ಬೆಳಗಾವಿ: ನಗರದಲ್ಲಿ ಪತ್ನಿಯಿಂದಲೇ ಹತ್ಯೆಯಾದ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ಪದ್ಮನ್ನವರ ಹತ್ಯೆ ಪ್ರಕರಣ ಕುರಿತು ತನಿಖೆ ಕೈಗೊಂಡ ಪೊಲೀಸರು ಮನೆಯಲ್ಲಿದ್ದ 13 ಹಾರ್ಡ್ ಡಿಸ್ಕ್‌ಗಳನ್ನು ಜಪ್ತಿ ಮಾಡಿದ್ದು, ಅವುಗಳಲ್ಲಿ 100ಕ್ಕೂ ಅಧಿಕ ವಿಡಿಯೋಗಳು ಕಂಡುಬಂದಿವೆ.
ಬೆಳಗಾವಿಯಲ್ಲಿ ಅ.9ರಂದು ಮೃತಪಟ್ಟಿದ್ದ ಸಂತೋಷ ಸಾವಿನ ಕುರಿತು ಅನುಮಾನಗೊಂಡ ಮಗಳು ಠಾಣೆಗೆ ದೂರು ನೀಡಿದ್ದು, ಪೊಲೀಸ್ ತನಿಖೆಯಲ್ಲಿ ಉದ್ಯಮಿಯ ಪತ್ನಿ ಉಮಾ ಅವರೇ ತನ್ನ ಫೇಸ್ಬುಕ್ ಗೆಳೆಯರೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ವಿಚಾರಣೆ ವೇಳೆ ಪತಿಯ ಕಾಮಕಾಂಡವನ್ನು ಬಿಚ್ಚಿಟ್ಟ ಉಮಾ, ಹಾರ್ಡ್‌ಡಿಸ್ಕ್‌ಗಳ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲದೆ, ಮಕ್ಕಳ ಎದುರು ಸಂತೋಷ ಬೆತ್ತಲಾಗಿ ಓಡಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಉದ್ಯಮಿ ಸಂತೋಷ ಇತರ ಮಹಿಳೆಯರೊಂದಿಗೆ ಕಳೆದ ಖಾಸಗಿ ಕ್ಷಣವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಬಳಿಕ ಹಾರ್ಡ್‌ಡಿಸ್ಕ್‌ನಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಇಂಥ 100ಕ್ಕೂ ಅಧಿಕ ವಿಡಿಯೋಗಗಳು ಪತ್ತೆಯಾಗಿದ್ದು, ಸಂತೋಷ ನಿಜ ರೂಪ ತಿಳಿದು ಪೊಲೀಸರೇ ದಂಗಾಗಿದ್ದಾರೆ.
ಮನೆ ಪರಿಶೀಲಿಸಿದ ಪೊಲೀಸರು 13ಹಾರ್ಡ್ ಡಿಸ್ಕ್, ಮನೆಯ ಸಿಸಿಟಿವಿ ಡಿವಿಆರ್, ಮೂರು ಪೆನ್ ಡ್ರೈವ್ಗಳನ್ನು ವಶಕ್ಕೆ ಪಡೆದು, ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ.