ನಟಿ ಮಹಾಲಕ್ಷ್ಮಿಗೆ ರವೀಂದರ್ಡಿವೋರ್ಸ್ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?
ಕಳೆದ ಏಳೆಂಟು ತಿಂಗಳಿನಿಂದ ಅತಿ ಹೆಚ್ಚು ಟ್ರೋಲ್ಗೆ ಒಳಗಾಗಿರುವ ದಂಪತಿ ಎಂದರೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ
ಕಳೆದ ವರ್ಷ ಸೆಪ್ಟೆಂಬರ್ 1ರಂದು ತಿರುಪತಿಯಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು
ಅಂದಿನಿಂದಲೂ ಇವರ ಮದುವೆ ವಿಚಾರಕ್ಕೆ ಬಹಳಷ್ಟು ಟ್ರೋಲ್ಆಗುತ್ತಲೇ ಇದ್ದಾರೆ.
ಎಲ್ಲಿ ನೋಡಿದರೂ ಈ ಜೋಡಿಯದ್ದೆ ವಿಷಯವಾಗಿದ್ದು, ಇವರು ಏನೇ ಮಾಡಲಿ ಅದರ ಬಗ್ಗೆ ಚರ್ಚೆ ಭಾರಿ ಜೋರಾಗಿ ನಡೆಯುತ್ತದೆ.
ಇದಕ್ಕೆ ಕಾರಣ ಈ ಜೋಡಿಯ ಲುಕ್. ಅತ್ಯಂತ ಸುಂದರಿಯಾಗಿರುವ ನಟಿ ಮಹಾಲಕ್ಷ್ಮಿ, ತೀರಾ ದಪ್ಪ ಇರುವ ನಿರ್ಮಾಪಕ ರವೀಂದರ್ಜೊತೆ ಮದುವೆಯಾಗಿದ್ದಾರೆ ಎನ್ನುವ ಕಾರಣಕ್ಕೆ
ಬಾಹ್ಯ ರೂಪ ನೋಡಿ ಟ್ರೋಲ್
ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು,ಅದರಲ್ಲಿಯೂ ಮದುವೆಯಾಗದ ಹುಡುಗರು ಈ ಜೋಡಿಯನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದರೆ, ಹುಡುಗಿಯರು ಈಕೆ ಹಣಕ್ಕಾಗಿಯೇ ಮದುವೆಯಾಗಿದ್ದಾರೆ ಎನ್ನುತ್ತಿದ್ದಾರೆ.
ನಿರ್ಮಾಪಕ ರವೀಂದರ್ ಅವರ ಆಸ್ತಿ ನೋಡಿ ಮಹಾಲಕ್ಷ್ಮಿ ಮದುವೆಯಾಗಿದ್ದು, ಈ ಜೋಡಿ ಒಟ್ಟಾಗಿ ಇರುವ ಚಾನ್ಸೇ ಇಲ್ಲ ಎಂದವರೇ ಹೆಚ್ಚು.
ಅದರಂತೆ, ಇತ್ತೀಚಿಗೆ ಮಹಾಲಕ್ಷ್ಮಿ ಮತ್ತು ರವೀಂದರ್
ದಂಪತಿ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಸಕತ್
ಸದ್ದು ಮಾಡಿತ್ತು.
ಅದಕ್ಕೆ, ಇದೀಗ ಈ ಸುದ್ದಿಗೆ ಈ ಜೋಡಿ ಸಾಮಾಜಿಕ ಜಾಲತಾಣದ ಮೂಲಕವೇ ವಿಚ್ಛೇದನ ಸಂಬಂಧಿಸಿದಂತೆ ಕ್ಲಾರಿಟಿ ಕೊಟ್ಟಿದೆ .
ಹೌದು, ಈ ಕುರಿತು ನಟಿ ಮಹಾಲಕ್ಷ್ಮೀ ಗಂಡ ರವೀಂದರ್ ಜೊತೆ ಇರುವ ಫೋಟೋವನ್ನು ಶೇರ್ ಮಾಡಿ, ಗಾಳಿ ಸುದ್ದಿ ಹರಡುತ್ತಿರುವವರ ಬಾಯಿ ಮುಚ್ಚಿಸಿದ್ದಾರೆ.
ನಟಿ ಮಹಾಲಕ್ಷ್ಮೀ ಫೋಟೋ ಶೇರ್ ಮಾಡಿ ಅವರು ನೀಡಿರುವ ಕ್ಯಾಪ್ಷನ್, ಈ ಜೋಡಿ ಸಕತ್ ಖುಷಿಯಾಗಿದೆ ಎಂಬುದು ಗೊತ್ತಾಗುತ್ತದೆ .
ನಟಿ ಮಹಾಲಕ್ಷ್ಮಿ, 'ನೀವು ನನ್ನ ಭುಜದ ಮೇಲೆ ಕೈ ಹಾಕಿದಾಗ, ನಾನು ಈ ಜಗತ್ತಿನಲ್ಲಿ ಏನೂ ಬೇಕಾದರೂ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ನನಗಾಗುತ್ತದೆ.
ನನ್ನ ಹೃದಯವು ನಿನ್ನಿಂದ ತುಂಬಿದೆ. ಅಮ್ಮು ಐ ಲವ್ ಯೂ' ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ಗೆ ರವೀಂದರ್ ಕೂಡ ಐ ಲವ್ ಯೂ ಟೂ ಎಂದು ಕಾಮೆಂಟ್ ಮಾಡಿದ್ದು, ವಿಚ್ಛೇದನ ಬಗ್ಗೆ ಗಾಳಿ ಸುದ್ದಿ ಹರಡುತ್ತಿರುವವರ ಬಾಯಿ ಮುಚ್ಚಿಸಿದ್ದಾರೆ. .