ಹಿಂದೂಗಳ ದೊಡ್ಡ ಹಬ್ಬ ದೀಪಾವಳಿಗೆ ದೇಶವ್ಯಾಪಿ ₹4.25 ಲಕ್ಷ ಕೋಟಿ ವಹಿವಾಟು: ಸಿಎಐಟಿ ನಿರೀಕ್ಷೆ

ನವದೆಹಲಿ: ಹಿಂದೂಗಳ ಪ್ರಮುಖ ಹಾಗೂ ಬಹುದೊಡ್ಡ ಹಬ್ಬವೆಂದೆ ಕರೆಯಲ್ಪಡುವ ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದು, ಜನ ಹಬ್ಬದ ಖರೀದಿ ಆರಂಭಿಸಿದ್ದು, ದೇಶಾದ್ಯಂತ ಭರ್ಜರಿ ವ್ಯಾಪಾರ ವಹಿವಾಟು ನಡೆಯಲಿದೆ. ಹೌದು, ಈ ವರ್ಷದ ದೀಪಾವಳಿ ಹಬ್ಬಕ್ಕೆ…

ನವದೆಹಲಿ: ಹಿಂದೂಗಳ ಪ್ರಮುಖ ಹಾಗೂ ಬಹುದೊಡ್ಡ ಹಬ್ಬವೆಂದೆ ಕರೆಯಲ್ಪಡುವ ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದು, ಜನ ಹಬ್ಬದ ಖರೀದಿ ಆರಂಭಿಸಿದ್ದು, ದೇಶಾದ್ಯಂತ ಭರ್ಜರಿ ವ್ಯಾಪಾರ ವಹಿವಾಟು ನಡೆಯಲಿದೆ.

ಹೌದು, ಈ ವರ್ಷದ ದೀಪಾವಳಿ ಹಬ್ಬಕ್ಕೆ ದೇಶವ್ಯಾಪಿ ₹4.25 ಕೋಟಿ ಮೊತ್ತದ ವಹಿವಾಟು ನಡೆಯುವ ನಿರೀಕ್ಷೆ ಇದ್ದು, ರಾಷ್ಟ್ರರಾಜಧಾನಿ ದೆಹಲಿಯೊಂದರಲ್ಲೇ ₹75 ಸಾವಿರ ವ್ಯಾಪಾರ ನಡೆಯಲಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಭರವಸೆ ವ್ಯಕ್ತಪಡಿಸಿದೆ.

ಶಾಪಿಂಗ್‌ಗೆ ಹೆಸರುವಾಸಿಯಾಗಿರುವ ದೆಹಲಿಯ ಚಾಂದನಿ ಚೌಕ್‌ ಸಂಸದ ಹಾಗೂ ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಂಡೇಲ್ವಾಲ್‌ ಮಾತನಾಡಿ, ‘ಮಹಾನಗರಗಳು ಹಾಗೂ ಟೈರ್‌ 2, 3 ನಗರ, ಪಟ್ಟಣ, ಗ್ರಾಮಗಳಲ್ಲಿ ಅಂಗಡಿಗಳನ್ನು ವರ್ಣರಂಜಿತ ದೀಪ, ರಂಗೋಲಿ ಹಾಗೂ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಲಾಗುವುದು. ಇದು ಇ-ಕಾಮರ್ಸ್‌ ವಿರುದ್ಧ ಸೆಣಸಿ, ಗ್ರಾಹಕರನ್ನು ಮಾರುಕಟ್ಟೆಯತ್ತ ಸೆಳೆಯಲು ಸಹಕಾರಿ. ಬೇಡಿಕೆ ಏರಿಕೆಯಾಗುವ ನಿರೀಕ್ಷೆಯಿಂದ ವ್ಯಾಪಾರಿಗಳು ಉಡುಗೊರೆಗಳು, ವಸ್ತ್ರಾಭರಣ, ಪೀಠೋಪಕರಣ, ಪೂಜಾ ಸಾಮಗ್ರಿ, ತಿಂಡಿ-ತಿನಿಸುಗಳನ್ನು ದಾಸ್ತಾನು ಮಾಡಲು ಪ್ರಾರಂಭಿಸಿದ್ದಾರೆ’ ಎಂದು ತಿಳಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.