ಕೆಜಿಎಫ್ ಚಾಪ್ಟರ್ 3 ಬಗ್ಗೆ ಬಿಗ್ ನ್ಯೂಸ್, ರಾಕಿ ಭಾಯ್ ಹವಾ ಮತ್ತೆ ಶುರು!

ಕೆಜಿಎಫ್ ಚಿತ್ರದಲ್ಲಿ ರಾಕಿ ಭಾಯ್ ಪಾತ್ರದಲ್ಲಿ ನಟಿಸುವ ಮೂಲಕ ರಾಕಿಂಗ್ ಸ್ಟಾರ್ ಯಶ್ ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಕೆಜಿಎಫ್ ಚಿತ್ರದ ಎರಡೂ ಭಾಗಗಳನ್ನು ನೋಡಿದ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದು, ಗಲ್ಲಾಪೆಟ್ಟಿಗೆಯನ್ನು ಕೊಳ್ಳೆಹೊಡೆದು ಬಿರುಗಾಳಿಯನ್ನು ಎಬ್ಬಿಸಿತ್ತು.

ಕಳೆದ ವರ್ಷ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರ ಬರೋಬ್ಬರಿ 1200 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕೊಳ್ಳೆಹೊಡೆದಿತ್ತು 

 ಮೊದಲ ದಿನವೇ ಥಿಯೇಟರ್‌ಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆ ಬರೆದಿತ್ತು. 

ಈ ಚಿತ್ರದಲ್ಲಿ ಯಶ್ ಸೇರಿದಂತೆ ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ ದತ್ ಸೇರಿದಂತೆ ಹಲವರು ಅದ್ಭುತವಾಗಿ ನಟಿಸಿ, ಪ್ರೇಕ್ಷಕರನ್ನು ರಂಜಿಸಿದ್ದರು. 

ಈಗ ಕೆಜಿಎಫ್ ಚಿತ್ರದ ಮೂರನೇ ಭಾಗದ ಬಗ್ಗೆ ದೊಡ್ಡ ಅಪ್ಡೇಟ್ ಬಂದಿದೆ.

ಕೆಜಿಎಫ್ ಚಾಪ್ಟರ್ 2 ಚಿತ್ರ ಒಂದು ವರ್ಷವನ್ನು ಪೂರೈಸಿದ ಸಂದರ್ಭದಲ್ಲಿ, ತಯಾರಕರು ಹೊಂಬಾಳೆ ಫಿಲ್ಮ್ಸ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 

ಕೆಜಿಎಫ್ ಚಾಪ್ಟರ್ 2 ಚಿತ್ರ ಒಂದು ವರ್ಷವನ್ನು ಪೂರೈಸಿದ ಸಂದರ್ಭದಲ್ಲಿ, ತಯಾರಕರು ವೀಡಿಯೊ ಹಂಚಿಕೊಂಡಿದ್ದು,1978 ರಿಂದ 1981 ರವರೆಗೆ ರಾಕಿ ಭಾಯ್ ಎಲ್ಲಿ ಹೋದರು, ಆ ನಾಲ್ಕು ವರ್ಷಗಳಲ್ಲಿ ರಾಕಿ ಏನು ಮಾಡಿದರು ಎಂಬುದೇ ಮುಂದಿನ ಭಾಗವಾಗಿದೆ 

ಇನ್ನು, ಕೆಜಿಎಫ್ ಅಧ್ಯಾಯ 3 ಕಥೆಯನ್ನು ನಾಲ್ಕು ವರ್ಷಗಳ ನಂತರ ಪೂರ್ಣಗೊಳಿಸಲಾಗುವುದು ಎಂದು ತಯಾರಕರು ತಿಳಿಸಿದ್ದಾರೆ.

ಈ ವೀಡಿಯೊ ನೋಡಿದ ಜನರು ಥಿಯೇಟರ್‌ಗಳಲ್ಲಿ ಕೆಜಿಎಫ್ ಅಧ್ಯಾಯ 3 ಅನ್ನು ನೋಡಲು ಎದುರು ನೋಡುತ್ತಿದ್ದು, ರಾಕಿ ಭಾಯ್ ಪಾತ್ರ ಹೇಗೆ ಇರಲಿದೆ ಎಂದು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಕಾಯಿತ್ತಿದ್ದಾರೆ.

ಕೆಲವು ವರದಿಗಳ ಪ್ರಕಾರ, ಕೆಜಿಎಫ್ ಅಧ್ಯಾಯ 3 ಚಿತ್ರೀಕರಣ 2025 ರಲ್ಲಿ ಪ್ರಾರಂಭವಾಗಲಿದೆ ಎನ್ನಲಾಗಿದೆ. 

ಸದ್ಯ, ಯಶ್ ಮುಂದಿನ ಸಿನಿಮಾ ಹೆಸರಿಡದ YASH19 ಘೋಷಣೆಯಾಗಿದ್ದು, ಈ ಚಿತ್ರದಲ್ಲಿ ಖ್ಯಾತ ನಟಿ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎನ್ನಲಾಗಿದೆ