LPG cylinder kyc: LPG ಸಿಲಿಂಡರ್‌ ಸಬ್ಸಿಡಿ ಪಡೆಯಲು ಕೆವೈಸಿ ಕಡ್ಡಾಯ; KYC ಮಾಡುವುದು ಹೇಗೆ?

Vijayaprabha

LPG cylinder kyc: ಈಗ ದೇಶದ ಪ್ರತಿಯೊಂದು ಮನೆಯಲ್ಲೂ ಅಡುಗೆ ಅನಿಲ ಸಿಲಿಂಡರ್ ಇದೆ. ಇದನ್ನು ಹೆಚ್ಚಾಗಿ ಅಡುಗೆಗೆ ಬಳಸಲಾಗುತ್ತದೆ. ಗ್ಯಾಸ್ ಸಂಪರ್ಕವಿಲ್ಲದ ಮನೆಯೇ ಇಲ್ಲ ಎನ್ನಬಹುದು. ಈ ಹಿನ್ನಲೆಯಲ್ಲಿ ಅಡುಗೆ ಅನಿಲ ಬಳಸುವವರಿಗೆ ಮಹತ್ವದ ಅಪ್ಡೇಟ್ ಬಂದಿದೆ. ಇದರ ವಿವರಗಳನ್ನು ಈಗ ನೋಡೋಣ.

ಇದನ್ನು ಓದಿ: ಬಜೆಟ್ ನಲ್ಲಿ ಬೆಲೆ ಏರಿಕೆ ಶಾಕ್; ಮದ್ಯದ ಬೆಲೆ, ಮೋಟಾರು ವಾಹನಗಳ ತೆರಿಗೆ ಹೆಚ್ಚಳ

ದೇಶದಲ್ಲಿ ಅಡುಗೆಗೆ ಹೆಚ್ಚಿನ ಜನರು ಅಡುಗೆ ಅನಿಲ ಸಿಲಿಂಡರ್ ಬಳಸುತ್ತಾರೆ. ದೇಶದಲ್ಲಿ ಗ್ಯಾಸ್ ಸಿಲಿಂಡರ್ ಹೊಂದಿರುವವರು KYC ಮಾಡಬೇಕಾಗಿದೆ ಎಂದು ಕೇಂದ್ರ ಘೋಷಿಸಿದೆ. ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಸಹಾಯಧನ ನೀಡುತ್ತಿರುವುದು ಗೊತ್ತೇ ಇದೆ. ಕೋಟಿಗಟ್ಟಲೆ ಜನ ಸಹಾಯಧನ ಪಡೆಯುತ್ತಿದ್ದಾರೆ. ಆದರೆ ಹೆಚ್ಚಿನ ಸಂಪರ್ಕಗಳು KYC ಅನ್ನು ನವೀಕರಿಸಿಲ್ಲ ಎಂದು ತೋರುತ್ತದೆ.

LPG cylinder kyc: LPG ಸಿಲಿಂಡರ್‌ ಸಬ್ಸಿಡಿ ಪಡೆಯಲು ಕೆವೈಸಿ ಕಡ್ಡಾಯ; KYC ಮಾಡುವುದು ಹೇಗೆ?

ಈ ಕ್ರಮದಲ್ಲಿ ಸಿಲಿಂಡರ್ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಮುಂದಿನ ಮಾ.31ರೊಳಗೆ ತಮ್ಮ ಗ್ಯಾಸ್‌ ಏಜೆನ್ಸಿ ಅಥವಾ ಆನ್‌ಲೈನ್‌ನಲ್ಲಿ KYC ಮಾಡಿಸುವುದು ಕಡ್ಡಾಯ. ಗ್ಯಾಸ್ ಸಿಲಿಂಡರ್‌ಗಳ ಮೇಲೆ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ನಿರಂತರವಾಗಿ ಪಡೆಯುವುದನ್ನು ಮುಂದುವರಿಸಲು ಈ ಪ್ರಕ್ರಿಯೆ ಮಾಡಬೇಕು. ಒಂದು ವೇಳೆ KYC ಮಾಡದಿದ್ದರೆ, ಮಾ.31ರ ನಂತರ ಸಬ್ಸಿಡಿ ನಿಮಗೆ ದೊರೆಯುವುದು ಅನುಮಾನ ಎನ್ನಲಾಗುತ್ತಿದೆ. ಹತ್ತಿರದ ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಿ KYC ಮಾಡಿಸಬೇಕು ಎಂದು ವರದಿಯಾಗಿದೆ.

