ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮೇಲೆ ದಾಳಿ ಮಾಡಿರುವ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳಿಗೆ ಹೆಚ್ಚಿನ ದಾಖಲೆ ಸಿಗೋದಿಲ್ಲ. ಕಾರಣ ಎಲ್ಲ ದಾಖಲೆಗಳನ್ನ ಸಚಿವ ಭೈರತಿ ಸುರೇಶ್ ತೆಗೆದುಕೊಂಡು ಹೋಗಿದ್ದಾರೆ ಎಂದು ಶಾಸಕ ಶ್ರೀವತ್ಸ ಅವರು ಗಂಭೀರ ಅರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಮೇಲೆ ಇಡಿ ದಾಳಿ ಸಮಾಧಾನ ತಂದಿದೆ. ಆದರೆ, ಭೈರತಿ ಸುರೇಶ್, ಹಿಂದಿನ ಮುಡಾ ಆಯುಕ್ತ ದಿನೇಶ್ ಸಾಕಷ್ಟು ದಾಖಲೆಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ಇಡಿ ಅಧಿಕಾರಿಗಳು ಸಚಿವ ಭೈರತಿ ಸುರೇಶ್ ಮನೆ, ಕಚೇರಿಯ ಮೇಲೆ ದಾಳಿ ಮಾಡಬೇಕು ಎಂದು ಶ್ರೀವತ್ಸ ಒತ್ತಾಯ ಮಾಡಿದ್ದಾರೆ.
ಇಡಿ ದಾಳಿಯಿಂದ ಯಾವೆಲ್ಲಾ ದಾಖಲೆಗಳು ಮಿಸ್ ಆಗಿದೆ ಈ ಬಗ್ಗೆ ಗೊತ್ತಗಲಿದೆ. ಹೀಗಾಗಿ ಸಿಎಂ ಕಚೇರಿ, ಭೈರತಿ ಸುರೇಶ್ ಕಚೇರಿಯಲ್ಲಿ ದಾಖಲೆಗಳು ಸಿಗಲಿದೆ. ಕೂಡಲೇ ಇಡಿ ಅಧಿಕಾರಿಗಳು ಸಿಎಂ ಮತ್ತು ಸಚಿವರ ಕಚೇರಿ ಮೇಲೆ ದಾಳಿ ಮಾಡಬೇಕು. ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಐಎಎಸ್ ಅಧಿಕಾರಿಗಳನ್ನು ಬಂಧಿಸಿ:
ಹಗರಣಕ್ಕೆ ಸಂಬಂಧಿಸಿದ ಆ ಇಬ್ಬರು ಐಎಎಸ್ ಅಧಿಕಾರಿಗಳನ್ನು ಬಂಧಿಸಿ ಒಳಗೆ ಹಾಕಿ ವಿಚಾರಣೆ ಮಾಡಿದ್ರೆ ಎಲ್ಲಾ ವಿಚಾರ ಬಾಯಿ ಬಿಡುತ್ತಾರೆ. ಆಗ ತಪಿತಸ್ಥರಿಗೆ ಶಿಕ್ಷೆ ಕೊಡಸಬಹುದು. ನೀವು (ಸಿಎಂ) ಸೈಟ್ ವಾಪಸ್ ಕೊಟ್ಟಿ ಆಗಿದೆ. ಈಗ ಉಳಿದವರನ್ನು ಯಾಕೆ ರಕ್ಷಣೆ ಮಾಡುತ್ತಿದ್ದೀರಿ. ಎಲ್ಲರಿಗೂ ಶಿಕ್ಷೆಕೊಡಿಸಿ ಎಂದು ಶ್ರೀವತ್ಸ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.