ರಾಯಚೂರು: ಯಾದಗಿರಿ ಜಿಲ್ಲೆಯ ಶೋರಾಪುರ ತಾಲ್ಲೂಕಿನ ತಿಂಥಾನಿ ಬಳಿ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಕೆಎಸ್ಆರ್‌ಟಿಸಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಐವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮೆಟ್ಟಮರಡಿದೊಡ್ಡಿ ಗ್ರಾಮದ ಆಂಜನೇಯ (35), ಗಂಗಮ್ಮ (28), ಹನಮಂತ (1.5), ಪವಿತ್ರಾ (5) ಮತ್ತು ರಾಯಪ್ಪ (3) ಎಂದು ಗುರುತಿಸಲಾಗಿದೆ. ಪವಿತ್ರ ಮತ್ತು ರಾಯಪ್ಪ ಆಂಜನೇಯ ಅವರ ಸಹೋದರನ ಮಕ್ಕಳಾಗಿದ್ದರು.
ಮೂಲಗಳ ಪ್ರಕಾರ, ಕುಟುಂಬವು ಶಹಾಪುರ ತಾಲ್ಲೂಕಿನ ಹಲಿಸಾಗರ್ನಿಂದ ಗುಡಗುಂಟಿಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಶೋರಾಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.