CRPF ನಲ್ಲಿ 9,212 ಕಾನ್ಸ್‌ಟೇಬಲ್‌ ಹುದ್ದೆಗಳು; SSLC ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ

Vijayaprabha

CRPF (Central Reserve Police Force) ನಲ್ಲಿ 9,212 ಕಾನ್ಸ್‌ಟೇಬಲ್ (ತಾಂತ್ರಿಕ, ಟ್ರೇಡ್ಸ್‌ಮ್ಯಾನ್) ಹುದ್ದೆಗಳನ್ನು ಭರ್ತಿ ಮಾಡಲು ಇಂದಿನಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್ 25ರವರೆಗೆ ಅರ್ಜಿ ಹಾಕಲು ಅವಕಾಶವಿದೆ. ವಿವಿಧ ರಾಜ್ಯಗಳಲ್ಲಿ ವಿವಿಧ ಸಂಖ್ಯೆ ಹುದ್ದೆಗಳಿದ್ದು, ಹುದ್ದೆಗೆ ಅನುಗುಣವಾಗಿ 10ನೇ, ITI ಪಾಸ್, ಹೆವಿ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.

ಇದನ್ನು ಓದಿ: ಏರ್‌ಟೆಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಒಂದೇ ಕನೆಕ್ಷನ್‌ನಲ್ಲಿ 2 ಸಿಮ್‌ಗಳು, ಉಚಿತ DTH, OTT, ಅನಿಯಮಿತ ಡೇಟಾ!

ಇನ್ನು, ಆನ್ ಲೈನ್ ಅರ್ಜಿಗಳನ್ನು ಸ್ವೀಕರಿಸಲು ಮತ್ತು ಆನ್ ಲೈನ್ ಶುಲ್ಕ ಪಾವತಿಸಲು ಕೊನೆಯ ದಿನಾಂಕ 25/04/2023 ಆಗಿದ್ದು, CBT, ಸ್ಕಿಲ್ ಟೆಸ್ಟ್, ಫಿಸಿಕಲ್ ಟೆಸ್ಟ್ ಮೂಲಕ ಆಯ್ಕೆ ನಡೆಯಲಿದ್ದು, ಜುಲೈ 1-13 ರ ನಡುವೆ ಪರೀಕ್ಷೆಗಳು ನಡೆಯಲಿವೆ.

ಇದನ್ನು ಓದಿ: ಪಡಿತರ ಚೀಟಿ ಹೊಂದಿರುವವರಿಗೆ ಗುಡ್ ನ್ಯೂಸ್.. ಮೋದಿ ಸರ್ಕಾರ್ ಮಹತ್ವದ ನಿರ್ಧಾರ!

ಹುದ್ದೆಗಳ ಸಂಪೂರ್ಣ ವಿವರ:

ಹುದ್ದೆಗಳ ಹೆಸರು : ಕಾನ್ಸ್‌ಟೇಬಲ್‌ (ಟೆಕ್ನಿಕಲ್ ಮತ್ತು ಟ್ರೇಡ್ಸ್‌ಮನ್) ಹುದ್ದೆಗಳು, 9212 (ಪುರುಷರಿಗೆ- 9105, ಮಹಿಳೆಯರಿಗೆ-107) ಹುದ್ದೆಗಳು. ಕರ್ನಾಟಕದ ಅಭ್ಯರ್ಥಿಗಳಿಗೆ ಹುದ್ದೆಗಳ ಸಂಖ್ಯೆ : 460+6 ಮಹಿಳಾ ಹುದ್ದೆಗಳು ಸೇರಿ

ವಿದ್ಯಾರ್ಹತೆ: CRPF ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು ಮತ್ತು ಕೆಲವೊಂದು ಟೆಕ್ನಿಕಲ್ ಹುದ್ದೆಗಳಿಗೆ ಐಟಿಐ ಪಾಸ್‌ ಮಾಡಿ, ಒಂದು ವರ್ಷ ತರಬೇತಿ ಪಡೆದವರು ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ: ನಿಮ್ಮ ಆಧಾರ್‌-ಪ್ಯಾನ್‌ ಲಿಂಕ್‌ ಆಗದಿದ್ದರೆ ಸಮಸ್ಯೆ ಏನು? 1000 ರೂ ದಂಡದೊಂದಿಗೆ ಸುಲಭವಾಗಿ ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿ

