೊಂಡ ಹೆಂಡತಿ ಎಂಬ ಸತ್ಯ ಕೊಲೆಯಾದ ಒಂಬತ್ತು ದಿನಗಳ ಬಳಿಕ ಗೊತ್ತಾಗಿದೆ.
ಇದನ್ನು ಓದಿ: ಭಾರತಕ್ಕೆ ಒಲಿದು ಬಂತು ಎರಡು ‘ಆಸ್ಕರ್’ ಪ್ರಶಸ್ತಿ..; ಆಸ್ಕರ್ ಗೆದ್ದ ಭಾರತೀಯರು ಇವರೇ ನೋಡಿ
ಕೊಲೆಯಾದ ಪ್ರಶಾಂತ ಅವರ ಪತ್ನಿ ರೇಣುಕಾ ಇನ್ನೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದು ಪತಿಗೆ ಗೊತ್ತಾಗಿದ್ದು, ಈ ವಿಷಯಕ್ಕೆ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಫೆಬ್ರುವರಿ 28 ರಂದು ಪ್ರಶಾಂತ್ ಅವರ ಸ್ನೇಹಿತ ರಾಕೇಶ್ ಎಂಬಾತ ಬಂದು, ಒಂದು ಕಡೆ ಕೋಳಿ ಚೆನ್ನಾಗಿವೆ ಎಂದು ಹೇಳಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದ.
ಇದನ್ನು ಓದಿ: ಎಸ್‌ಬಿಐನಲ್ಲಿ ರೂ.1 ಲಕ್ಷ ಠೇವಣಿ ಇಟ್ಟರೆ ನಿಮಗೆ ಎಷ್ಟು ಸಿಗುತ್ತದೆ? ನೀವೇ ತಿಳಿದುಕೊಳ್ಳಿ..
ಕೊಲೆಯಾದ ಪ್ರಶಾಂತ ಅವರ ಪತ್ನಿ ರೇಣುಕಾ ದಾವಣಗೆರೆ ತಾಲೂಕಿನ ಹದಡಿ ನಿವಾಸಿವಾಗಿದ್ದು, ಮದುವೆಯಾಗಿ ನಾಲ್ಕು ವರ್ಷವಾಗಿದ್ದು, ಇವರಿಗೆ ಮೂರು ವರ್ಷದ ಗಂಡು ಮಗ ಕೂಡ ಇದೆ. ಪ್ರಶಾಂತ್ನದ್ದು ಟೈಲ್ಸ್ ಕೆಲ್ಸ. ಕೈ ತುಂಬ ದುಡ್ಡು, ಆದ್ರೆ ಮನೆಯಲ್ಲಿ ನೆಮ್ಮದಿ ಇರಲಿಲ್ಲ. ಏಕೆಂದರೆ, ಪತ್ನಿ ಪರ ಪರುಷನ ಸಂಘ ಮಾಡಿದ್ದಳು. ವಿಚಿತ್ರ ಎಂದರೆ ಕೊಲೆಯಾದ ದಿನ ತನಗೆ ಎನು ಗೊತ್ತಿಲ್ಲ ಎಂದು ಪತ್ನಿ ರೇಣುಕಾ ನಾಟಕವಾಡಿದ್ದಳು.
ಈ ವಿಷಯ ಕೊಲೆಯಾದ ಒಂಬತ್ತು ದಿನಗಳ ಬಳಿಕ ಪೊಲೀಸ್ ವಿಚಾರಣೆಯಲ್ಲಿ ಸತ್ಯ ಗೊತ್ತಾಗಿದ್ದು, ಪೊಲೀಸರು ಪ್ರಶಾಂತ್ ಪತ್ನಿ ರೇಣುಕಾ ಹಾಗೂ ಅವಳ ಪ್ರೀಯಕರ ರಾಕೇಶ್ನನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಇದನ್ನು ಓದಿ: ಮಹಿಳಾ ಗ್ರಾಮ ಲೆಕ್ಕಾಧಿಕಾರಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