Pan Aadhaar link: ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್, ಪ್ಯಾನ್-ಆಧಾರ್ ಕಾರ್ಡ್​ ಲಿಂಕ್ ಗಡುವು ಮತ್ತೆ ವಿಸ್ತರಣೆ

Vijayaprabha

Aadhaar Card-Pan Card Linking: ಪ್ಯಾನ್- ಆಧಾರ್ ಲಿಂಕ್ (Aadhaar Card-Pan Card Link) ಮಾಡದವರಿಗೆ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಪ್ಯಾನ್- ಆಧಾರ್ ಲಿಂಕ್ ಮಾಡಲು ಜೂನ್ 30ರ ವರೆಗೆ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನು ಓದಿ: ನಿಮ್ಮ ಪ್ಯಾನ್‌, ಆಧಾರ್‌ ಲಿಂಕ್‌ ಮಾಡ್ಬೇಕಾ? ಆಧಾರ್‌ ಜೊತೆ ಪಾನ್ ಲಿಂಕ್‌ ಮಾಡುವ ಮುನ್ನ ಎಚ್ಚರ, ಎಚ್ಚರ!

ಹೌದು, ಪ್ಯಾನ್- ಆಧಾರ್ ಲಿಂಕ್ ಮಾಡಲು ರೂ.1000 ದಂಡದೊಂದಿಗೆ ಮಾರ್ಚ್ 31, 2023 ರವರೆಗೆ ನೀಡಿದ್ದ ಅವಧಿ ಮುಗಿಯುವ ಎರಡು ದಿನಗಳ ಮುಂಚೆಯೇ ಮತ್ತೆ ಗಡುವನ್ನು ವಿಸ್ತರಣೆ ಮಾಡಲಾಗಿದ್ದು, ತೆರಿಗೆ ವಂಚನೆ ತಡೆಗೆ ಪ್ಯಾನ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದು ಬಹಳ ಮುಖ್ಯವಾಗಿದೆ.

ಇದನ್ನು ಓದಿ: ನಿಮ್ಮ ಆಧಾರ್‌-ಪ್ಯಾನ್‌ ಲಿಂಕ್‌ ಆಗದಿದ್ದರೆ ಸಮಸ್ಯೆ ಏನು? 1000 ರೂ ದಂಡದೊಂದಿಗೆ ಸುಲಭವಾಗಿ ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿ

ಇನ್ನು, ಪ್ರತಿಯೊಬ್ಬರಿಗೂ PAN ಕಾರ್ಡ್ (Pan Card) ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಪ್ಯಾನ್‌ ನಂಬರ್ ಇಲ್ಲದೆ ಯಾವುದೇ ಹಣಕಾಸಿನ ಕೆಲಸವನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಿಲ್ಲ. ಬ್ಯಾಂಕಿನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಹೂಡಿಕೆ ಮಾಡುವವರೆಗೆ ಎಲ್ಲ ಕೆಲಸಗಳಿಗೂ ಬೇಕೇ. ನೀವು ಇನ್ನೂ ನಿಮ್ಮ ಪ್ಯಾನ್ ಸಂಖ್ಯೆಯನ್ನು ಆಧಾರ್‌ನೊಂದಿಗೆ(Aadhar card) Link ಮಾಡದಿದ್ದರೆ ಶೀಘ್ರದಲ್ಲೇ ಲಿಂಕ್ ಮಾಡಿಕೊಳ್ಳಿ. ಇಲ್ಲ ಅಂದರೆ ನಿಮ್ಮ ಪ್ಯಾನ್ ಕಾರ್ಡ್(Pan Card) ಅಮಾನ್ಯವಾಗುತ್ತದೆ, ಇದರಿಂದ ನಿಮ್ಮ ಬ್ಯಾಂಕ್ ವಹಿವಾಟು ಸೇರಿದಂತೆ ನಾನಾ ಸಮಸ್ಯೆಗಳು ಎದುರಾಗುತ್ತದೆ.

ಇದನ್ನು ಓದಿ: ಪಾನ್- ಆಧಾರ್ ಲಿಂಕ್ ಮಾಡಿದ್ದೀರಾ? ಇಲ್ಲವಾ? ಗುರುತು ಇಲ್ಲದಿದ್ದರೂ ಪರವಾಗಿಲ್ಲ, ಸಿಂಪಲ್‌ಗಾ ಹೀಗೆ ಚೆಕ್ ಮಾಡಿ ಲಿಂಕ್ ಮಾಡಿಕೊಳ್ಳಿ!

ಇನ್ನು, ನಿಮ್ಮ ಪ್ಯಾನ್ ಕಾರ್ಡ್ -ಆಧಾರ್ ಕಾರ್ಡ್ ಲಿಂಕ್ (Aadhaar Card-Pan Card Link) ಮಾಡಲು ಇನ್​​ಕಮ್ ಟ್ಯಾಕ್ಸ್​ (ಆದಾಯ ತೆರಿಗೆ) ಇಲಾಖೆಯ ಅಧಿಕೃತ ವೆಬ್ ಸೈಟ್ https://www.incometax.gov.in/iec/foportal/ ಇಲ್ಲಿ ಕ್ಲಿಕ್ ಮಾಡಿ. ಮುಖಪುಟದ ಎಡಭಾಗದಲ್ಲಿರುವ ಲಿಂಕ್ ಆಧಾರ್ (link aadhar) ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಿಮ್ಮ ಹತ್ತು ಅಂಕಿಯ ಪ್ಯಾನ್ ಸಂಖ್ಯೆ ಮತ್ತು ಆಧಾರ್ ನಂಬರ್ ಅನ್ನು ನಮೂದಿಸಿ 1,000 ರೂಪಾಯಿ ಶುಲ್ಕವನ್ನು ಪಾವತಿಸಸುವ ಲಿಂಕ್ ಮಾಡಬಹುದು.

ಇದನ್ನು ಓದಿ: ಉದ್ಯೋಗಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌; ಪಿಎಫ್ ಬಡ್ಡಿ ದರ ಹೆಚ್ಚಿಸಿದ ಕೇಂದ್ರ, ಶೇಕಡಾವಾರು ಎಷ್ಟು ಏರಿಕೆ?

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version