ಕೊಯಮತ್ತೂರು: ಮಗಳ ಸಹಿತ ದಂಪತಿಯೋರ್ವರು ಸೇಲಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಸೇಲಂನ ಅರಿಸಿಪಾಳಯಂ ನಿವಾಸಿ ಪೌಲ್ರಾಜ್ (45), ಆತನ ಪತ್ನಿ ರೇಖಾ (35) ಮತ್ತು 11ನೇ ತರಗತಿ ವಿದ್ಯಾರ್ಥಿನಿಯಾಗಿರುವ ಅವರ ಮಗಳು ಜನನಿ (15) ಎಂದು ಗುರುತಿಸಲಾಗಿದೆ.
ನೆರೆಹೊರೆಯವರು ಮತ್ತು ಸಂಬಂಧಿಕರಿಗೆ ಕುಟುಂಬಸ್ಥರ ಇರುವಿಕೆ ಕಂಡುಬಂದಿಲ್ಲವಾಗಿದ್ದು, ಯಾರದೂ ಮಾತುಗಳು ಸಹ ಕೇಳಿಬಂದಿರಲಿಲ್ಲ. ಹೀಗಾಗಿ ಪಲ್ಲಪಟ್ಟಿ ಪೊಲೀಸರಿಗೆ ಮಾಹಿತಿ ನೀಡಿದರು. ಅವರು ಸ್ಥಳಕ್ಕೆ ಮನೆಯ ಮೊದಲ ಮಹಡಿಯ ಪ್ರವೇಶದ್ವಾರವನ್ನು ಒಡೆದು ನೋಡಿದಾಗ ಮೂವರೂ ಸತ್ತಿರುವುದು ಕಂಡುಬಂದಿತು. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸೇಲಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಪೌಲ್ರಾಜ್ ತನ್ನ ಮನೆ ನಿರ್ಮಿಸಲು ಮತ್ತು ವ್ಯವಹಾರವನ್ನು ಪ್ರಾರಂಭಿಸಲು ಬ್ಯಾಂಕ್ ಮತ್ತು ಖಾಸಗಿ ವ್ಯಕ್ತಿಯಿಂದ ಸುಮಾರು 30 ಲಕ್ಷ ರೂಪಾಯಿ ಸಾಲ ಪಡೆದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಲು ದಂಪತಿಗೆ ಸಾಧ್ಯವಾಗಲಿಲ್ಲ.
ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಪಲ್ಲಪಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.