Nipah virus: ಕೋವಿಡ್‌ಗಿಂತಲೂ ನಿಫಾ ಮರಣ ಪ್ರಮಾಣ ಹೆಚ್ಚು; ಕೊರೊನಾ ರೀತಿಯಲ್ಲೇ ಹೊಸ ಗೈಡ್‌ಲೈನ್ಸ್‌ ಜಾರಿ

Vijayaprabha

Nipah virus: ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಹೋಲಿಸಿದರೆ ನಿಫಾ ವೈರಸ್ ಸೋಂಕಿಗೆ ಒಳಗಾದವರಲ್ಲಿ ಮರಣ ಪ್ರಮಾಣ ಹೆಚ್ಚು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮಹಾನಿರ್ದೇಶಕ ರಾಜೀವ್ ಬಹ್ಲ್ ಹೇಳಿದ್ದಾರೆ.ಈ ಕುರಿತು ಮಾತನಾಡಿದ ಅವರು, ಕೋವಿಡ್ ಸಾವಿನ ಪ್ರಮಾಣ ಎರಡರಿಂದ ಮೂರು ಪ್ರತಿಶತ ಹೊಂದಿದ್ದರೆ, ನಿಫಾ ಸಾವಿನ ಪ್ರಮಾಣ 40 ರಿಂದ 70 ಪ್ರತಿಶತದವರೆಗೆ ಇದೆ ಎಂದು ಹೇಳಿದ್ದಾರೆ. ಕೇರಳದಲ್ಲಿ ಈಗಾಗಲೇ ನಿಫಾ ವೈರಸ್‌ಗೆ ಇಬ್ಬರು ಸಾವನ್ನಪ್ಪಿರುವುದು ಗೊತ್ತೇ ಇದೆ.

ಇದನ್ನೂ ಓದಿ: ಮತ್ತೊಬ್ಬ ವ್ಯಕ್ತಿಗೆ ತಗುಲಿದ ನಿಫಾ ವೈರಸ್, ಸಂಪರ್ಕ ಪಟ್ಟಿಯಲ್ಲಿ 706 ಜನ; ನಿಫಾ ಎಷ್ಟು ಅಪಾಯಕಾರಿ?

Nipah virus: ಕೇರಳದಲ್ಲೇ ‘ನಿಫಾ’ ವ್ಯಾಪ್ತಿ ಏಕೆ ಅಂತ ಗೊತ್ತಾಗುತ್ತಿಲ್ಲ: ICMR

Nipah virus

ಕೇರಳದಲ್ಲಿ ಪದೇಪದೇ ನಿಫಾ ವೈರಸ್ ಪ್ರಕರಣಗಳು ಸಂಭವಿಸುತ್ತಿರುವ ಬಗ್ಗೆ ICMR ಕಳವಳ ವ್ಯಕ್ತಪಡಿಸಿದೆ. ‘ಕೇರಳದಲ್ಲಿ ಮಾತ್ರ ಈ ವೈರಸ್ ಏಕೆ ಕಾಣಿಸಿಕೊಳ್ಳುತ್ತಿದೆ ಎಂದು ಅರ್ಥವಾಗುತ್ತಿಲ್ಲ. 2018ರಲ್ಲಿ ಏಕಾಏಕಿ ಸಂಭವಿಸಿದಾಗ, ವೈರಸ್ ಬಾವಲಿಗಳೊಂದಿಗೆ ಸಂಬಂಧಿಸಿದೆ ಎಂದು ಅರಿತೆವು. ಬಾವಲಿಗಳಿಂದ ಮನುಷ್ಯರಿಗೆ ಸೋಂಕು ಹೇಗೆ ಹರಡುತ್ತದೆ ಎಂಬುದು ನಿಖರವಾಗಿ ತಿಳಿದಿಲ್ಲ. ಮಳೆಗಾಲದಲ್ಲಿ ವೈರಸ್ ಹರಡುವಿಕೆ ಸಂಭವಿಸುತ್ತದೆ. ನಾವು ಕಾರಣ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ICMR ಹೇಳಿದೆ.

ಇದನ್ನೂ ಓದಿ: ಈ ರಾಶಿಯವರ ಮೇಲೆ ಗಣೇಶನ ವಿಶೇಷ ಕೃಪೆ, ಎಲ್ಲಾ ವಿಘ್ನಗಳು ದೂರವಾಗುತ್ತೆ..!

