ಕರ್ನಾಟಕ ಜನರಿಗೆ ಬಹಿರಂಗ ಸವಾಲ್!; ನಿಮ್ಮದೇ ಉತ್ತಮ ಪ್ರಜಾಕೀಯ ಪಕ್ಷ ಸಿದ್ಧವಿದೆ : ಉಪೇಂದ್ರ

Vijayaprabha

ಬೆಂಗಳೂರು: ಪ್ರಜಾಕಿಯ ಪಕ್ಷದ ಸ್ಥಾಪಕ, ರಿಯಲ್ ಸ್ಟಾರ್ ಉಪೇಂದ್ರ ಅವರು ಯಾರನ್ನು ಪ್ರಜಾಪ್ರತಿನಿದಿಗಳಾಗಿ ಜನರು ಆಯ್ಕೆ ಮಾಡಬೇಕು ಎಂದು ಟ್ವೀಟ್ ಮಾಡಿದ್ದು, “ಎಲ್ಲಿಯವರೆಗೆ ನಾವು ಖ್ಯಾತ ವ್ಯಕ್ತಿಗಳು, ಸಮಾಜದಲ್ಲಿ ಹೆಸರು ಮಾಡಿರುವವರು AT LEAST ನಮ್ ಏರಿಯಾದಲ್ಲಿ ಕೆಲಸ ಮಾಡುವವನಿಗೆ (ಸಮಾಜ ಸೇವೆ, ಹೋರಾಟ) ನಮ್ಮ ಜನಪ್ರತಿನಿಧಿ ಗಳಾಗಬೇಕು ನಾಯಕರಾಗಬೇಕು) ಎಂಬ ಮನೋಭಾವದಿಂದ ನೀವು ಹೊರ ಬರುವುದಿಲ್ಲವೋ ಅಲ್ಲಿಯವರೆಗೆ ಹೊಸಬರ ಕಾರ್ಮಿಕ ಸಂಸ್ಕೃತಿ ಪ್ರಜಾಕೀಯ ಅಸಾಧ್ಯ!”ಎಂದು ತಿಳಿಸಿದ್ದಾರೆ.

ನನ್ನ ಮತ ಪಕ್ಷಕ್ಕಲ್ಲ , ವ್ಯಕ್ತಿಗಲ್ಲ , ವಿಚಾರಗಳಿಗೆ ಮಾತ್ರ..

ಈ ವಿಚಾರ ಶಿರಸಾ ವಹಿಸಿ ಅನುಸರಿಸುವವರಿಗೆ ಮಾತ್ರ ನನ್ನ ಮತ ಎಂದಿರುವ ಉಪೇಂದ್ರ ಅವರು ಪ್ರಜಾಪ್ರತಿನಿದಿಗಳಾದವರು,

ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿರಬೇಕು.ನಮ್ಮ ಬೇಡಿಕೆಗಳನ್ನು ಸ್ವೀಕರಿಸುವುದು, ಅದಕ್ಕಾಗಿ ಯೋಜನೆ ರೂಪಿಸಿ ನಿಮ್ಮ ಮುಂದೆ ಇಡಬೇಕು.

ನಾವು (ಬಹುಜನರು) ಒಪ್ಪಿದ ಯೋಜನೆ ಪಾರದರ್ಶಕತೆಯಿಂದ ಕಾರ್ಯರೂಪಕ್ಕೆ ತರುವುದು, ತನ್ನ ಕೆಲಸದ ಸಂಪೂರ್ಣ ದೃಶ್ಯ ದಾಖಲೆಗಳ ವಿವರ ನಮ್ಮ ಮುಂದೆ ಇಡುವುದು.

ನಮ್ಮ ಸಹಮತವಿದ್ದರೆ ಕೆಲಸದಲ್ಲಿ ಮುಂದುವರೆಯುವುದು ಇಲ್ಲದಿದ್ದರೆ ರಾಜೀನಾಮೆ ನೀಡುವುದು

ಐದು ವರ್ಷ ಎಲ್ಲ ವಿಷಯಗಳಲ್ಲೂ ತೀರ್ಮಾನ ನಮ್ಮದು, ಅದರಂತೆ ನಡೆಯುವ ಪ್ರಜಾಕಾರ್ಮಿಕ ಮಾತ್ರ ನೀನು ಎಂದು ಉಪೇಂದ್ರ ತಿಳಿಸಿದ್ದಾರೆ.

ಕರ್ನಾಟಕದ ಜನರಿಗೆ ಬಹಿರಂಗ ಸವಾಲ್; ನಿಮ್ಮದೇ ಉತ್ತಮ ಪ್ರಜಾಕೀಯ ಪಕ್ಷ ಸಿದ್ಧವಿದೆ:

ನಮ್ಮ ಕ್ಷೇತ್ರ ಅಭ್ಯರ್ಥಿಯನ್ನು ಹೇಗೆ ಆಯ್ಕೆ ಮಾಡಬೇಕು ಎಂದು ಜನರಿಗೆ ತಿಳಿಸಿದ್ದು,

1. ನಿಮ್ಮ ಕ್ಷೇತ್ರದ ಸೂಕ್ತ ಅಭ್ಯರ್ಥಿಯನ್ನು (ಕೆಲಸಗಾರರನ್ನು.. ನಾಯಕರನ್ನಲ್ಲ..) ನೀವು ಆಯ್ಕೆ ಮಾಡಿ ಯು.ಪಿ.ಪಿ ಗೆ ಅರ್ಜಿ ಸಲ್ಲಿಸುವಂತೆ ಅವರಿಗೆ ಸೂಚಿಸಿ

2. ಪಕ್ಷದಿಂದ ಸಂದರ್ಶನ ನಡೆಸಿ ಸೂಕ್ತ ಅಭ್ಯರ್ಥಿ ಟಿಕೆಟ್ ಕೊಡಲಾಗುತ್ತದೆ ಅವರನ್ನು ನೀವು ಚುನಾಯಿಸಿ

3. SOP ರೀತಿ ನಿಮ್ಮ ಬೇಡಿಕೆ ಪಡೆದು ಪಾರದರ್ಶಕವಾಗಿ ನಮ್ಮ ಕೆಲಸ ಮಾಡಿ ವರದಿ ಕೊಟ್ಟಾಗ ಸಮಾಧಾನ ವಾಗದಿದ್ದರೆ ಒಂದು ತಿದ್ದುಪಡಿಗೆ ಅವಕಾಶ ಕೊಡಿ

4. ಎರಡನೇ ಬಾರಿಯೂ ಪ್ರತಿನಿಧಿಯ ಬಗ್ಗೆ ನಿಮಗೆ ಅಸಮಾಧಾನ ವಾದರೆ ಅವರನ್ನು ಕೆಳಗಿಳಿಸಿ

5. ಅಭ್ಯರ್ಥಿಯ ಕೆಲಸದಿಂದ ನಿನಗೆ ಸಂತೋಷವಾದರೆ ಆತನಿಗೆ ಉನ್ನತ ಸ್ಥಾನಕ್ಕೆ ಶಿಫಾರಸು ಮಾಡಿ

ಈ ಎಲ್ಲಾ ಕೆಲಸಗಳಲ್ಲಿ ಹೈಕಮಾಂಡ್ ಆದ ನಿಮ್ಮ ಜೊತೆ, ಪಕ್ಷದ ಅಧ್ಯಕ್ಷನಾಗಿ ನಾನು ಇರುತ್ತೇನೆ.. OK” ನಾ ಎಂದು ನಟ, ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ಅವರು ತಮ್ಮ ಪಕ್ಷದ ನಿಲುವುಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version