ಬೆಂಗಳೂರು: ವಕ್ಫ್ ಕಾಯ್ದೆ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ರಚಿಸಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಂಬಿಕ ಪಾಲ್ ಅವರು ದೆಹಲಿಯಿಂದ ನ.7ರಂದು ರಾಜ್ಯಕ್ಕೆ ಆಗಮಿಸಲಿದ್ದು, ವಕ್ಸ್ ಆಸ್ತಿ ವಿವಾದದ ಕುರಿತು ಮಾಹಿತಿ ಕಲೆ ಹಾಕಲಿದ್ದಾರೆ.
ಮೊದಲಿಗೆ ಹುಬ್ಬಳ್ಳಿಗೆ ಆಗಮಿಸುವ ಪಾಲ್ ಅವರು ಗೋಕುಲ ರಸ್ತೆಯಲ್ಲಿರುವ ಫಾರ್ಚುನ್ ಹೊಟೇಲ್‌ನಲ್ಲಿ ವಕ್ಫ್ ಬೋರ್ಡ್ ಆಸ್ತಿಗಳ ಕುರಿತು ಸಭೆ ನಡೆಸಿ ಆನಂತರ ರೈತರು ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಅಲ್ಲಿಂದ ಬೆಳಗಾವಿಗೆ ಪ್ರಯಾಣ ಬೆಳೆಸುವರು. ಇವರೊಂದಿಗೆ ಸಂಸದ, ಜೆಪಿಸಿ ಸಮಿತಿಯ ಸದಸ್ಯ ತೇಜಸ್ವಿಸೂರ್ಯ ಪಾಲ್ಗೊಳ್ಳುವರು.
ಅಲ್ಲದೇ, ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಬಳಿ ವಕ್ಟ್ ಕಾಯ್ದೆ ವಿರುದ್ಧ ಶಾಸಕ ಯತ್ನಾಳ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಮಧ್ಯಾಹ್ನ 12 ಗಂಟೆಗೆ ಜಗದಂಬಿಕಾ ಪಾಲ್ ಬರಲಿದ್ದು, ಧರಣಿ ನಿರತರ ಜತೆಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ವಕ್ಸ್‌ನಿಂದ ನೋಟಿಸ್ ಪಡೆದ ಹಾಗೂ ಪಹಣಿಗಳಲ್ಲಿ ವಕ್ಸ್ ಹೆಸರು ನಮೂದಾಗಿರುವ ರೈತರು ಮತ್ತು ಮಠಗಳು ಪಾಲ್ ಅವರಿಗೆ ತಮ್ಮ ಅಹವಾಲು ಸಲ್ಲಿಸಲಿದ್ದಾರೆ.