Lok Sabha Election 2024: ಮಾದರಿ ನೀತಿ ಸಂಹಿತೆ ಎಂದರೇನು? ನೀತಿ ಸಂಹಿತೆ ಜಾರಿಯಾದ ನಂತರ ಏನಾಗುತ್ತದೆ?

Vijayaprabha

Lok Sabha Election 2024: ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಪ್ರಚಾರವನ್ನು ನಿಯಂತ್ರಿಸಲು ಚುನಾವಣಾ ಆಯೋಗವು ಹೊರಡಿಸಿದ ಮಾರ್ಗಸೂಚಿಗಳ ಒಂದು ಮಾದರಿ ನೀತಿ ಸಂಹಿತೆಯಾಗಿದೆ.

ಇದನ್ನು ಓದಿ: ಯಾವ ಜಿಲ್ಲೆಗಳಲ್ಲಿ ಯಾವಾಗ ಮತದಾನ? ಇಲ್ಲಿದೆ ಸಂಪೂರ್ಣ ಮಾಹಿತಿ

ಮತದಾರರ ಮೇಲೆ ಪ್ರಭಾವ ಬೀರುವ ಅಥವಾ ಮತದಾನ ಪ್ರಕ್ರಿಯೆಯನ್ನು ಅಡ್ಡಿಪಡಿಸುವ ಯಾವುದೇ ಚಟುವಟಿಕೆ ತಡೆಗಟ್ಟುವ ಮೂಲಕ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದು ಇದರ ಮುಖ್ಯ ಗುರಿಯಾಗಿದೆ. ಇದನ್ನು ಮೊದಲ ಬಾರಿ ಬಳಸಿದ್ದು 1960ರ ಕೇರಳ ವಿಧಾನಸಭೆ ಚುನಾವಣೆಯಲ್ಲಿ, ನಂತರ ಇದನ್ನು1962ರ ಲೋಕಸಭಾ ಚುನಾವಣೆ ವೇಳೆ ರಾಷ್ಟ್ರವ್ಯಾಪಿ ಪರಿಚಯಿಸಲಾಯಿತು.

Implementation of Model Code of Conduct for Lok Sabha Elections 2024

Lok Sabha Election 2024: ಮಾದರಿ ನೀತಿ ಸಂಹಿತೆಯ ಇತಿಹಾಸ..

ಯಾವುದೇ ಚುನಾವಣೆ ಘೋಷಣೆಯಾದ ನಂತರ ಮಾದರಿ ನೀತಿ ಸಂಹಿತೆ ಜಾರಿಯಾಗುತ್ತದೆ. 1960ರಲ್ಲಿ ಮೊದಲ ಬಾರಿಗೆ ಕೇರಳ ವಿಧಾನಸಭೆ ಚುನಾವಣೆ ವೇಳೆ ಮಾದರಿ ನೀತಿ ಸಂಹಿತೆ ಜಾರಿಗೆ ತರಲಾಗಿತ್ತು. ಇದು ಯಶಸ್ವಿಯಾದ ನಂತರ 1962ರ ಲೋಕಸಭೆ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಜಾರಿಗೆ ಬಂದಿತು.

ಇದನ್ನು ಓದಿ: ಯಾರಾಗಲಿದ್ದಾರೆ ಈ ಬಾರಿಯ ಚಾಂಪಿಯನ್? ಪುರುಷರಿಗಿಂತ ಮೊದಲು ಹೆಣ್ಮಕ್ಕಳಿಗೆಯೇ ಪ್ರಶಸ್ತಿ…!

1991ರ ಸಾರ್ವಜನಿಕ ಚುನಾವಣೆ ವೇಳೆ ಚುನಾವಣಾ ನಿಯಮಗಳ ಉಲ್ಲಂಘನೆ ಹಾಗೂ ಭ್ರಷ್ಟಾಚಾರ ಚಟುವಟಿಕೆಗಳ ಕಾರಣದಿಂದ ಮಾದರಿ ನೀರಿ ಸಂಹಿತೆಯನ್ನು ಮತ್ತಷ್ಟು ಕಠಿಣವಾಗಿ ಜಾರಿಗೆ ತರಲಾಗಿದೆ.

Lok Sabha Election 2024: ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಏನಾಗುತ್ತದೆ?

  • ಅಭ್ಯರ್ಥಿಗಳು ಹಣಕಾಸಿನ ಅನುದಾನ & ಭರವಸೆಗಳನ್ನು ಘೋಷಿಸುವಂತಿಲ್ಲ.
  • ಹೊಸ ಯೋಜನೆ ಪ್ರಾರಂಭ ಅಥವಾ ಅಡಿಗಲ್ಲು ಹಾಕುವಂತಿಲ್ಲ.
  • ಸರ್ಕಾರಿ/ಸಾರ್ವಜನಿಕ ಉದ್ಯಮಗಳಲ್ಲಿ ತಾತ್ಕಾಲಿಕ ನೇಮಕಾತಿ ನಿಷೇಧ.
  • ವಿವೇಚನಾ ನಿಧಿಯಿಂದ ಅನುದಾನ/ ಪಾವತಿ ಮಂಜೂರು ಮಾಡುವಂತಿಲ್ಲ.
  • ಪ್ರಚಾರಕ್ಕಾಗಿ ಸರ್ಕಾರಿ ಸಾರಿಗೆ, ಯಂತ್ರೋಪಕರಣ & ಭದ್ರತಾ ಸಿಬ್ಬಂದಿ ಸೇರಿ ಸಂಪನ್ಮೂಲಗಳ ಬಳಕೆಗೆ ನಿಷೇಧ.
  • ಸರ್ಕಾರಿ ವಸತಿ ಸೌಲಭ್ಯಗಳನ್ನು ಚುನಾವಣಾ ಉದ್ದೇಶಗಳಿಗಾಗಿ ಬಳಸಬಾರದು.
  • ದ್ವೇಷ ಭಾಷಣ ನಿಷೇಧ & ಪ್ರಚಾರಕ್ಕೆ ಮಕ್ಕಳ ಬಳಕೆ ನಿಷೇಧ.
  • ಮತದಾರರಿಗೆ ಆಮಿಷ & ಬೆದರಿಕೆ ಹಾಕುವಂತಿಲ್ಲ.

ಇದನ್ನು ಓದಿ: ಕೇಂದ್ರದಿಂದ ಗುಡ್ ನ್ಯೂಸ್.. ಇವರಿಗೆ ಭಾರೀ ಸಂಬಳ ಹೆಚ್ಚಳ ಸೇರಿದಂತೆ ಎರಡು ವರ್ಷದ ಬಾಕಿ ಕೂಡ ಸಿಗಲಿದೆ..!

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version