35 ಬಾರಿ ಕರೋನ ಟೆಸ್ಟ್ ಮಾಡಿಸಿಕೊಂಡ ಖ್ಯಾತ ನಟಿ…?

Vijayaprabha

ಹೈದರಾಬಾದ್: ಲಾಕ್ ಡೌನ್ ನಂತರ ಶೂಟಿಂಗ್ ಪ್ರಾರಂಭವಾದಾಗ, ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಚಿತ್ರೀಕರಣ ಪ್ರಾರಂಭಿಸಿದರು. ಈಗೆ ಕರೋನಾ ಪರೀಕ್ಷೆ ಮಾಡಿಸಿಕೊಂಡವರಲ್ಲಿ ನಟಿ ನಿಧಿ ಅಗರ್ವಾಲ್ ಕೂಡ ಒಬ್ಬರು.

ಈ ಬಗ್ಗೆ ನಟಿ ನಿಧಿ ಅಗರ್ವಾಲ್ , “ನಾನು ಮೊದಲ ಬಾರಿಗೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಾಗ ನನಗೆ ಅಸಹ್ಯಕರವಾಗಿ ಅನಿಸಿತು. ಆದರೆ ನಂತರ ನಾನು ಅದನ್ನು ಅಭ್ಯಾಸ ಮಾಡಿಕೊಂಡೆ. ಕಳೆದ ಅಕ್ಟೋಬರ್‌ನಿಂದ ನಾನು ಶೂಟಿಂಗ್‌ನಲ್ಲಿ ಭಾಗಿಯಾಗಿದ್ದೇನೆ. ನಾನು ಪ್ರಸ್ತುತ ನಟಿಸುತ್ತಿರುವ ಸಿನಿಮಗೋಸ್ಕರ ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈಗೆ ತಿರುಗುತ್ತ ಬ್ಯುಸಿಯಾಗಿದ್ದೇನೆ. ಪ್ರಯಾಣ ಮಾಡುವಾಗಲೆಲ್ಲಾ ಪ್ರತಿ ಸಾರಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕಾಗುತ್ತದೆ. ನಾನು ಇಲ್ಲಿಯವರೆಗೆ ಸುಮಾರು 35 ಬಾರಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ನಟಿ ನಿಧಿ ಅಗರ್ವಾಲ್ ಅವರು ತೆಲುಗು, ತಮಿಳು ಹಾಗು ಹಿಂದಿಯಲ್ಲಿ ಮುನ್ನಾ ಮೈಕೆಲ್, ಸವ್ಯಸಾಚಿ, ಮಿಸ್ಟರ್ ಮಜ್ನು, ಐಸ್ಮಾರ್ಟ್ ಶಂಕರ್, ಭೂಮಿ, ಈಶ್ವರನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version