ಪಡಿತರ ಚೀಟಿ, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಭರ್ಜರಿ ಸಿಹಿ ಸುದ್ದಿ..!

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮತ್ತು ಪಡಿತರ ಚೀಟಿಯಲ್ಲಿನ ವಿವಿಧ ವಿವರಗಳಿಂದ ತೊಂದರೆ ಅನುಭವಿಸುತ್ತಿರುವವರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು, ಕೇಂದ್ರ…

Aadhaar Card, Voter ID, Driving License, Ration Card

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮತ್ತು ಪಡಿತರ ಚೀಟಿಯಲ್ಲಿನ ವಿವಿಧ ವಿವರಗಳಿಂದ ತೊಂದರೆ ಅನುಭವಿಸುತ್ತಿರುವವರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು, ಕೇಂದ್ರ ಸರ್ಕಾರ ನೀಡುತ್ತಿರುವಂತಹ ಹೊಸ ಯೋಜನೆಯಿಂದಾಗಿ ಖಂಡಿತವಾಗಿ ಸಾಕಷ್ಟು ಜನರಿಗೆ ನೆಮ್ಮದಿ ಸಿಗಲಿದೆ.

ಇದನ್ನು ಓದಿ: ಪ್ಯಾನ್-ಆಧಾರ್ ತಕ್ಷಣ ಲಿಂಕ್ ಮಾಡಿ; ಈ ಕೆಲಸ ಮಾಡದಿದ್ದರೆ ಕಠಿಣ ಕ್ರಮ ತಪ್ಪಿದ್ದಲ್ಲ: ಸೆಬಿ ಎಚ್ಚರಿಕೆ

ಹೌದು, ಬಹುತೇಕ ಜನರು ವೋಟರ್ ಐಡಿ( Voter ID) ಡ್ರೈವಿಂಗ್ ಲೈಸೆನ್ಸ್ (Driving License) ಹಾಗೂ ರೇಷನ್ ಕಾರ್ಡ್ (Ration Card) ಅನ್ನು ಹೊಂದಿದ್ದು, ಕೆಲವೊಮ್ಮೆ ಮೂರು ಗುರುತಿನ ಚೀಟಿಗಳಲ್ಲಿ ಕೂಡ ಬೇರೆ ಬೇರೆ ರೀತಿಯ ವಿಳಾಸ ಅಥವಾ ವಿವರಗಳು ಇರಬಹುದು.

Vijayaprabha Mobile App free

ಇದನ್ನು ಓದಿ: EPFO: ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ.. ನಿಮ್ಮ ಪಿಎಫ್ ಬ್ಯಾಲೆನ್ಸ್ ಎಷ್ಟಿದೆ ಫೋನ್‌ಗೆ ಮೆಸೇಜ್ ಬರುತ್ತೆ.. ಬೇಕಿದ್ದರೆ ಟ್ರೈ ಮಾಡಿ!

ಇಂತವರು ಬೇರೆ ಬೇರೆ ವಿವರಗಳನ್ನು ಬದಲಾಯಿಸಲು ಬೇರೆ ಬೇರೆ ಕೇಂದ್ರಗಳಿಗೆ ಹೋಗುವ ಸಾಧ್ಯತೆಯೂ ಹೆಚ್ಚು. ಈ ಪ್ರಮುಖ ದಾಖಲೆಗಳಲ್ಲಿ ಇರುವಂತಹ ವಿವರಗಳನ್ನು ಸದ್ಯಕ್ಕೆ ಒಂದೇ ಸ್ಥಳದಲ್ಲಿ ಬದಲಾಯಿಸುವುದು ಕಷ್ಟಕರವಾಗಿದ್ದು, ಆದರೆ ಮುಂದಿನ ದಿನಗಳಲ್ಲಿ ಇದು ಕೇಂದ್ರ ಸರ್ಕಾರದ ಈ ಹೊಸ ಯೋಜನೆಯ ಮೂಲಕ ಸುಲಭವಾಗಿರಲಿದೆ.

ಇದನ್ನು ಓದಿ: ಗುಡ್‌ನ್ಯೂಸ್‌: ಸರ್ಕಾರದಿಂದ 5 ಲಕ್ಷ ರೂ..!

ಹೌದು, ಇದಕ್ಕಾಗಿಯೇ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊಸ ವೇದಿಕೆಯನ್ನು ನಿರ್ಮಾಣ ಮಾಡುತ್ತಿದೆ ಎನ್ನಲಾಗಿದ್ದು, ಆಧಾರ್ ಕಾರ್ಡ್‌ನಲ್ಲಿ ವಿಳಾಸ ಸೇರಿದಂತೆ ಯಾವುದೇ ವಿವರಗಳನ್ನು ಬದಲಾಯಿಸಿದರೆ, ವಿವರಗಳು ಇತರ ದಾಖಲೆಗಳಲ್ಲಿಯೂ ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತವೆ ಎಂದು ಘೋಷಿಸಲಾಗಿದೆ. ಇತರ ದಾಖಲೆಗಳಲ್ಲಿ ಬದಲಾವಣೆಗಾಗಿ ಕಚೇರಿಗಳ ಸುತ್ತ ಸುತ್ತುವ ಅವಶ್ಯಕೆತೆಯಿಲ್ಲ. ಶೀಘ್ರದಲ್ಲೇ ಈ ತಂತ್ರಾಂಶ ಲಭ್ಯವಾಗಲಿದೆ ಎಂದು ವರದಿಯಾಗಿದೆ.

ಇದನ್ನು ಓದಿ: ಯಶಸ್ವಿನಿ ಯೋಜನೆ ನೋಂದಣಿ: ಮತ್ತೆ ಅವಧಿ ವಿಸ್ತರಿಸಿದ ರಾಜ್ಯ ಸರ್ಕಾರ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.