ದಾವಣಗೆರೆ : ಜಿಲ್ಲೆಯ ಚೆನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಲಂಚದ ಕೇಸ್ನಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದು,l ಶಾಸಕ ವಿರೂಪಾಕ್ಷಪ್ಪ ಎಲ್ಲಿದ್ದಾರೆ ಎಂಬುದೇ ಪತ್ತೆಯಾಗಿಲ್ಲ. ದಾಳಿ ನಡೆದು 3 ದಿನಗಳು ಕಳೆದರು ಅವರ ಸುಳಿವು ಲಭ್ಯವಾಗಿಲ್ಲ. ಇದೀಗ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಒತ್ತಡ ಹೇರುವ ಸಾಧ್ಯತೆ ಇದೆ.
ಈ ನಡುವೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮೊಬೈಲ್ ಸಹ ಸ್ವಿಚ್ ಆಫ್ ಆಗಿದ್ದು, ಲೊಕೇಶನ್ ಟ್ರ್ಯಾಕ್ ಮಾಡುವುದು ಸಹ ಅಸಾಧ್ಯದ ಮಾತಾಗಿದೆ. ಲೋಕಾಯುಕ್ತ ಅಧಿಕಾರಿಗಳ ಕಣ್ಣು ತಪ್ಪಿಸಿ ಓಡಾಡ್ತಿರೋ ಶಾಸಕ ಮಾಡಾಳು ವಿರೂಪಾಕ್ಷಪ್ಪ, ನಿರೀಕ್ಷಣಾ ಜಾಮೀನು ಸಲ್ಲಿಸೋಕು ಹರಸಾಹಸ ಪಡ್ತಿದ್ದಾರೆ ಎನ್ನಲಾಗಿದೆ.
ಆದರೆ, ಅದಕ್ಕೂ ಮೊದಲೇ ಲೋಕಾಯುಕ್ತ ಅಧಿಕಾರಿಗಳು ಅಲರ್ಟ್ ಆಗಿದ್ದು, ಶಾಸಕರಿಗೆ ಜಾಮೀನು ನೀಡದಂತೆ ಆಕ್ಷೇಪ ಸಲ್ಲಿಸಲು ಅಧಿಕಾರಿಗಳು ತೆರೆಮರೆ ಸಿದ್ಧತೆ ಮಾಡಿಕೊಳ್ತಿದ್ದಾರೆ. ಅದಕ್ಕಾಗಿ ಕಾನೂನು ವಿಭಾಗದಿಂದ ಸೂಕ್ತ ದಾಖಲೆಗಳ ಸಂಗ್ರಹ ಮತ್ತು ಶಾಸಕ ಮಾಡಾಳು ವಿರೂಪಾಕ್ಷಪ್ಪ ಪಾತ್ರದ ಬಗ್ಗೆ ಸೂಕ್ತ ಅಂಶಗಳನ್ನ ಕಲೆ ಹಾಕ್ತಿದ್ದಾರೆ ಎನ್ನಲಾಗಿದೆ.