ಆನ್‌ಲೈನ್‌ನಲ್ಲಿ ಸುಲಭವಾಗಿ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಮಾಹಿತಿ 

ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್‌ನಷ್ಟೇ ಪಾನ್ ಕಾರ್ಡ್ ಕೂಡ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ.  

ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲದಿದ್ದರೆ, ತಕ್ಷಣ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಮತ್ತು ಅದನ್ನು ಸುಲಭವಾಗಿ ಪಡೆಯಿರಿ.

ಪ್ಯಾನ್ ಕಾರ್ಡ್ ಗೆ (https://tin.tin.nsdl.com/pan/index.html) ಅಥವಾ UTITSL (https://www.pan.utiitsl.com/PAN/) ಗೆ ಹೋಗಿ. ನಂತರ ಹೊಸ PAN Card ಆಯ್ಕೆಯನ್ನು ಕ್ಲಿಕ್ ಮಾಡಿ

ಇದರಲ್ಲಿ ಭಾರತೀಯ ನಾಗರಿಕ ಮತ್ತು ವಿದೇಶಿ ನಾಗರಿಕ ಎಂಬ ಎರಡು ಆಯ್ಕೆಗಳನ್ನು ಹೊಂದಿದ್ದು, ನಿಮಗೆ ಅನ್ವಯಿಸುವ ಆಯ್ಕೆಯನ್ನು ಆರಿಸಿ. ನಂತರ ವರ್ಗವನ್ನು ಆಯ್ಕೆಮಾಡಬೇಕು 

ನಂತರ ಗುರುತಿನ ಚೀಟಿ, ವಿಳಾಸ ಪುರಾವೆ, ಜನ್ಮ ದಿನಾಂಕದ ಪುರಾವೆಗಳಂತಹ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಪ್ಯಾನ್ ಕಾರ್ಡ್ ಅರ್ಜಿ ಶುಲ್ಕವನ್ನು ಪಾವತಿಸಿ

ನಂತರ ಗುರುತಿನ ಚೀಟಿ, ವಿಳಾಸ ಪುರಾವೆ, ಜನ್ಮ ದಿನಾಂಕದ ಪುರಾವೆಗಳಂತಹ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಪ್ಯಾನ್ ಕಾರ್ಡ್ ಅರ್ಜಿ ಶುಲ್ಕವನ್ನು ಪಾವತಿಸಿ

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಯನ್ನು ಮಾಡಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಇನ್ನು, ನಮೂನೆಯನ್ನು ಸಲ್ಲಿಸಿದ ನಂತರ ಸ್ವೀಕೃತಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಬೇಕು.

ಮತ್ತೊಮ್ಮೆ ಸ್ವೀಕೃತಿ ಪ್ರತಿಗೆ ನಿಮ್ಮ ಸಹಿ ಮಾಡಿ ಮತ್ತು ಅದರೊಂದಿಗೆ ಎರಡು ಪಾಸ್‌ಪೋರ್ಟ್ ಅಳತೆಯ ಫೋಟೋಗಳನ್ನು ಅಪ್‌ಲೋಡ್ ಮಾಡಿ.

ನಂತರ ಅರ್ಜಿ ನಮೂನೆ ಮತ್ತು ದಾಖಲೆಗಳನ್ನು NSDL ಅಥವಾ UTIITSL ವಿಳಾಸಕ್ಕೆ ಕಳುಹಿಸಬೇಕು.

ಸಲ್ಲಿಸಿದ ಕೆಲವೇ ದಿನಗಳಲ್ಲಿ ನಿಮ್ಮ ವಿಳಾಸಕ್ಕೆ ಅಂಚೆ ಕಚೇರಿ ಮೂಲಕ ನಿಮ್ಮ PAN ಕಾರ್ಡ್ ಬರುತ್ತದೆ.