Varamahalakshmi: ಶ್ರಾವಣ ಮಾಸದಲ್ಲಿ ಮಹಿಳೆಯರ ನೆಚ್ಚಿನ ಹಬ್ಬ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬ ವರಮಹಾಲಕ್ಷ್ಮಿದಂದು ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟದ ದೇವತೆಯಾದ ಲಕ್ಷ್ಮಿ ದೇವಿಯನ್ನು ಭಕ್ತಿ ಶ್ರದ್ಧೆಯಿಂದ ಆರಾಧಿಸಲಾಗುತ್ತದೆ. ಈ ವರ್ಷದ ವರಮಹಾಲಕ್ಷ್ಮಿ ವ್ರತ ಯಾವಾಗ, ಪೂಜೆಯ ಮುಹೂರ್ತ ಮತ್ತು ಮಹತ್ವದ ಬಗ್ಗೆ ಮಾಹಿತಿ ಇಲ್ಲಿದೆ.
ವ್ರತ ಯಾವಾಗ
- ಈ ವರ್ಷ ವರಮಹಾಲಕ್ಷ್ಮಿ ವ್ರತವನ್ನು ಆಗಸ್ಟ್ 8 (ಇಂದು) ರಂದು ಆಚರಿಸಲಾಗುತ್ತದೆ.
- ತಾಯಿ ವರಮಹಾಲಕ್ಷ್ಮಿಯು ಭಗವಾನ್ ಶ್ರೀ ಹರಿ ವಿಷ್ಣುವಿನ ಪತ್ನಿ ಹಾಗೂ ಸಂಪತ್ತಿನ ಒಡತಿಯಾಗಿದ್ದಾಳೆ.
ಪೂಜಾ ಮುಹೂರ್ತಗಳು
- ಸಿಂಹ ಲಗ್ನ ಪೂಜೆ ಮುಹೂರ್ತ- ಬೆಳಿಗ್ಗೆ 06:29 ಬೆಳಿಗ್ಗೆ 08:46
- ಸಿಂಹ ಲಗ್ನ ಮುಹೂರ್ತ – ಬೆಳಿಗ್ಗೆ 06:29 ರಿಂದ ಬೆಳಗ್ಗೆ 08:46 ಇರುತ್ತದೆ
- ವೃಶ್ಚಿಕ ಲಗ್ನ ಮುಹೂರ್ತ- ಮಧ್ಯಾಹ್ನ 01:22 -ಮಧ್ಯಾಹ್ನ 03:41
- ಕುಂಭಾ ಲಗ್ನ ಮುಹೂರ್ತ- ಸಂಜೆ 07:27, ರಾತ್ರಿ 08:54
- ವೃಷಭ ಲಗ್ನ ಮುಹೂರ್ತ (ಮಧ್ಯರಾತ್ರಿ)- ರಾತ್ರಿ 11:55 – ಬೆಳಗ್ಗೆ 01:50, ಆಗಸ್ಟ್ 9
ಪೂಜಾ ಲಗ್ನ
ಸ್ಥಿರ ಲಗ್ನದಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸಲು ಉತ್ತಮ ಸಮಯ. ನಂಬಿಕೆಗಳ ಪ್ರಕಾರ, ಸ್ಥಿರ ಲಗ್ನದಲ್ಲಿ ಲಕ್ಷ್ಮಿದೇವಿಯನ್ನು ಪೂಜಿಸುವುದರಿಂದ ದೀರ್ಘಾವಧಿಯ ಸಮೃದ್ಧಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
ವ್ರತದ ಮಹತ್ವ
ಒಮ್ಮೆ ಶಿವ ಪಾರ್ವತಿಯರು ಏಕಾ೦ತದಲ್ಲಿ ಮಾತನಾಡುತ್ತಿದ್ದಾಗ ಈ ಜಗತ್ತಿನ ಉದ್ಧಾರಕ್ಕಾಗಿ ಯಾವ ವ್ರತ ಮಾಡಿದರೆ ಶ್ರೇಷ್ಠ ಎಂದು ಜಗಜ್ಜನನಿಯಾದ ಪಾರ್ವತಿ ಕೇಳುತ್ತಾಳೆ. ಆಗ ಸ್ವತಃ ಶಿವನು ವರಮಹಾಲಕ್ಷ್ಮೀ ವ್ರತವೇ ಅತ್ಯಂತ ಶ್ರೇಷ್ಠವಾದ ವ್ರತ ಎಂದು ತಿಳಿಸುತ್ತಾನೆ ಎಂದು ಹೇಳಲಾಗಿದೆ.
ಉಪವಾಸದ ಮಹಿಮೆ
ಈ ದಿನ ಉಪವಾಸವನ್ನು ಆಚರಿಸುವುದರಿಂದ ಮನೆಗೆ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಮತ್ತು ಕುಟುಂಬ ಸದಸ್ಯರಲ್ಲಿ ಪರಸ್ಪರ ಪ್ರೀತಿ ಉಳಿಯುತ್ತದೆ ಅನ್ನುವ ನಂಬಿಕೆಯಿದೆ.