ನಿಫಾ ವೈರಸ್ ರೋಗದ ಲಕ್ಷಣಗಳು

ಮಾರಣಾಂತಿಕ ನಿಫಾ ವೈರಸ್ ಕೇರಳ ರಾಜ್ಯದಲ್ಲಿ ನಡುಕ ಹುಟ್ಟಿಸುತ್ತಿದೆ. ಇದರ ರೋಗದ ಲಕ್ಷಣಗಳು ಭಯಾನಕವಾಗಿರುತ್ತದೆ. ನಿಫಾ ವೈರಸ್ ಪತ್ತೆಗೆ 5 ರಿಂದ 14 ದಿನ ಬೇಕು. ಅದರ ನಂತರ, ದೇಹದಲ್ಲಿ ಬಹಳ ತ್ವರಿತ ಬದಲಾವಣೆಗಳು ಕಂಡುಬರುತ್ತವೆ. ತೀವ್ರ ಜ್ವರ, ಉಸಿರಾಟದ ತೊಂದರೆ, ಕಡಿಮೆ ಬಿಪಿ, ಪ್ರಜ್ಞಾಹೀನತೆ ಮತ್ತು ಕೆಲವೊಮ್ಮೆ ಕೋಮ ಸಂಭವಿಸಬಹುದು. ಕೆಲವು ಸಂದರ್ಭಗಳಲ್ಲಿ, ಕಿಬ್ಬೊಟ್ಟೆಯ ನೋವು, ವಾಂತಿ, ಆಯಾಸ ಮತ್ತು ಮಸುಕಾದ ದೃಷ್ಟಿಯಂತಹ ರೋಗಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: ಮಧುಮೇಹಿಗಳಿಗೆ 5 ಆರೋಗ್ಯಕರ ಪಾನೀಯಗಳು; ಒಮ್ಮೆ ಟ್ರೈ ಮಾಡಿ ನೋಡಿ..!

ಕರ್ನಾಟಕದಲ್ಲಿ ಹೈ ಅಲರ್ಟ್‌

ಕೇರಳದಲ್ಲಿ ಮಾರಣಾಂತಿಕ ನಿಫಾ ವೈರಸ್ ಉಲ್ಬಣಗೊಳ್ಳುತ್ತಿದ್ದು, ರಾಜ್ಯದಲ್ಲೂ ಆತಂಕ ಹೆಚ್ಚಿದೆ. ಇದೀಗ ಗಡಿ ಜಿಲ್ಲೆಗಳಾದ ದ. ಕನ್ನಡ, ಚಾಮರಾಜನಗರ, ಕೊಡಗು & ಚಾಮರಾಜನಗರ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಚೆಕ್ ಪೋಸ್ಟ್ ಮೂಲಕ ತೆರಳುವವರಿಗೆ ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್‌ಗಳನ್ನು ಸ್ಥಾಪಿಸಲಾಗಿದ್ದು, ನಿಫಾ ವೈರಸ್ ಚಿಕಿತ್ಸೆ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ.

ಇದನ್ನೂ ಓದಿ: ಕೇವಲ 600 ರೂಪಾಯಿಗೆ ಕೃಷಿ ಡ್ರೋನ್; ಏಳೆಂಟು ನಿಮಿಷದಲ್ಲಿ ಒಂದು ಎಕರೆ ಔಷಧಿ ಸಿಂಪಡಣೆ!

ಕೊರೊನಾ ರೀತಿಯಲ್ಲೇ ಹೊಸ ಗೈಡ್‌ಲೈನ್ಸ್‌ ಜಾರಿ

  • ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ. ತಪಾಸಣೆಗಾಗಿ ಚೆಕ್ ಪೋಸ್ಟ್‌ ಸ್ಥಾಪನೆ
  • ನಿಫಾ ವೈರಸ್ ಶಂಕಿತ ರೋಗಿಗಳನ್ನು ಕ್ವಾರಂಟೈನ್ ಮಾಡಲು ಜಿಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಠ 2 ಬೆಡ್ ಕಾಯ್ದಿರಿಸುವುದು
  • ಸಾರ್ವಜನಿಕರು ಹಾಗೂ ಆರೋಗ್ಯ ಸಿಬ್ಬಂದಿ ಕೇರಳಕ್ಕೆ ಅನಗತ್ಯ ಪ್ರಯಾಣ ಮಾಡದಿರುವುದು
  • ವೈರಸ್​ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು
  • ಜನರಲ್ಲಿ ಅನಗತ್ಯ ಭಯ ತಪ್ಪಿಸುವುದು
  • ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಆರೋಗ್ಯ ಸಿಬ್ಬಂದಿಗೆ ತಪಾಸಣೆ ಕುರಿತು ತರಬೇತಿ ನೀಡುವುದು

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version