U19 Womens T20 World Cup | ಇಂದಿನಿಂದ U-19 ಮಹಿಳಾ T20 ವಿಶ್ವಕಪ್

U19 Womens T20 World Cup : ಇಂದಿನಿಂದ 19 ವರ್ಷದೊಳಗಿನ U19 ಮಹಿಳಾ ಟಿ20 ವಿಶ್ವಕಪ್ ಮಲೇಷ್ಯಾದಲ್ಲಿ ಆರಂಭವಾಗಲಿದ್ದು, ಈ ಟೂರ್ನಿಯಲ್ಲಿ ಭಾರತ ಸೇರಿದಂತೆ 16 ತಂಡಗಳು ಬಾಗವಹಿಸಲಿದೆ. ಹೌದು, 16 ದಿನಗಳ…

U19 Womens T20 World Cup

U19 Womens T20 World Cup : ಇಂದಿನಿಂದ 19 ವರ್ಷದೊಳಗಿನ U19 ಮಹಿಳಾ ಟಿ20 ವಿಶ್ವಕಪ್ ಮಲೇಷ್ಯಾದಲ್ಲಿ ಆರಂಭವಾಗಲಿದ್ದು, ಈ ಟೂರ್ನಿಯಲ್ಲಿ ಭಾರತ ಸೇರಿದಂತೆ 16 ತಂಡಗಳು ಬಾಗವಹಿಸಲಿದೆ.

ಹೌದು, 16 ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಒಟ್ಟು 41 ಪಂದ್ಯಗಳು ನಡೆಯಲಿವೆ. 16 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಅಗ್ರ 3 ತಂಡಗಳು ಸೂಪರ್ ಸಿಕ್ಸ್‌ಗೆ ಅರ್ಹತೆ ಪಡೆಯಲಿವೆ. ಫೆ. 2ರಂದು ಫೈನಲ್ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಆಗಿರುವ ಭಾರತಕ್ಕೆ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಒತ್ತಡವಿದೆ.

ಇದನ್ನೂ ಓದಿ: WPL 2025 ಫೆಬ್ರವರಿ 14 ರಿಂದ ಪ್ರಾರಂಭ; ಈ ನಾಲ್ಕು ಸ್ಥಳಗಳಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಆಯೋಜನೆ

Vijayaprabha Mobile App free

U19 Womens T20 World Cup : 16 ತಂಡಗಳ 4 ಗುಂಪಿನ ವಿವರ

19 ವರ್ಷದೊಳಗಿನ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸುತ್ತಿರುವ 16 ತಂಡಗಳನ್ನು ತಲಾ 4 ತಂಡಗಳ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಮಲೇಷ್ಯಾ, ಶ್ರೀಲಂಕಾ & ವೆಸ್ಟ್ ಇಂಡೀಸ್ ತಂಡಗಳಿದ್ದರೆ, ಬಿ ಗುಂಪಿನಲ್ಲಿ ಇಂಗ್ಲೆಂಡ್, ಪಾಕಿಸ್ತಾನ, ಐರ್ಲೆಂಡ್ & ಅಮೇರಿಕಾ ತಂಡಗಳಿವೆ.

ಇನ್ನೂ, ಸಿ ಗುಂಪಿನಲ್ಲಿ ನೈಜೀರಿಯಾ, ದಕ್ಷಿಣ ಆಫ್ರಿಕಾ, ಸಮೋವಾ ಮತ್ತು ನ್ಯೂಜಿಲೆಂಡ್ ತಂಡಗಳಿದ್ದರೆ ಡಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಸ್ಕಾಟ್ಲೆಂಡ್, ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳಿವೆ.

ಇದನ್ನೂ ಓದಿ: ಡಿ. ಗುಕೇಶ್, ಮನು ಭಾಕರ್, ಹರ್ಮನ್ಪ್ರೀತ್ ಸಿಂಗ್, ಪ್ರವೀಣ್ ಕುಮಾರ್ ಅವರಿಗೆ ಖೇಲ್ ರತ್ನ ಪ್ರಶಸ್ತಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.