ವಯಸ್ಸಿನ ಅರ್ಹತೆಗಳು : ಕಾನ್ಸ್‌ಟೇಬಲ್‌ (ಡ್ರೈವರ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ರಿಂದ 27 ಗರಿಷ್ಠ ವಯಸ್ಸಾಗಿರಬೇಕು ಮತ್ತು ಕಾನ್ಸ್‌ಟೇಬಲ್ ಇತರೆ ಎಲ್ಲ ವಿಭಾಗ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ರಿಂದ ಗರಿಷ್ಠ 23 ವರ್ಷದ ವರೆಗೆ ವಯಸ್ಸಾಗಿರಬೇಕು.

ಇನ್ನು, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯಸ್ಸಿನ ಸಡಿಲಿಕೆ ಇದ್ದು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ. ಮಾಜಿ ಸೈನಿಕರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.

ಇದನ್ನು ಓದಿ: ನರೇಗಾ ಯೋಜನೆ: ಈ ಯೋಜನೆಯಡಿ 2.5 ಲಕ್ಷ ರೂಪಾಯಿ ಸಹಾಯಧನ, ನೂರು ದಿನಗಳ ಉದ್ಯೋಗ, ಜಾಬ್‌ಕಾರ್ಡ್ ಪಡೆಯುವುದು ಹೇಗೆ?

ಪ್ರಮುಖ ದಿನಾಂಕಗಳು:

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 27.03.2023

ಆನ್ ಲೈನ್ ಅರ್ಜಿಗಳನ್ನು ಸ್ವೀಕರಿಸಲು, ಶುಲ್ಕ ಪಾವತಿಸಲು ಕೊನೆಯ ದಿನಾಂಕ: 25/04/2023 ಆಗಿದೆ

ಕಂಪ್ಯೂಟರ್ ಆಧಾರಿತ ಪರೀಕ್ಷೆ ಬರೆಯಲು ಅಡ್ಮಿಟ್ ಕಾರ್ಡ್ ಬಿಡುಗಡೆ ದಿನಾಂಕ: 20/06/2023 ರಿಂದ 25/06/2023 ವರೆಗೆ

ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವೇಳಾಪಟ್ಟಿ (Tentative) ದಿನಾಂಕ: 01/07/2023 ರಿಂದ 13/07/2023 ವರೆಗೆ

ಇದನ್ನು ಓದಿ: ಬೆಂಗಳೂರು ಮೆಟ್ರೋದಲ್ಲಿ ಖಾಯಂ ಉದ್ಯೋಗ; ತಿಂಗಳಿಗೆ 25,000 ರಿಂದ 94500 ರೂ ಸಂಬಳ, ಇಂದೇ ಅರ್ಜಿ ಸಲ್ಲಿಸಿ

ಕರ್ನಾಟಕದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ಕೇಂದ್ರಗಳು:

ದಾವಣಗೆರೆ, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ, ಬೆಂಗಳೂರು, ಬೀದರ್, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಧಾರವಾಡ, ಗುಲ್ಬರ್ಗ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಪುತ್ತೂರು, ಶಿವಮೊಗ್ಗ, ತುಮಕೂರು, ಉಡುಪಿ.

ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್ ಸೈಟ್ www.crpf.gov.in ಕ್ಲಿಕ್ ಮಾಡಿ

ನೋಟಿಫಿಕೇಶನ್ ಗಾಗಿ ಪಿಡಿಎಫ್ ಫೈಲ್ ಕ್ಲಿಕ್ ಮಾಡಿರಿ.

ಇದನ್ನು ಓದಿ: PPF Account: ಸರ್ಕಾರದ ಈ ಯೋಜನೆ ಲಕ್ಷಾಧಿಪತಿಗಳನ್ನಾಗಿಸುತ್ತದೆ; ಹೂಡಿಕೆ ಕಡಿಮೆ, ಬಡ್ಡಿಯೊಂದಿಗೆ ಕೋಟಿಗೂ ಹೆಚ್ಚು ಲಾಭ..!

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version