ಬೆಂಗಳೂರು: ನಾಲಿಗೆಯ ಮೇಲೆ ನಿಯಂತ್ರಣ ಇಲ್ಲದ ವ್ಯಕ್ತಿ, ಕಲಾಪದಲ್ಲೇ ಮಹಿಳೆಯರ ಬಗ್ಗೆ ʼಕೊಳಕುʼ ಕಕ್ಕಿದ ಆಸಾಮಿ ಎಂದು ರಮೇಶ್ ಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರು ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಸಂವಿಧಾನದ 4ನೇ ಅಂಗ ಮಾಧ್ಯಮ ಎನ್ನುವುದು ಸ್ವಯಂ ಘೋಷಿತ ಸಂವಿಧಾನ ಪಂಡಿತರಿಗೆ ಗೊತ್ತಿಲ್ಲದಿರುವುದು ವಿಪರ್ಯಾಸ.
ನಾಲಿಗೆಯ ಮೇಲೆ ನಿಯಂತ್ರಣ ಇಲ್ಲದ ವ್ಯಕ್ತಿ, ಕಲಾಪದಲ್ಲೇ ಮಹಿಳೆಯರ ಬಗ್ಗೆ ʼಕೊಳಕುʼ ಕಕ್ಕಿದ ಆಸಾಮಿ, ಸ್ವಾತಂತ್ರೋದ್ಯಾನದಲ್ಲಿ ನಾಯಕರ ಸಾಕ್ಷಿಯಾಗಿ 3-4 ತಲೆಮಾರುಗಳಿಗಾಗುವಷ್ಟು ಲೂಟಿ ಹೊಡೆದ ಲೆಕ್ಕ ಕೊಟ್ಟ ವ್ಯಕ್ತಿಯ ಅಸಲಿರೂಪ ಅನಾವರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರು ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ.
ಸಂವಿಧಾನದ 4ನೇ ಅಂಗ ಮಾಧ್ಯಮ ಎನ್ನುವುದು ಸ್ವಯಂ ಘೋಷಿತ ಸಂವಿಧಾನ ಪಂಡಿತರಿಗೆ ಗೊತ್ತಿಲ್ಲದಿರುವುದು ವಿಪರ್ಯಾಸ.1/2 pic.twitter.com/FekTDrlHi2
— H D Kumaraswamy (@hd_kumaraswamy) July 30, 2022