pm kisan yojana: ರೈತರ ಖಾತೆಗೆ 16ನೇ ಕಂತು ಯಾವಾಗ? eKYC ಮಾಡಿಸುವುದು ಹೇಗೆ? ಇಲ್ಲಿದೆ ಮಾಹಿತಿ

Vijayaprabha

pm kisan yojana: ಪಿಎಂ ಕಿಸಾನ್‌ ಯೋಜನೆಯ 16ನೇ ಕಂತಿಗಾಗಿ ಅನ್ನದಾತರು ಕಾಯುತ್ತಿದ್ದು, ಮೂಲಗಳ ಪ್ರಕಾರ, ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ವೇಳೆಗೆ ಕೇಂದ್ರ ಸರ್ಕಾರ ₹2,000ಗಳನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸುವ ಸಾಧ್ಯತೆಯಿದೆ.

ಇದನ್ನು ಓದಿ: BMTC ನೌಕರಗೆ ಭರ್ಜರಿ ಸಿಹಿಸುದ್ದಿ; 1 ಕೋಟಿ ವಿಮಾ ಸೌಲಭ್ಯ, 10 ಲಕ್ಷ ಸಹಾಯಧನ!

ಹೌದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಶೀಘ್ರದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ. ಆದರೆ, ನೀವು eKYC ಮಾಡಿಸದಿದ್ದರೆ, ನಿಮ್ಮ ಖಾತೆಗೆ ಹಣ ಜಮೆಯಾಗುವುದಿಲ್ಲ. ಹೀಗಾಗಿ ತಕ್ಷಣ eKYC ಮಾಡಿಸಿ ಯೋಜನೆಯ ಲಾಭ ಪಡೆದುಕೊಳ್ಳಿ. PM ಕಿಸಾನ್ ಪೋರ್ಟಲ್‌ನಲ್ಲಿ OTP ಆಧಾರಿತ eKYC ಲಭ್ಯವಿದೆ.

pm kisan yojana 16th installment date

pm kisan yojana: eKYC ಮಾಡಿಸುವುದು ಹೇಗೆ?

ಹಂತ 1- PM-Kisanನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.

ಹಂತ 2- ಬಲಭಾಗದಲ್ಲಿರುವ eKYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 3- ಆಧಾರ್ ಕಾರ್ಡ್ ಸಂಖ್ಯೆ, ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಸರ್ಚ್‌ ಮೇಲೆ ಕ್ಲಿಕ್ ಮಾಡಿ.

ಹಂತ 4- ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ನಮೂದಿಸಿ.

ಹಂತ 5- ‘Get OTP’ ಮೇಲೆ ಕ್ಲಿಕ್ ಮಾಡಿ ಮತ್ತು OTP ನಮೂದಿಸಿ.

ಗಮನಿಸಿ: OTP ಆಧಾರಿತ eKYC ಸಾಧ್ಯವಾಗದಿದ್ದರೆ, ಬಯೋಮೆಟ್ರಿಕ್ ಆಧಾರಿತ eKYCಗಾಗಿ CSC ಕೇಂದ್ರಗಳನ್ನು ಸಂಪರ್ಕಿಸಬೇಕು.

ಇದನ್ನು ಓದಿ: ನಿಮ್ಮ ಖಾತೆಗೆ 2,000 ರೂ ಹಣ ಜಮಾ..ಚೆಕ್‌ ಮಾಡಿ

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version