ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಸರೆ ಗ್ರಾಮದಿಂದ ಕೆಸರು ಎರಚಿಕೊಂಡಿದ್ದು, ಅವರ ಪಾಪದ ಕೊಡ ತುಂಬಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಚೇರಿ ಮೇಲೆ ಇಡಿ ದಾಳಿ ನೀರಿಕ್ಷೀತ. ನಾವು ಪಾದಯಾತ್ರೆಗೆ ಒಂದು ಅರ್ಥ ಸಿಕ್ಕಿದೆ. ಮುಡಾ ಹಗರಣ ಕೇವಲ 14 ಸೈಟ್ ಹಗರಣ ಅಲ್ಲ. ಸಾವಿರಾರು ಕೋಟಿ ಹಗರಣ ಆಗಿದೆ. ಸಿದ್ದರಾಮಯ್ಯ ಗೌರವ ಯುತವಾಗಿ ರಾಜೀನಾಮೆ ಕೊಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ಒಂದೆರಡು ದಿನದಲ್ಲಿ ಪಟ್ಟಿ ಫೈನಲ್:
ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳಲಿದೆ. ಚನ್ನಪಟ್ಟಣ ವಿಚಾರ ಹೈಕಮಾಂಡ್ ಬಿಟ್ಟದ್ದು, ಈಗಾಗಲೇ ಕುಮಾರಸ್ವಾಮಿ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಇನ್ನೂ ಶಿಗ್ಗಾವಿ ವಿಚಾರವಾಗಿ ಬಸವರಾಜ್ ಬೊಮ್ಮಾಯಿ ಮನಸಲ್ಲಿ ಏನಿದೆ ಅನ್ನೋದು ಮುಖ್ಯ. ಭಾನುವಾರ ನಾನು ದೆಹಲಿಗೆ ಹೋಗತ್ತೇನೆ. ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾತನಾಡುವೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.