ಬೆಂಗಳೂರು: ಅಸ್ತಿತ್ವದಲ್ಲಿರುವ ಹಲವು ನಿಗಮಗಳನ್ನು ರದ್ದು ಮಾಡಿ 2 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ರದ್ದುಗೊಳಿಸುವ ತೀರ್ಮಾನವನ್ನು ಕಂದಾಯ ಸಚಿವರ ನೇತೃತ್ವದ ಸಂಪುಟ ಉಪ ಸಮಿತಿ ಕೈಗೊಂಡಿದೆ.
ಹೌದು, ವಿವಿಧ ಇಲಾಖೆಗಳ ವಿಲೀನ ಕುರಿತು ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷತೆಯ ಸಂಪುಟ ಉಪಸಮಿತಿ 3ನೇ ಸಭೆಯಲ್ಲಿ ಕೆಲವು ಇಲಾಖೆಗಳು, ನಿಗಮ, ಪ್ರಾಧಿಕಾರಗಳ ರದ್ಧತಿ ನಿರ್ಧಾರವನ್ನು ಸಭೆ ಕೈಗೊಂಡಿದ್ದು, ಶಿಫಾರಸಿನಲ್ಲಿ ಕೃಷಿ, ತೋಟಗಾರಿಕೆ & ರೇಷ್ಮೆ ಇಲಾಖೆಯನ್ನು ಒಂದೇ ಸಚಿವಾಲಯದ ಅಡಿಗೆ ತರಲು ಸಲಹೆ ನೀಡಲಾಗಿದೆ.
ಈ ಕುರಿತು ಮಾತನಾಡಿದ ಸಚಿವರು, ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆ ಇಲಾಖೆಯನ್ನು ಶಿಕ್ಷಣ ಇಲಾಖೆಯಲ್ಲಿ ವಿಲೀನಗೊಳಿಸಿ ಮುಂದುವರಿಸಲಾಗುವುದು. ಅನಗತ್ಯವಾಗಿರುವ ಹುದ್ದೆಗಳು ಇಲಾಖೆಗಳನ್ನು ವಿಲೀನಗೊಳಿಸುವುದು, ರದ್ದು ಮಾಡುವುದರ ಮೂಲಕ ಸರ್ಕಾರದ ಬೊಕ್ಕಸದ ಮೇಲಿನ ಹೊರೆ ತಗ್ಗಿಸುವ ಪ್ರಕ್ರಿಯಯಾಗಿದೆ ಎಂದರು.