ಬೆಳಗಾವಿ: ಯುವತಿಯೊಂದಿಗೆ ಮಾತನಾಡಿದ್ದಕ್ಕಾಗಿ ಆರು ಜನರ ಗುಂಪು ಅನ್ಯಸಮುದಾಯದ ಯುವಕನ ಮೇಲೆ ಹಲ್ಲೆ ನಡೆಸಿದ್ದು, ಬೆಳಗಾವಿ ಭಾಗದಲ್ಲಿ ಹೆಚ್ಚುತ್ತಿರುವ ನೈತಿಕ ಪೊಲೀಸ್ ದೌರ್ಜನ್ಯದ ಘಟನೆಯೊಂದು ಬೆಳಕಿಗೆ ಬಂದಿವೆ. ಹಲ್ಲೆಗೊಳಗಾದ ಯುವಕನನ್ನು ಅಲ್ಲಾವುದ್ದೀನ್ ಪೀರ್ಜಾದೆ ಎಂದು ಗುರುತಿಸಲಾಗಿದೆ.
ಹುಡುಗಿಯೊಬ್ಬಳೊಂದಿಗೆ ಮಾತನಾಡಿದ್ದಕ್ಕಾಗಿ ಆತನನ್ನು ಪ್ರಶ್ನಿಸಿದ ಯುವತಿ ಸಮುದಾಯದ ಯುವಕರ ಗುಂಪು ಪೊಲೀಸ್ ದೂರು ಅಥವಾ ಬಾಲಕಿಯ ಪೋಷಕರಿಗೆ ದೂರು ನೀಡುವ ಬದಲಿಗೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಪೊಲೀಸರ ಪ್ರಕಾರ, ಪೀರ್ಜಾದೆ ಹರಿದ ಬಟ್ಟೆಗಳನ್ನು ಧರಿಸಿ ಪೊಲೀಸ್ ಠಾಣೆಗೆ ಧಾವಿಸಿ ಹಲ್ಲೆ ನಡೆಸಿದ ಆರು ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಎಫ್ಐಆರ್ ನಂತರ ತ್ವರಿತವಾಗಿ ಕ್ರಮ ಕೈಗೊಂಡ ಪೊಲೀಸರು, ಸೋಮವಾರ ತಡರಾತ್ರಿ ಆರು ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಿದರು.
ಬಂಧಿತರನ್ನು ಸಾವಗಾಂವ್ ಮೂಲದ ಸಂತೋಷ್ ಜಾಧವ್, ಸುದೇಶ್ ಪಾಟೀಲ್ ಮತ್ತು ಅಂಗೋಲ್ ಪ್ರದೇಶದ ಸುಮಿತ್ ಮೋರೆ ಮತ್ತು ಜೈ ಇಂಚಲ್ ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.