Gas cylinder : ಗ್ಯಾಸ ಸಿಲಿಂಡರ್‌ನ ಸುರಕ್ಷಿತ ಬಳಕೆ ನಮ್ಮ ದಿನನಿತ್ಯದ ಕಾಯಕವಾಗಿದೆ. ಸರಿಯಾದ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳದೆ ಬಳಸಿದರೆ ಅಪಾಯ ಸಂಭವಿಸಬಹುದು. ಇದು ಕೇವಲ ನಿಮ್ಮ ಮನೆಯ ಸುರಕ್ಷತೆ ಮಾತ್ರವಲ್ಲ, ನಿಮ್ಮ ಕುಟುಂಬದ ರಕ್ಷಣೆಯಿಗೂ ಅನ್ವಯಿಸುವ ವಿಚಾರಗಳಾಗಿವೆ. ಹಾಗಾಗಿ ಇವುಗಳನ್ನು ತಪ್ಪದೇ ಪಾಲಿಸಿ.
ಸಿಲಿಂಡರ್‌ನ ಪರಿಶೀಲನೆ
ಗ್ಯಾಸ್ ಸಿಲಿಂಡರ್ ಲೀಕ್ ಆದರೆ ಅಪಾಯ ಸಂಭವಿಸಬಹುದು, ಆದ್ದರಿಂದ ಪ್ರತಿದಿನ ಬಳಕೆಗೆ ಮುನ್ನ ಪರೀಕ್ಷಿಸಿ.ಸಿಲಿಂಡರ್ ಮೇಲೆ ಇರುವ Validity Date ಚೆಕ್ ಮಾಡಿ, ಅವಧಿ ಮುಗಿದಿದ್ದರೆ ಹೊಸದನ್ನು ಪಡೆಯಿರಿ. ಸಿಲಿಂಡರ್ ಒಡೆದುಹೋಗಿದ್ದರೆ ಅಥವಾ ಬಿರುಕು ಕಂಡುಬಂದರೆ ತಕ್ಷಣವೇ ಗ್ಯಾಸ್ ವಿತರಕರಿಗೆ ಮಾಹಿತಿ ನೀಡಿ.
ರೆಗ್ಯೂಲೇಟರ್
ಗ್ಯಾಸ ಪೈಪ್ ಅನ್ನು 2 ವರ್ಷಕ್ಕೊಮ್ಮೆ ಬದಲಾಯಿಸಲು ಶಿಫಾರಸು ಮಾಡಲಾಗಿದೆ, ಜೊತೆಗೆ ರೆಗ್ಯುಲೇಟರ್ ಸರಿಯಾಗಿ ಲಾಕ್ ಆಗಿದೆಯೇ ಎಂದು ಪರೀಕ್ಷಿಸಿ, ಸಡಿಲವಾದರೆ ಲೀಕ್ ಸಂಭವಿಸಬಹುದು. ಈ ಹೋಸ್ ಅನ್ನು ಬಿಸಿ ಮೇಲ್ಕೆಗಳಿಗೆ ಹತ್ತಿರ ಇಡುವುದು ಅಪಾಯಕಾರಿಯಾಗಬಲ್ಲದು, ಸರಿಯಾಗಿ ವ್ಯವಸ್ಥೆ ಮಾಡಿಕೊಳ್ಳಿ.
ವಾಸನೆ ಗಮನಿಸಿ
ಗ್ಯಾಸ್ ನ ವಾಸನೆ ಬರುತ್ತಿದೆಯಾದರೆ ವಿದ್ಯುತ್ ಸ್ವಿಚ್ ಅಥವಾ ಲೈಟರ್ ಬಳಸಬೇಡಿ. ಸಿಲಿಂಡರ್‌ನ ಹತ್ತಿರ ಬೆಂಕಿ, ಧೂಮಪಾನ ಅಥವಾ ಸ್ಪಾರ್ಕ್ ತರುವ ಸಾಮಾನುಗಳನ್ನು ಇರಿಸಬೇಡಿ. ದೀಪ ಅಥವಾ ಬಟ್ಟೆ ಸುಡುವಂತಹ ವಸ್ತುಗಳು ಗ್ಯಾಸ್‌ನ ಹತ್ತಿರ ಇರದಂತೆ ನೋಡಿಕೊಳ್ಳಿ. ಗ್ಯಾಸ ಲೀಕ್ ಆಗಿದ್ದರೆ ತಕ್ಷಣವೇ ಕಿಟಕಿಗಳನ್ನು ತೆರೆಯಿರಿ ಮತ್ತು ಗ್ಯಾಸ್ ವಿತರಕರನ್ನು ಸಂಪರ್ಕಿಸಿ.
ಸಿಲಿಂಡರ್ ಎಲ್ಲಿಡಬೇಕು
ಸಿಲಿಂಡರ್ ಅನ್ನು ಸಮತಟ್ಟಾದ ನೆಲದಲ್ಲಿ, ನೇರವಾಗಿ ಇರಿಸಬೇಕು. ಹೆಚ್ಚು ಬಿಸಿಯಿರುವ ಸ್ಥಳದಲ್ಲಿ, ಉದಾಹರಣೆಗೆ ಸೌವ್ ಅಥವಾ ಕುಕ್ಕರ್ ಹತ್ತಿರ ಇರಿಸಬೇಡಿ. ಪ್ಲಾಸ್ಟಿಕ್ ವಸ್ತುಗಳು, ಬಟ್ಟೆ, ಅಥವಾ ಬೇರೆ ದಹನಶೀಲ ವಸ್ತುಗಳ ಹತ್ತಿರ ಇರಿಸಬೇಡಿ. ಗಾಳಿ ಸರಿಯಾಗಿ ಸುಳಿಯುವಂತೆ ನೋಡಿಕೊಳ್ಳಿ, ಕಿರಿದಾದ ಮತ್ತು ಇಕ್ಕಟ್ಟಿನ ಸ್ಥಳದಲ್ಲಿ ಗ್ಯಾಸ್ ಸಿಲಿಂಡರ್ ಇರಬಾರದು.
ಗ್ಯಾಸ್ ಆಫ್ ಮಾಡಿ
ಗ್ಯಾಸ್ ಬಳಸುವ ಮುನ್ನ ಮೊದಲು ಮ್ಯಾಚ್ ಸ್ಟಿಕ್ ಹಚ್ಚಿ, ನಂತರ ಗ್ಯಾಸ ಆನ್ ಮಾಡಿ. ಗ್ಯಾಸ ಬಳಸಿದ ನಂತರ ರೆಗ್ಯುಲೇಟರ್ ಆಫ್ ಮಾಡುವುದು ತುಂಬಾ ಮುಖ್ಯ. ಅಡುಗೆ ಮಾಡುವ ಸ್ಥಳದಲ್ಲಿ ಗಾಳಿಚಲಾವಣೆ ಇರಬೇಕು, ಇಲ್ಲದಿದ್ದರೆ ಶ್ವಾಸಕೋಶ ಸಮಸ್ಯೆ ಉಂಟಾಗಬಹುದು. ಅಗತ್ಯವಿಲ್ಲದಿದ್ದರೆ ಮತ್ತು ಮನೆಯಿಂದ ಹೊರ ಹೀಗುವಾಗ ಗ್ಯಾಸ್ ಆಫ್ ಮಾಡುವುದು ಉತ್ತಮ.