ಇದನ್ನು ಓದಿ: ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಗೊತ್ತಾ? ಇಲ್ಲಿದೆ ಇಲಾಖಾವಾರು ಸಂಪೂರ್ಣ ವಿವರ

ಈ KYC ಅನ್ನು ನವೀಕರಿಸಲು ಎರಡು ವಿಧಾನಗಳಿವೆ. ಗ್ಯಾಸ್ ಏಜೆನ್ಸಿ ಕಚೇರಿಗೆ ಹೋಗಿ ಆಫ್‌ಲೈನ್‌ನಲ್ಲಿ ಮಾಡಬಹುದು. ಅಥವಾ ನೀವು ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಿಂದ ಮನೆಯಿಂದಲೇ ಆನ್‌ಲೈನ್ KYC ಅನ್ನು ಪೂರ್ಣಗೊಳಿಸಬಹುದು.

LPG cylinder kyc: ಆನ್‌ಲೈನ್‌ನಲ್ಲಿ KYC ಮಾಡುವುದು ಹೇಗೆ?

  • ನೀವು ಆನ್‌ಲೈನ್‌ನಲ್ಲಿ KYC ಮಾಡಲು ಬಯಸಿದರೆ.. ಅಧಿಕೃತ ಜಾಲತಾಣ https://www.mylpg.in/ಕ್ಕೆ ಭೇಟಿ ನೀಡಿ.
  • HP, Bharat Gas, Indane Gas ಎಂದು ನೀವು ಸಂಪರ್ಕ ಹೊಂದಿರುವ ಗ್ಯಾಸ್ ಕಂಪನಿಯ ಕಾಣಿಸುವ ಚಿತ್ರದ ಮೇಲೆ ಕ್ಲಿಕ್ಕಿಸಿ
  • KYC ಆಯ್ಕೆಯ ಆಯಾ ಕಂಪನಿ ಜಾಲತಾಣದ ಮೇಲೆ ಕ್ಲಿಕ್ಕಿಸಿ
  • ಬಳಿಕ ಮೊಬೈಲ್, ಗ್ರಾಹಕ, LPG ID ಸಂಖ್ಯೆ ನಮೂದಿಸಿ
  • ಆಧಾರ್ ಪರಿಶೀಲನೆ & OTP ಜನರೇಟ್‌ಗೆ ಸೂಚನೆ ಬಂದಾಗ OTP ರಚಿಸಿದ ಬಳಿಕ ಹೊಸ ಪುಟ ತೆರೆಯುತ್ತದೆ.
  • ಈಗ ಕಂಪನಿಯು ಕೇಳಿದ ಮಾಹಿತಿ ಪೂರೈಸಿ KYC ನವೀಕರಣ ಪ್ರಕ್ರಿಯೆ ಮುಗಿಸಬಹುದು.

ಇದನ್ನು ಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್, ದೇವದಾಸಿಯರ ಮಾಸಾಶನ ಹೆಚ್ಚಳ, ಶೇ.6ರ ಬಡ್ಡಿ ಸಹಾಯಧನ

ಕಳೆದ ವರ್ಷಾರಂಭದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದು ಗೊತ್ತೇ ಇದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ರಾಖಿ ಹಬ್ಬದಂದು ಮಹಿಳೆಯರಿಗೆ ಶುಭ ಸುದ್ದಿ ನೀಡಿದ್ದರು. ಗ್ಯಾಸ್ ಸಿಲಿಂಡರ್ ಬೆಲೆಯನ್ನು ರೂ. 200ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಇದರೊಂದಿಗೆ ರೂ. 1100 ಗೃಹಬಳಕೆಯ ಗ್ಯಾಸ್ ಸಿಲಿಂಡರ್ ದರ ರೂ. 900ಕ್ಕೆ ಕುಸಿದಿದೆ.

ಅದೇ ಸಮಯದಲ್ಲಿ, ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಸಬ್ಸಿಡಿಯನ್ನು ರೂ. 200 ರಿಂದ ರೂ. 300ಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ ಅವರಿಗೆ ಸಿಲಿಂಡರ್ ರೂ. 600 ಕೆ ಲಭ್ಯವಿದೆ. ತೈಲ ಕಂಪನಿಗಳು ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ದರವನ್ನು ಪರಿಷ್ಕರಿಸುತ್ತವೆ. ದೀರ್ಘಕಾಲದವರೆಗೆ, ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಗಳು ಮಾತ್ರ ಬದಲಾಗುತ್ತಿವೆ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version